ಮಹಾತ್ಮಾರ ಚರಿತ್ರೆ ಆಲಿಕೆಯಿಂದ ಮಾನಸಿಕ ನೆಮ್ಮದಿ
ಮಹಾತ್ಮಾರ ಚರಿತ್ರೆ ಆಲಿಕೆಯಿಂದ ಮಾನಸಿಕ ನೆಮ್ಮದಿ
ಮಹಾಲಿಂಗಪುರ 28: ಮನುಷ್ಯ ಯಾವುದೇ ವಿಷಯದಲ್ಲಿ ಅನುಭವವಿಲ್ಲ ಅಂದರೆ ಆ ವ್ಯಕ್ತಿಗೆ ಗೌರವ ಕಡಿಮೆ ಸಿಗುತ್ತದೆ, ಜಗತ್ತಿನಲ್ಲಿ ಅನುಭವಕ್ಕೆ ಇರುವ ಬೆಲೆ ಬೇರೆ ಯಾವುದಕ್ಕೆ ಇಲ್ಲ ಯಾವುದೇ ನೌಕರಿಗೆ ಅರ್ಜಿ ಕರೆದರು ಇಷ್ಟು ವರ್ಷಗಳ ಅನುಭವ ಇರುವವರಿಗೆ ಆದತ್ತೆ ಕೊಡಲಾಗುವದು ಎಂದು ನಮೂದಿಸಿರುತ್ತಾರೆ. ಅದಕ್ಕೆ ಮಹಾತ್ಮರು ಅನುಭವಿಗಳು ಹೇಳುವುದು ಒಂದೇ ಮಾತು ಅನುಭವ ಇರುವಲ್ಲಿ ಅಮೃತ ಇರುತ್ತದೆ, ಮನುಷ್ಯ ಮಾನಸಿಕ ನೆಮ್ಮದಿ ಕಂಡುಕೊಳಲು ಸಾಧ್ಯ ಎಂದು ಜೋಕಾನಟ್ಟಿಯ ಯೋಗಿಸಿದ್ದೇಶ್ವರ ಮಠದ ಬಿಳಿಯಾನಿಸಿದ್ದ ಸ್ವಾಮಿಗಳು ಹೇಳಿದರು.
ನಗರದ ಅಪಾರ ಭಕ್ತರ ಆರಾಧ್ಯ ದೈವ ಕರಿಸಿದ್ದೇಶ್ವರ ದೇವಸ್ಥಾನದ ಜಾತ್ರೆ ನಿಮಿತ್ಯವಾಗಿ ದೇವಸ್ಥಾನದಲ್ಲಿ ನಡೆಯುತ್ತಿರುವ ಐದು ದಿನಗಳ ಪ್ರವಚನದಲ್ಲಿ ಮುಖ್ಯ ಪ್ರವಚನಕಾರರಾಗಿ ಭಾಗವಹಿಸಿ ಅಮೃತ ಉಪದೇಶ ನೀಡಿ ಮಾತನಾಡಿ ಮನುಷ್ಯ ನೆಮ್ಮದಿ ಗಳಿಸಿಕೊಳಲು ಹಲವು ವಿಧ ಹಲವು ದಾರಿ ಹುಡುಕುತ್ತಲೇ ಇರುತ್ತಾನೆ, ಮನುಷನಿಗೆ ತಾನು ಮಾಡುವ ಯಾವದೇ ಕೆಲಸ ಮಾಡಬೇಕಾದರೆ ಅದಕ್ಕೆ ದೇವರ ಅನುಗ್ರಹ ಬಹಳ ಮುಖ್ಯ, ಅನುಗ್ರಹ ಪಡೆಯಲು ಅನುಭಾವಿಗಳ ಮಹಾತ್ಮರ ಮಾತುಗಳನ್ನು ಕೇಳುವದು ಮಹಾತ್ಮರ ನಾಮ ಸ್ಮರಣೆ ಮಾಡುವುದರಿಂದ ಚರಿತ್ರೆ ಕೇಳುವುದರಿಂದ ನೆಮ್ಮದಿ, ಸುಖ, ಶಾಂತಿ ಹೊಂದಲು ಸಾಧ್ಯ ಕರಿಸಿದ್ದೇಶ್ವರ, ಅಮೋಘಸಿದ್ದೇಶ್ವರ, ಮಾಳಿಂಗರಾಯ, ಮಹಾಲಿಂಗೇಶ್ವರರು ಇನ್ನೂ ಅನೇಕ ಮಹಾಪುರುಷರು ಚರಿತ್ರೆಗಳು ಮನುಕುಲಕ್ಕೆ ಬೆಳಕನ್ನು ಚೆಲ್ಲಿವೆ.ಕರಿಸಿದ್ದೇಶ್ವರರು ಸಾಕ್ಷಾತ್ ಶಿವ ಪಾರ್ವತಿಯ ಕ್ರಪಾರ್ಶಿವಾದದಿಂದ ಶಿವನ ಅವತಾರವೇತ್ತಿ ಭೂಲೋಕಕ್ಕೆ ಬಂದು ಭಕ್ತರನ್ನು ಉದ್ಧರಿಸುತ್ತಿದ್ದಾರೆ ಎಂದರು.
