ಮೃತ ರೈತರ ಮನೆಗೆ ಶಾಸಕರ ಭೇಟಿ ನೀಡಿ: ಧನ ಸಹಾಯ
ಬೀದರ್ 13: ರೈತರು ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ದುಃಖದ ಸಂಗತಿ ರೈತರು ಕಷ್ಟಗಳನ್ನು ಧೈರ್ಯದಿಂದ ಎದುರಿಸಬೇಕು. ಅಧಿಕಾರಿಗಳು ಕೃಷಿಯ ಆರ್ಥಿಕ ವಿಧಾನದ ಬಗ್ಗೆ ಎಲ್ಲಾ ರೈತರಿಗೆ ಸಲಹೆ ಮತ್ತು ವಿವರಣೆಯನ್ನು ನೀಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಬ್ಸಿಡಿ ದರದಲ್ಲಿ ಸೀಗುವ ಹೊಸ ಉಪಕರಣಗಳು, ತಂತ್ರಗಳು, ಬೀಜಗಳು ಇತ್ಯಾದಿಗಳ ಬಳಕೆಯನ್ನು ಅವರಿಗೆ ಸುಲಭವಾದ ರೂಪದಲ್ಲಿ ವಿವರಿಸಿ ಸರ್ಕಾರದ ಸೌಲಭ್ಯ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಬೇಕು ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರದ ಸಿಕೇಂದ್ರಾಪುರ ಗ್ರಾಮದಲ್ಲಿ ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ರೈತ ದಸರಥ ಅವರ ಮನೆಗೆ ಹಾಗೂ ಹಾವು ಕಡಿದು ಮೃತಪಟ್ಟ ಶಿವನಾಥ ಅವರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ವ್ಯಯಕ್ತಿಕ ಧನ ಸಹಾಯ ಮಾಡಿ ಮಾತನಾಡಿದರು. ಅಧಿಕಾರಿಗಳು ರೈತರಿಗೆ ಹವಾಮಾನ ಪ್ರತಿಕೂಲ ಪರಿಸ್ಥಿತಿಯಲ್ಲಿ ಉತ್ತಮವಾಗಿ ಬೆಳೆಯುವ ಬೆಳೆಗಳ ಬಗ್ಗೆ ಅವರಿಗೆ ತಿಳಿಸಬೇಕು. ಮಿಶ್ರ ಬೆಳೆ ಬೆಳೆಯಲು ಹೆಚ್ಚಿನ ನೀಡಬೇಕು ಈ ರೀತಿಯಾಗಿ, ಅವರು ಪ್ರವಾಹ ಅಥವಾ ಬರ ಪರಿಸ್ಥಿತಿಗಳಲ್ಲಿ ನಷ್ಟವನ್ನು ಅನುಭವಿಸದಂತೆ ನೋಡಿಕೊಳ್ಳಬೇಕು.ರಾಜ್ಯ ಸರ್ಕಾರ ಪ್ರವಾಹ ಅಥವಾ ಅನಾವೃಷ್ಟಿಯ ಪರಿಸ್ಥಿತಿಯಿಂದ ಬೆಳೆ ನಷ್ಟದಿಂದ ಬಳಲುತ್ತಿರುವ ರೈತರಿಗೆ ಶೀಘ್ರ ಪರಿಹಾರ ಪ್ಯಾಕೇಜ್‌ಗಳನ್ನು ಒದಗಿಸಬೇಕು. ನಷ್ಟವನ್ನು ಸರಿದೂಗಿಸಲು ಇದು ಅವರಿಗೆ ಸಹಾಯ ಮಾಡುತ್ತದೆ. ಪ್ರತಿಯೊಬ್ಬ ನಿರ್ಗತಿಕ ರೈತರು ಪರಿಹಾರ ಪ್ಯಾಕೇಜ್‌ಗಳ ಪ್ರಯೋಜನವನ್ನು ಪಡೆದು ಉತ್ತಮ ಜೀವನ ನಡೆಸಬಹುದು. ಭಾರತ ಸರ್ಕಾರವು ರೈತರ ಸ್ಥಿತಿಯನ್ನು ಸುಧಾರಿಸಲು ಹಲವಾರು ಕಾರ್ಯಕ್ರಮಗಳು ಮತ್ತು ನೀತಿಗಳನ್ನು ಪ್ರಾರಂಭಿಸಿದೆ. ಇದಲ್ಲದೆ, ರೈತರ ಆತ್ಮಹತ್ಯೆ ಪ್ರಕರಣಗಳ ಸರಾಸರಿ ಸಂಖ್ಯೆಯು ಸತತ ವರ್ಷಗಳಲ್ಲಿ ಹೆಚ್ಚುತ್ತಿರಿವುದು ನೋವಿನ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು. ರೈತರ ಸಮಸ್ಯೆಗಳು ಕಡಿಮೆಯಾಗುವಂತೆ ರೈತರಿಗಾಗಿ ಪರಿಣಾಮಕಾರಿ ಕಾರ್ಯಕ್ರಮಗಳು ಮತ್ತು ನೀತಿಗಳನ್ನು ಪ್ರಾರಂಭಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.
