ಮಹಲಿಂಗಪುರ

ಮೌ.ಅಬುಲ್ ಕಲಾಂ ಅಜಾದ್, ಟಿಪ್ಪು ಸುಲ್ತಾನ್ ಜಯಂತ್ಯೋತ್ಸವ

ಮೌ.ಅಬುಲ್ ಕಲಾಂ ಅಜಾದ್, ಟಿಪ್ಪು ಸುಲ್ತಾನ್ ಜಯಂತ್ಯೋತ್ಸವ

ಮೌ.ಅಬುಲ್ ಕಲಾಂ ಅಜಾದ್, ಟಿಪ್ಪು ಸುಲ್ತಾನ್ ಜಯಂತ್ಯೋತ್ಸವ  

ಮಹಾಲಿಂಗಪುರ 12: ಭಾರತ ರತ್ನ ಮೌ. ಅಬುಲ್ ಕಲಾಂ ಅಜಾದ್ ಅಂದು ದೇಶಕ್ಕೆ ಅಗತ್ಯವಿರುವ ಉತ್ತಮ ಶಿಕ್ಷಣದ ಚಿಂತನೆ ಮೂಲಕ ದೇಶವನ್ನು ಪ್ರಗತಿಯತ್ತ ಒಯ್ಯಬಹುದು ಎಂದು ತೋರಿಸಿಕೊಟ್ಟು ಶಿಕ್ಷಣ ಪ್ರೇಮಿಗಳೆನಿಸಿದವರಲ್ಲಿ ಅಗ್ರಗಣ್ಯರು ಎಂದು ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ್ ಹೇಳಿದರು. 

ಸೋಮವಾರ ಉಸ್ಮಾನಿಯಾ ಮಸ್ಜೀದ ಹತ್ತಿರ ಟಿಪ್ಪು ಸುಲ್ತಾನ್ ಸಂಘರ್ಷ ಸಮಿತಿ ಏರಿ​‍್ಡಸಿದ ಭಾರತ ರತ್ನ ಅಬುಲ್ ಕಲಾಂ ಅಜಾದ್ ಹಾಗೂ ಹಜರತ್ ಟಿಪ್ಪು ಸುಲ್ತಾನ್ ಜಯಂತೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕರು ಬಲಿದಾನ ನೀಡಿದ್ದು, ಮೇಲಿಂದ ಮೇಲೆ ಅವರ ಸ್ಮರಣೆ ಅಗತ್ಯವಾಗಿದೆ ಎಂದರು. 

ಇನ್ನೋರ್ವ ಮುಖ್ಯ ಅತಿಥಿ ಪುರಸಭೆ ಸದಸ್ಯರು ಹಾಗೂ ಮಹಾಲಿಂಗಪುರ ಅರ್ಬನ್ ಬ್ಯಾಂಕ್ ಅಧ್ಯಕ್ಷರೂ ಆದ ಶೇಖರ ಅಂಗಡಿ ಮಾತನಾಡಿ, ಮಹಾನ್ ವ್ಯಕ್ತಿಗಳು ಯಾವುದೇ ಜಾತಿ, ಮತ, ಪಂಥ, ಧರ್ಮ ಮತ್ತು ಸಮಾಜಕ್ಕೆ ಸೀಮಿತರಾಗಿರದೆ, ಜಗತ್ತಿನ ಪ್ರತಿಯೊಬ್ಬರ ಆಸ್ತಿಯಾಗಿದ್ದಾರೆ. ಅವರ ಸಮಾಜಮುಖಿ ವಿಚಾರಧಾರೆಗಳು ಮನುಕುಲಕ್ಕೆ ದಾರಿ ದೀಪ. ಆದ್ದರಿಂದ ಅವರು ನೀಡಿರುವ ಸಂಸ್ಕಾರ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಡಿ ಆಗಬೇಕಿದೆ.ಇವತ್ತಿನ ಕಾರ್ಯಕ್ರಮ ವೀರ ಸೇನಾನಿ ರಾಣಿ ಚೆನ್ನಮ್ಮ, ಸ್ವಾತಂತ್ರ್ಯ ಹೋರಾಟಗಾರರು, ದೇಶದ ಪ್ರಥಮ ಶಿಕ್ಷಣ ಮಂತ್ರಿಗಳು ಅಬುಲ್ ಕಲಾಂ ಅಜಾದ್ ಮತ್ತು ಟಿಪ್ಪು ಸುಲ್ತಾನ್ ಅವರ ಸ್ಮರಣೆ ಸಮಯೋಚಿತವಾಗಿ ಯುವ ಸಮೂಹಕ್ಕೆ ಮಾರ್ಗದರ್ಶಿಯಾಗಿದೆ ಎಂದರು. 

