ರಾಣೆಬೆನ್ನೂರ

ರಾಣೆಬೆನ್ನೂರಲ್ಲಿ ಸಂಭ್ರಮದ ಮಡಿವಾಳ ಮಾಚಿದೇವ ಮಹೋತ್ಸವ; ಮಡಿವಾಳ ಸಮಾಜವು ದೇಶದ 18 ರಾಜ್ಯಗಳಲ್ಲಿ ಪ.ಜಾತಿಗೆ ಸೇರೆ​‍್ಡ

ರಾಣೆಬೆನ್ನೂರಲ್ಲಿ ಸಂಭ್ರಮದ ಮಡಿವಾಳ ಮಾಚಿದೇವ ಮಹೋತ್ಸವ; ಮಡಿವಾಳ ಸಮಾಜವು  ದೇಶದ 18 ರಾಜ್ಯಗಳಲ್ಲಿ ಪ.ಜಾತಿಗೆ ಸೇರೆ​‍್ಡ
Madiwala Machideva Mahotsava celebrated in Ranebennur; Madiwala community is included in the West c

          ರಾಣೆಬೆನ್ನೂರ 02: ಹಿಂದುಳಿದ ಸಮಾಜಗಳಲ್ಲಿ ಒಂದಾಗಿರುವ  ಮಡಿವಾಳ ಸಮಾಜವು ಈಗಾಗಲೇ  ದೇಶದ 18 ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಯಲ್ಲಿ ಸೇರೆ​‍್ಡಗೊಂಡಿದೆ. ಕರ್ನಾಟಕ ಸರಕಾರವು ಶೀಘ್ರವೇ ಈ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರೆ​‍್ಡಗೊಳಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು  ಯುವ ನ್ಯಾಯವಾದಿ, ನೋಟರಿ ಕುಮಾರ. ಡಿ. ಮಡಿವಾಳರ ಆಗ್ರಹಿಸಿದರು. ಸೋಮವಾರದಂದು ತಹಶೀಲ್ದಾರ್ ಕಾರ್ಯಾಲಯದಲ್ಲಿ  ತಾಲೂಕು ಆಡಳಿತದ ವತಿಯಿಂದ ಏರಿ​‍್ಡಸಿದ್ದ ಮಡಿವಾಳ ಮಾಚಿದೇವರ ಜಯಂತೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ಅನ್ನಪೂರ್ಣಮ್ಮ ವರದಿ  ಯಥಾವತ್ತಾಗಿ ಜಾರಿಗೊಳಿಸಿದರೆ ಮಡಿವಾಳ ಸಮಾಜವು ಏಳ್ಗೆಯಾಗಲು ಸಹಕಾರಿಯಾಗುತ್ತದೆ ಎಂದರು. 12ನೇ ಶತಮಾನದಲ್ಲಿ ಅಗ್ರಗಣ್ಯ ಶರಣರಲ್ಲಿ ಓರ್ವರಾಗಿದ್ದ ಮಡಿವಾಳ ಸಮಾಜದ ಆರಾಧ್ಯದೈವರಾಗಿದ್ದರು.

          ಮಾಚಿದೇವರು  ಮಲೀನವಾದ ಬಟ್ಟೆಗಳನ್ನು  ಸ್ವಚ್ಚಗೊಳಿಸುವ ಪ್ರಾಮಾಣಿಕ ಕಾಯಕ ಮಾಡುವುದರ ಜೊತೆಗೆ ಭಕ್ತರ, ಜನರ ಮನಸ್ಸುಗಳನ್ನು ಶುಭ್ರಗೊಳಿಸಿ ಜಾಗೃತರನ್ನಾಗಿ ಮಾಡಿ ಶ್ರೇಷ್ಠ ವಚನಗಾರರಾಗಿ ಮಹಾತ್ಮರೆಸಿಕೊಂಡರು. ಮಡಿವಾಳ ಸಮಾಜ ಸಣ್ಣದಾದರೂ ಸಹ ಅವರುಗಳ ಮನಸ್ಸು  ದೊಡ್ಡದಿದೆ. ಕೇವಲ ಬಟ್ಟೆಗಳನ್ನು ಮಡೆ ಮಾಡಿ ಶುದ್ಧಿ ಮಾಡುವುದಷ್ಟೆ ಅಲ್ಲ, ಮನಸುಗಳನ್ನೂ ಸಹ ಮಡೆ ಮಾಡಿ ಶುದ್ಧ ಮಾಡುವ ಪ್ರಾಮಾಣಿಕ ಕಾಯಕ ಈ ಸಮಾಜ ಇನ್ನೂ ಮಾಡುತ್ತಲಿದೆ ಎಂದರು. ಬಿಸಿಎಂ ನಿವೃತ್ತ ಜಿಲ್ಲಾ ಅಧಿಕಾರಿ ವಿಎಸ್ ಹಿರೇಮಠ ಮಾತನಾಡಿ ಸರ್ಕಾರವು ಮಹನೀಯರ, ಮಹಾತ್ಮರ ಆಚರಣೆಗಳನ್ನು ಆಚರಿಸುತ್ತಿದ್ದು ಶ್ಲಾಘನೀಯ ಕಾರ್ಯವಾಗಿದೆ .