ಪ್ರಾಸ್ತವಿಕವಾಗಿ ಮಾತನಾಡಿದ ಯುವ ವಾಗ್ಮಿ ಮಹೇಶ ಇಟಕನ್ನವರ ಶಾಂತಿಯನ್ನು ಹುಡುಕಿಕೊಂಡು ಎಲ್ಲೆಲೋ ಹೋಗುವ ಮನುಷ್ಯ ಮಾನಸಿಕ ನೆಮ್ಮದಿ ಇಲ್ಲ ಅಂದರೆ ಬದುಕು ಕಷ್ಟ ಅನಿಸುತ್ತದೆ, ಆಗ ಅವನಿಗೆ ಅನುಭವ ತರಬೇತಿ ಬೇಕು ಬದುಕಿಗೆ ನೆಮ್ಮದಿ ಸಮಾಧಾನ ಬೇಕೆಂದರೆ ಮಾನಸಿಕ ಸುಖ ,ಶಾಂತಿ,ತೃಪ್ತಿ, ಸಮಾಧಾನ ಮುಖ್ಯ ಆದರೆ ಇವು ಎಲ್ಲವೂಕ್ಕೂ ನಿರ್ಮಲ ಭಕ್ತಿ ಮುಖ್ಯವಾಗಿ ಬೇಕು ಅದು ಸಿಗುವ ಏಕೈಕ ಸ್ಥಳ ಅಂದರೆ ಅದು ಮಹಾತ್ಮರ ಸನ್ನಿದಾನ ಮತ್ತು ನಾಮ ಸ್ಮರಣೆಯಿಂದ ಮಾತ್ರ ಸಾಧ್ಯ. ಆದ್ದರಿಂದ ಪ್ರತಿಯೊಬ್ಬರೂ ಒಂದಿಲ್ಲಾ ಒಂದು ಸತ್ಸಂಗದಲ್ಲಿ ಭಾಗವಹಿಸಿ ಮಾನಸಿಕ ನೆಮ್ಮದಿ ಕಂಡುಕೊಳಬಹುದು. ನಿರಂತರ ಸತ್ಸಂಗದಲ್ಲಿ ಭಾಗವಹಿಸಿ ಕಂಡುಕೊಳ್ಳಬಹುದು ಶಾಂತಿ ಸಮಾಧಾನ ಅನುಭವಗಳು ಅಮೃತಕ್ಕೆ ಸಮ ಎಂದರು.
ನಂತರ ಮಾತನಾಡಿದ ಕಾಡಮ್ಮಗಿರಿಯ ಅವದೂತಸಿದ್ದ ವಿಶೇಷ ಆವ್ಹಾನಿತರಾಗಿ ಆಗಮಿಸಿ ಸಾನಿಧ್ಯ ವಹಿಸಿ ಮಾತನಾಡಿ ಅದ್ವೈತದ ಸಾರ್ವಭೌಮ ಆದಿ ಗುರು ಶಂಕರಾಚಾರ್ಯರು ಅದ್ವೈತ ವೇದಾಂತದ ಸಿದ್ದಾಂತವನ್ನು ಕ್ರೋಢಿಕರಿಸಿದ ಭಾರತೀಯ ತತ್ವಜ್ಞಾನಿ ಮತ್ತು ದೇವತಾಶಾಸ್ತ್ರಜ್ಞರಾಗಿದ್ದರು. ವಿಭಿನ್ನ ವ್ಯಾಪಾಕವಾಗಿ ವೈವಿಧ್ಯಮಯ ಪ್ರಯಾಣಗಳು, ತೀರ್ಥಯಾತ್ರೆಗಳನ್ನು ಮಾಡಿ ಅನೇಕ ಕಡೆ ಶಕ್ತಿ ಪೀಠಗಳನ್ನು (ಲಿಂಗಗಳನ್ನು) ಸ್ಥಾಪನೆ ಮಾಡಿ ಉತ್ತರ, ಪೂರ್ವ, ಪಶ್ಚಿಮ ಮತ್ತು ದಕ್ಷಿಣ ಭಾರತದಲ್ಲಿ ಸನ್ಯಾಸಿಗಳ ಕೇಂದ್ರಗಳನ್ನು ಸ್ಥಾಪಿಸಿ ಭಾರತವನ್ನು ಅಧ್ಯಾತ್ಮ ಕ್ಷೇತ್ರದ ವಿಶ್ವದ ಅಧಿಪತಿಯನ್ನಾಗಿ ಮಾಡಿದರು. ಅವರು ಸ್ಥಾಪಿಸಿದ ನಾಲ್ಕು ಮಠಗಳು ಹಿಂದೂ ಧರ್ಮವನ್ನು ಸುಧಾರಿಸುವಲ್ಲಿ ಮಹತ್ತರವಾದ ಪ್ರಭಾವವನ್ನು ಬೀರಿವೆ.
