ಶಾಸಕರ ಆಪ್ತ ಸಹಾಯಕ ಸುರೇಶ್‌ಗೆ ಪಿತೃ ವಿಯೋಗ
ಲೋಕದರ್ಶನ ವರದಿ
ಗಂಗಾವತಿ 24: ನಗರದ ಹೊಸಳ್ಳಿ ರಸ್ತೆಯ ಮಂಜುನಾಥ ನಗರದ ನಿವಾಸಿ ಹಾಗು ಶಾಸಕ ಗಾಲಿ ಜನಾರ್ದನರೆಡ್ಡಿ ಅವರ ಆಪ್ತ ಸಹಾಯಕ ಸುರೇಶ್ ಅವರ ತಂದೆ ವೆಂಕಟೇಶ ಉಪ್ಪಾರ್ ಸಾ.ದೇವಸಮುದ್ರ (67) ಅವರು ಅನಾರೋಗ್ಯ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನ ನಿಧನರಾದ್ದಾರೆ. ಮೃತರಿಗೆ ಪತ್ನಿ ಕಾಳಮ್ಮ ಉಪ್ಪಾರ್ ಹಾಗೂ ಪುತ್ರರಾದ ಹೆಡ್ ಕಾನ್ಸಟೇಬಲ್ ರವೀಂದ್ರ ಉಪ್ಪಾರ್, ಕೊಪ್ಪಳ ಎಸ್ಪಿ ಕಚೇರಿಯ ಪಿಐ ಚಂದ್ರು ಉಪ್ಪಾರ, ಗಂಗಾವತಿ ಶಾಸಕರ ಆಪ್ತ ಸಹಾಯಕರಾದ ಸುರೇಶ ಉಪ್ಪಾರ್ ಹಾಗೂ ಕೊಪ್ಪಳ ಉದ್ಯೋಗ ವಿನಿಮಯ ಅಧಿಕಾರಿಗಳಾದ ಮಂಜುಳಾ ಉಪ್ಪಾರ್ ಸೇರಿ ನಾಲ್ವರು ಮಕ್ಕಳು ಹಾಗೂ ಅಪಾರ ಬಂಧುಬಳಗವಿದೆ. ಮೃತರ ಅಂತ್ಯಕ್ರಿಯೆ ಗುರುವಾರ ಬೆಳಗ್ಗೆ 10 ಗಂಟೆಗೆ ಹೊಸಳ್ಳಿ ಗ್ರಾಮದ ರುದ್ರಭೂಮಿಯಲ್ಲಿ ನೆರವೇರಲಿದೆ.