         ಆದರೆ ಅಂತಹ ಮಹಾತ್ಮರನ್ನು ಒಂದು ಜಾತಿಗೆ, ಸಮಾಜಕ್ಕೆ ಸೀಮಿತಗೊಳಿಸಬಾರದು ಎಂದವರು ವಿನಂತಿಸಿದರು ತಹಶೀಲ್ದಾರ ಆರ್ ಎಚ್ ಭಾಗವಾನ ಮಾತನಾಡಿ ಮಡಿವಾಳ ಮಾಚಿದೇವರು ಬಸವಣ್ಣನವರ ಸಮಕಾಲಿನರಾಗಿದ್ದರು. ಅವರು 350ಕ್ಕೂ ಅಧಿಕ ವಚನಗಳನ್ನು ರಚಿಸಿದ್ದಾರೆ. ಬಿಜ್ಜಳರು ವಚನಗಳನ್ನು ನಾಶಪಡಿಸುವ ಸಂದರ್ಭ ಬಂದಾಗ ಅವುಗಳನ್ನು ಸಂರಕ್ಷಿಸಿದ ಕೀರ್ತಿ ಈ ಮಾಚಿದೇವರಿಗೆ ಸಲ್ಲುತ್ತದೆ ಎಂದರು. ಎಲ್ಲ ಜನಾಂಗದ ಮಹನೀಯರ ಆದರ್ಶಗಳು ಸಮಾಜಕ್ಕೆ ದಾರೀದೀಪವಾಗಲಿ ಎಂಬ ಸದುದ್ದೇಶದಿಂದ ಸರಕಾರವು ಈ ಜಯಂತಿಗಳನ್ನು ಆಚರಿಸಲಾಗುತ್ತದೆ.

          ಸಮಾಜದವರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾಗಬೇಕು  ಎಂದರು.  ಸ್ವಾಕರವೇ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ, ಕೊಟ್ರೇಶಪ್ಪ ಯಮ್ಮಿ, ಎಂ ಚಿರಂಜೀವಿ   ಸೇರಿದಂತೆ ಮತ್ತಿತರರು ಮಡಿವಾಳ ಮಾಚಿದೇವರ ಕುರಿತು ಅರ್ಥಪೂರ್ಣವಾಗಿ ಮಾತನಾಡಿದರು. ತಹಸೀಲ್ದಾರ ಹೊರತುಪಡಿಸಿ ಸರ್ಕಾರದ ಎಲ್ಲ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಮಹೋತ್ಸವದಲ್ಲಿ ಗೈರಾಗಿದ್ದುದು   ಕಂಡು ಬಂದಿತು  ಸಮಾಜದ ಮುಖಂಡರಾದ  ಹನುಮಂತಪ್ಪ ಮಡಿವಾಳರ, ಚಂದ್ರಣ್ಣ ಚಳಗೇರಿ, ಬಸವರಾಜ ಮಡಿವಾಳರ,  ಗುಡ್ಡಪ್ಪ ಮಡಿವಾಳರ, ಜುಂಜಪ್ಪ ಮಡಿವಾಳರ,  ದೇವೇಂದ್ರ  ಮಡಿವಾಳರ,    ಮಧು ಮಡಿವಾಳರ,  ಮಹೇಶ  ಮಡಿವಾಳರ,  ಶಂಕರ ಮಡಿವಾಳರ,  ಮಾಲತೇಶ ಮಡಿವಾಳರ, ದೇವರಾಜ ಕಾಂಬಳೆ, ಕರಬಸಪ್ಪ ಕುರವತ್ತಿ, ಪ್ರೇಮಾ, ಮಂಜುನಾಥ ಕೋಲಕಾರ ಸೇರಿದಂತೆ  ಸಮಾಜದ ಮುಖಂಡರುಗಳು, ಸಿಬ್ಬಂದಿಗಳು  ಮತ್ತಿತರರು ಇದ್ದರು. 


ಸುದ್ದಿ ಓದಿ