ಮುದ್ದೆಬಿಹಾಲ್

ಯರಗಲ್ಲ್‌ ಸಕ್ಕರೆ ಕಾರ್ಖಾನೆಗೂ ನನಗೂ ಯಾವುದೇ ಸಂಬಂಧವಿಲ್ಲ; ಶಾಸಕ ನಾಡಗೌಡ

ಯರಗಲ್ಲ್‌ ಸಕ್ಕರೆ ಕಾರ್ಖಾನೆಗೂ ನನಗೂ ಯಾವುದೇ ಸಂಬಂಧವಿಲ್ಲ; ಶಾಸಕ ನಾಡಗೌಡ

ಮುದ್ದೇಬಿಹಾಳ, 08 : ತಾಲೂಕಿನಿಂದ ಅಬ್ಬಿಹಾಳ ಗಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯನ್ನು ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಹಾಗೂ ಶಾಸಕರಾದ ಸಿ.ಎಸ್ ನಾಡಗೌಡ ಅವರು ಲೋಕಾರೆ​‍್ಣ ಮಾಡಿದರು. ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ಜಿಲ್ಲಾ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆ ವತಿಯಿಂದ ಸುಮಾರು 1.5 ಕೋಟಿ ರೂ ವೆಚ್ಚದಲ್ಲಿ ಅಬ್ಬಿಹಾಳ ಗ್ರಾಮದ ಬಹುದಿನಗಳ ಕನಸು ನನಸಾಗಿದೆ. ಈ ಸೇತುವೆಯನ್ನು ನಿಮ್ಮ ವಸ್ತು ಎಂದುಕೊಂಡು ಕಾಪಾಡಿಕೊಂಡು ಹೋಗಬೇಕೆಂದರು.ಈ ಸಂದರ್ಭದಲ್ಲಿ ರೈತರ ಕಬ್ಬು ಬೆಲೆ ನಿಗದಿ ಬಗ್ಗೆ ಮಾತನಾಡಿದ ಸಿ.ಎಸ್ ನಾಡಗೌಡರು, 3500 ರೂ ನೀಡಬೇಕು ಎನ್ನುವುದು ನನ್ನ ಆಶೆಯುವಿದೆ. ಕೇಂದ್ರ ಸರ್ಕಾರವು 2025ರ ಸಾಲಿಗೆ ಶೇ 12.5ರಷ್ಟು ಇಳುವರಿ ಇರುವ ಟನ್ ಕಬ್ಬಿಗೆ 3,550 ರೂ ನಿಗದಿ ಮಾಡಿದೆ. ಆದರೆ ನಮ್ಮ ಮುದ್ದೇಬಿಹಾಳ ಮತಕ್ಷೇತ್ರ ಸುತ್ತಮುತ್ತ ಸುಮಾರು 9 ರಷ್ಟು ರಿಕವರಿ ಇದೆ. ಹೀಗಾಗಿ ಕಾರ್ಖಾನೆ ಮಾಲೀಕರು ಕಬ್ಬು ಬೆಲೆಯ ದರ ಹೆಚ್ಚಿಸಲು ಹಿಂದೇಟು ಹಾಕುತ್ತಿದ್ದಾರೆ. ಕೃಷ್ಣಾ ನದಿ ಮೇಲೆ ಪ್ರದೇಶಗಳು ಕಬ್ಬಿನ ರಿಕವರಿ ಜಾಸ್ತಿ ಇದೆ. ಕೃಷ್ಣಾ ನದಿ ಕೆಳ ಪ್ರದೇಶಗಳಲ್ಲಿ ಕಬ್ಬಿನ ಇಳುವರಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಉಪ್ಪಿನ ಅಂಶವಿದೆ. ಹೀಗಾಗಿ ಸಕ್ಕರೆ ಅಂಶ ಕಡಿಮೆ ಬರುತ್ತದೆ. ಕಾರ್ಖಾನೆಗಳಲ್ಲಿ ಅರೆದ ಕಬ್ಬಿನಿಂದ ಉತ್ಪಾದನೆಯಾದ ಸಕ್ಕರೆಯ ಆಧಾರದಲ್ಲಿ ಎಫ್‌ಆರಿ​‍್ಪ ನಿಗದಿಪಡಿಸಲಾಗುತ್ತದೆ. ಮಹಾರಾಷ್ಟ್ರದಲ್ಲಿ ನೀಡುವ ಬೆಲೆ ನೀಡಿ ಎಂದರೆ ಅದೇಗೆ ನೀಡ್ತಾರೆ ಎಂದರು. ಎಫ್‌.