ಮಹಾತ್ಮರ ಸತ್ಸಂಗಗಳಿಂದ ನಿಜವಾಗಿಲು ಪ್ರತಿಯೊಬ್ಬರೂ ನೆಮ್ಮದಿ ಸಮಾಧಾನ ಕಂಡುಕೊಳ್ಳುಬಹುದು, ಮಾನಸಿಕ ಒತ್ತಡ ಮುಕ್ತಾನಾಗಲು ಸತ್ಸಂಗದಲ್ಲಿ ಭಾಗವಹಿಸಿದರೆ ಸಾಕು ಮಾನಸಿಕ ಒತ್ತಡಗಳು ಕಡಿಮೆಯಾಗಿ ಸಮಾಧಾನ ನೆಮ್ಮದಿ ದೊರೆಯುತ್ತದೆ ಎಂದರು.
ಸತ್ಯಪ್ಪ ಹುದ್ದಾರ, ಸೂರ್ಪ ಮುಂಡಗನೂರ, ಚಂದ್ರ್ಪ ಡೋಣಿ, ಶ್ರೀಕಾಂತ ಮುದೇಗೋಳ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಮುಖಂಡರಾದ, ಮಹಾಲಿಂಗಪ್ಪ ಜಕ್ಕಣ್ಣವರ, ಗಬಗಾಧರ ಮೇಟಿ, ಮಹಾಲಿಂಗಪ್ಪ ಬಾಡಗಿ ಕಲ್ಲಪ್ಪ ಚಿಂಚಲಿ, ಯಲ್ಲಣ್ಣಗೌಡ ಪಾಟೀಲ, ಬಸವರಾಜ್ ಮೇಟಿ, ಮಹಾಲಿಂಗ ಹೊಸೂರ, ಕರೆಪ್ಪ ಮೇಟಿ, ಜೊತೆಪ್ಪ ಕಪರಟ್ಟಿ, ಪರಶು ಕೊಣ್ಣೂರ, ಹಣಮಂತ ಸಂಶಿ, ಹಣಮಂತ ಅವಟಗಿ, ಭರಮಪ್ಪ ಅವಟಗಿ, ಕರೆಪ್ಪ ಪೂಜೇರಿ, ಶ್ರೀಶೈಲ್ ಅವಟಗಿ,ಮುತ್ತು ದಿವಾನ, ಪರಶು ಬಂಡಿ, ಯಲ್ಲಪ್ಪ ಪಟ್ಟಣಕೋಡಿ, ಈರ್ಪ ಜಕ್ಕಣ್ಣವರ, ವಿಠಲ ಬನಾಜ, ಮಲ್ಲನಗೌಡ ಪಾಟೀಲ, ಸುರೇಶ ಲಾತುರ, ಅರ್ಜುನ್ ಮೇಟಿ, ನಿಂಗಪ್ಪ ಅವಟಿ, ಮಹಾಲಿಂಗ ಅವಟಿ, ಮಲ್ಲಿಕಾರ್ಜುನ ಬನಹಟ್ಟಿ ವಿಜಯ್ ಸಂಶಿ ಸೇರಿ ಹಲವರು ಇದ್ದರು.
ಹಲವು ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಲಕ್ಷ್ಮಣ ಕಿಶೋರ ನಿರೂಪಿಸಿ ವಂದಿಸಿದರು. ಶ್ರೀಕಾಂತ್ ಮುದೇಗೋಳ ಮಹಾಪ್ರಸಾದ ವ್ಯವಸ್ಥೆ ಮಾಡಿದರು.