ಬಳ್ಳಾರಿ

ಯುವತಿ ಕಾಣೆ: ಪ್ರಕರಣ ದಾಖಲು

ಯುವತಿ ಕಾಣೆ: ಪ್ರಕರಣ ದಾಖಲು

ಬಳ್ಳಾರಿ 19: ಸಿರುಗುಪ್ಪ ಪೊಲೀಸ್ ಠಾಣೆಯ  ವ್ಯಾಪ್ತಿಯ ಚಾಣಕ್ಯನೂರು ಗ್ರಾಮದ 19 ವರ್ಷದ ಅಂಬಿಕಾ ಎನ್ನುವ ಯುವತಿ ಮೇ 16ರಂದು ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ ಎಂದು ಸಿರುಗುಪ್ಪ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಕಾಣೆಯಾದ ಯುವತಿಯ ಚಹರೆ ಗುರುತು:  ಸಾಧಾರಣ ಮೈಕಟ್ಟು,  ಎಣ್ಣೆಗೆಂಪು ಮೈಬಣ್ಣ,  ದುಂಡು ಮುಖ, 5.0 ಅಡಿ ಎತ್ತರ, ಕನ್ನಡ, ತೆಲುಗು ಭಾಷೆ ಮಾತನಾಡುತ್ತಾಳೆ. ನೀಲಿ ಬಣ್ಣದ ಟಾಪ್ ಮತ್ತು ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ. ಕಾಣೆಯಾದ ಯುವತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಸಿರುಗುಪ್ಪ ಪೊಲೀಸ್ ಠಾಣೆಯ ಪಿ.ಎಸ್.ಐ.  ದೂ.08396- 220333, ಸಿ.ಪಿ.ಐ. ಸಿರುಗುಪ್ಪ ದೂ. 08396- 220003, ಡಿ.ಎಸ್.ಪಿ. ಗ್ರಾಮೀಣ ಉಪ-ವಿಭಾಗ ದೂ. 08392- 276000, ಎಸ್.ಪಿ.ಬಳ್ಳಾರಿ ದೂ. 08932- 258400ಗೆ ಸಂಪಕರ್ಿಸಬಹುದು ಎಂದು ಅವರು ತಿಳಿಸಿದ್ದಾರೆ

ಸುದ್ದಿ ಓದಿ