ರೈತರು ಜಮೀನಿನಲ್ಲಿ ಕೆಲಸ ಮಾಡುವಾಗ ಎಚ್ಚರ ವಹಿಸಬೇಕು ಶೂ ಧರಿಸಿ ತೆರಳ ಬೇಕುಹಾವು ಕಡಿತದಿಂದ ರೈತ ಮೃತಪಟ್ಟಿದ್ದು ಬಹಳ ದುಃಖದ ಸಂಗತಿ. ಸಾಲ ಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತ ದಸರಥ ಅವರ ಕುಟುಂಬಕ್ಕೆ ವ್ಯಯಕ್ತಿಕ ಧನ ಸಹಾಯ ಮಾಡಿ ಸರ್ಕಾರದಿಂದ 5 ಲಕ್ಷ ಪರಿಹಾರ ಹಾವು ಕಡಿದು ಮೃತಪಟ್ಟ ಶಿವನಾಥ ಅವರಿಗೆ 2 ಲಕ್ಷ ಪರಿಹಾರ ಧನ ಶೀಘ್ರದಲ್ಲಿ ಒದಗಿಸುವದಾಗಿ ಭರವಸೆ ನೀಡಿದರು ಮತ್ತು ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳ ಹಿತಾಶಕ್ತಿ ಕಾಪಾಡುವ ನಿಟ್ಟಿನಲ್ಲಿ ಮೃತ ರೈತರ ಪತ್ನಿಗೆ ಮಾಸಿಕ ರೂ.2000/- ಪಿಂಚಣಿ ಸೌಲಭ್ಯ ಒಂದು ವಾರದಲ್ಲಿ ಒದಗಿಸಲು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಮೀನಾಕ್ಷಿ ಮಾದಪ್ಪ, ಮುಖಂಡರಾದ ಜಗನಾಥ್ ತಳಘಟ್, ಸಂಜು ರೆಡ್ಡಿ, ವೀರಶೆಟ್ಟಿ, ಈಶ್ವರ ಸೋನಿ, ಸಂತೋಷ ರೆಡ್ಡಿ, ಸಂತೋಷ ಸೋರಳ್ಳಿ, ಬಸವರಾಜ ಪಟೋದಿ, ಪ್ರಕಾಶ ತಳಘಟ್, ಅಂಬಾದಾಸ, ಶಾಮಣ್ಣ ಹೊಕ್ರಾಣಾ, ಮಡೆಪ್ಪ, ವಿಶಾಲ ಕಂದಾಯ ಇಲಾಖೆಯ ಅಧಿಕಾರಿ ಬಾಲಾಜಿ, ಪಿಡಿಒ ಜಯಶೀಲಾ, ಕೃಷಿ ಇಲಾಖೆ ಅಧಿಕಾರಿ ಸೌಮ್ಯ ಡಿಇಓ ಸಂಗ್ರಾಮ ಗ್ರಾಮದ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.