ನಿವೃತ್ತ ಶಿಕ್ಷಕರಾದ ಎಂ ಆಯ್‌. ಡಾಂಗೆ ಪ್ರಾಸ್ತಾವಿಕ ಮಾತನಾಡಿ, ವೀರ ರಾಣಿ ಕಿತ್ತೂರು ಚೆನ್ನಮ್ಮ ಹಾಗೂ ಹಜರತ್ ಟಿಪ್ಪು ಸುಲ್ತಾನ್ ಅವರ ಬ್ರಿಟಿಷರ ವಿರುದ್ಧ ಕೆಚ್ಚೆದೆಯ ಹೋರಾಟ ವಿವರಿಸಿ, ಮೌಲಾನಾ. ಅಬುಲ್ ಕಲಾಂ ಆಜಾದ್ ಸ್ವಾತಂತ್ರ್ಯ ಹೋರಾಟ, ಸಂಸದೀಯ ಪಟು ಮತ್ತು ಶಿಕ್ಷಣ ಪ್ರೇಮಿಗಳಾಗಿ ದೇಶಕ್ಕೆ ನೀಡಿದ ಅವರ ಅವಿಸ್ಮರಣೀಯ ಕೊಡುಗೆಗಳನ್ನು ಸ್ಮರಿಸಿದರು. 

ವೇದಿಕೆಯ ಕೆಲವು ಗಣ್ಯರನ್ನು ಸಮಿತಿ ಸನ್ಮಾನಿಸಿದರೆ, ಕನ್ನಡ, ಉರ್ದು ಮತ್ತು ಅರೆಬಿಕ್ ಭಾಷೆಗಳಲ್ಲಿ ಉತ್ತಮ ಸಾಧನೆಗೈದ ಮಕ್ಕಳಿಗೆ ಸಮಾಧಾನಕರ ಬಹುಮಾನಗಳನ್ನು ನೀಡಿ ಗೌರವಿಸಿತು. ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್, ಅಂಜುಮನ್ ಅಧ್ಯಕ್ಷ ಸಜನಸಾಬ ಪೆಂಡಾರಿ, ಜಮೀರ ಯಕ್ಸಂಬಿ, ನಿವೃತ್ತ ಶಿಕ್ಷಕ ಎಂ ಆಯ್‌. ಡಾಂಗೆ, ನಬಿ ಯಕ್ಸಂಬಿ, ನಜೀರ್ ಅತ್ತಾರ, ನಜೀರ್ ಝಾರೆ, ಇಸ್ಮತ ಪಟೇಲ್, ಮೇಹಬೂಬ ಜೀರಗಾಳ, ಮೆಹಬೂಬ ನಾಗನೂರ, ಹಾಜಿ ಸಿರಾಜ್ ಸಾಬ್ ಮುಜಾವರ, ಫಾರೂಕ್ ಪಕಾಲಿ, ಬಂದೇನವಾಜ ಸಿಂದಗಿ, ಶಿಕ್ಷಕ ಹುಮಾಯೂನ್ ಸುತಾರ, ರಾಜೇಸಾಬ ನದಾಫ, ಅಬ್ದುಲ್ ಆಲಗೂರ, ಹಾಫೀಜ್ ಯುಸೂಫ್, ಯುನೂಸ್ ಬೀಳಗಿ, ಹಾಜಿ ಚಿರಾಕ್ ಸಾಬ್ ಕೋಲಾರ, ಸಾದೀಕ್ ಕೋಲಾರ, ಮೇಹಬೂಬ ಗಡ್ಡಿ ಮುಂತಾದವರಿದ್ದರು. ಅಧ್ಯಕ್ಷತೆಯನ್ನು ಅಬ್ದುಲ್ ಗಫೂರ್ ಆಲಗೂರ ವಹಿಸಿ, ಯಾಸೀನ್ ಅವಟಿ ಸ್ವಾಗತಿಸಿ ವಂದಿಸಿದರು. 


ಸುದ್ದಿ ಓದಿ