ಆರಿ​‍್ಪ ದರ ನಿಗದಿಯನ್ನು ಕೇಂದ್ರ ಸರ್ಕಾರ ಮಾಡಿದೆ. ರಾಜ್ಯ ಸರ್ಕಾರ ಇದರಲ್ಲಿ ಭಾಗಿಯಾಗಿಲ್ಲ. ರೈತರು, ಜಿಲ್ಲಾಧಿಕಾರಿ ಹಾಗೂ ಕಾರ್ಖಾನೆ ಅಧಿಕಾರಿಗಳ ಮತ್ತು ವಿಶ್ವವಿದ್ಯಾಲಯದ ಅಧಿಕಾರಿಗಳ ಸಮ್ಮುಖದಲ್ಲಿಯೇ ಕಬ್ಬಿನ ಬೆಲೆ ದರವನ್ನು ನಿಗದಿ ಮಾಡಲಾಗುತ್ತದೆ. ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಬ್ಬು ದರ ನಿಗದಿ ಬಗ್ಗೆ ಸಭೆ ನಡೆಯುತ್ತಿದ್ದು ಅವರು ತೀರ್ಮಾನ ಕೈಗೊಳ್ಳುತ್ತಾರೆ. ಈಗಾಗಲೇ ಹಿಂದೊಮ್ಮೆ ಸಿದ್ದರಾಮಯ್ಯ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ರೈತರಿಗೆ ಬೆಂಬಲ ಬೆಲೆ ನೀಡಿದೆ. ಆ ಸಂದರ್ಭದಲ್ಲಿ ಸರ್ಕಾರದ ಮೇಲೆ ಸಂಪೂರ್ಣ ಹೊರೆಯಾಯಿತು. ಆಗ ಕೇಂದ್ರ ಸರ್ಕಾರಕ್ಕೆ ಕಬ್ಬು ಎಫ್‌ಆರ​‍್ಿ ಮರು ಬೆಲೆ ನಿಗದಿ ಮಾಡಿ ಬೆಲೆ ಹೆಚ್ಚಿಸಿ ಎಂದು ಪ್ರಧಾನ ಮಂತ್ರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಲಿಲ್ಲ.ನಾನು ಕೂಡ ರೈತ ಕುಟುಂಬದಿಂದ ಬಂದವನು. ರೈತನೂ ಕೂಡ, ಕಳೆದ ಮೂರು ದಿನದಿಂದ ಸಾವಿರಾರು ಟ್ರ್ಯಕ್ಟರ್ ಗಳು ತಂಗಡಗಿ ಗ್ರಾಮದ ಸಮೀಪ ನಿಂತಿವೆ. ರೈತರು ಕಾರ್ಖಾನೆ ಮಾಲೀಕರಿಗೆ ಒಪ್ಪಿಸಿ ಮುಂದಿನ ದಿನಗಳಲ್ಲಿ ಕಬ್ಬು ಬೆಲೆ ದರ ಹೆಚ್ಚಳ ಮಾಡಿದರೆ ಈ ದಿನಾಂಕದಿಂದ ರೈತರಿಗೆ ಅದೇ ಬೆಲೆ ಹಾಕಿ ಕೋಡಬೇಕು ಎಂದೇಳಿ ಕಬ್ಬು ಸಾಗಾಣಿಕೆ ಮಾಡಿದರೆ, ರೈತರಿಗೆ ನಷ್ಟ ಆಗುವುದಿಲ್ಲ. ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಬಾಲಾಜಿ ಸಕ್ಕರೆ ಕಾರ್ಖಾನೆ ಇದೆ ಎನ್ನುವುದು ಬಿಟ್ಟರೆ ನನಗೂ ಯರಗಲ್ಲ್‌ ಸಕ್ಕರೆ ಕಾರ್ಖಾನೆಗೂ ಯಾವುದೇ ಸಂಬಂಧವಿಲ್ಲ. ಬಾಲಾಜಿ ಸಕ್ಕರೆ ಕಾರ್ಖಾನೆ ರೈತರಿಂದ 100 ರೂ ಗೊಬ್ಬರಕ್ಕಾಗಿ ಕಡಿತ ಮಾಡುತ್ತಿರುವ ಬಗ್ಗೆ ಪರೀಶೀಲನೆ ಮಾಡಲಾಗುವುದು ಎಂದು ಸಿ.ಎಸ್ ನಾಡಗೌಡ ಅವರು ಹೇಳಿದರು. 


ಸುದ್ದಿ ಓದಿ