ಆದಿ ಬಣಜೀಗ ಸಮಾಜದಿಂದ ಕಂದಾಯ ಭೂಮಿ ಕಬಳಿಸುವ ಕ್ರಮಕ್ಕೆ ಸ್ಥಳೀಯರ ವಿರೋಧ
ಮಹಾಲಿಂಗಪುರ 14: ಕಂದಾಯ ಇಲಾಖೆಗೆ ಸಮ್ಮಂದಿಸಿದ ಪಟ್ಟಣದ ಕೆಂಗೇರಿಮಡ್ಡಿ ಬಡಾವಣೆಯ ಎರಡು ಎಕರೆ ಮೀಸಲು ಜಮೀನಿನಲ್ಲಿ ಆದಿ ಬನಜೀಗ ಸಮಾಜದವರು ಅನಧಿಕೃತ ಸಮುದಾಯ ಭವನ ನಿರ್ಮಾಣ ಮಾಡುವ ತರಾತುರಿಯಲ್ಲಿದ್ದು, ಇದರ ಮುನ್ಸೂಚನೆ ಅರಿತ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಪ್ರಸ್ತುತ ಜಾಗೆಯನ್ನು ಎಲ್ಲ ಸಮುದಾಯಗಳಿಗೆ ವಿತರಿಸಿ ಇಲ್ಲವೆ ಜನೋಪಯೋಗಿ ಕಾಯಿಪಲ್ಯ ಮಾರುಕಟ್ಟೆ ನಿರ್ಮಿಸಿ ಎಂದು ಪುರಸಭೆ ಮತ್ತು ತಾಲೂಕಾಡಳಿತವನ್ನು ಆಗ್ರಹಿಸಿದ್ದಾರೆ.
ಶುಕ್ರವಾರ ಮುಂಜಾನೆ ಪಟ್ಟಣದಲ್ಲಿ ಸಭೆ ಸೇರಿ ಕೆಂಗೇರಿಮಡ್ಡಿ ನಿವಾಸಿ ಮಹಾಲಿಂಗಪ್ಪ ಶಿವನಗಿ ಮಾತನಾಡಿ, ಮೂರು ವಾರ್ಡ್ ಗಳ 5 ಸಾವಿರ ಜನ ಸಂಖ್ಯೆ ಹೊಂದಿರುವ ಕೆಂಗೇರಿಮಡ್ಡಿ ಬಡಾವಣೆ ಇತ್ತಿಚಿನ ದಶಕದಲ್ಲಿ ಬಹಳಷ್ಟು ಅಭಿವೃದ್ಧಿ ಹೊಂದಿದೆ. ಕಾಯಿಪಲ್ಯ ಪದಾರ್ಥಗಳನ್ನು ಖರಿದಿಸಲು ಜನರು ಮಂಗಳವಾರ, ಶುಕ್ರವಾರ ಮತ್ತು ಶನಿವಾರ ವಾರ ಸೇರಿ ದಿನ ನಿತ್ಯ ನಡೆಯುವ ಬಾಜಾರುಗಳ ಮೇಲೆ ಅವಲಂಬಿತರಾಗಿದ್ದಾರೆ.ಇವುಗಳು 1 ರಿಂದ 2 ಕಿಮಿ ಗಳ ಅಂತರದಲ್ಲಿದ್ದು, ಇಲ್ಲಿ ವಾಸಿಸುವವರಲ್ಲಿ ಹೆಚ್ಚಿನವರು ಕೂಲಿ ಕಾರ್ಮಿಕರೆ ಆಗಿದ್ದಾರೆ.
ಈ ಅಮೂಲ್ಯ ಬೆಲೆ ಬಾಳುವ ಜಾಗೆಯನ್ನು ಯಾರಿಗೂ ಪರಭಾರೆ ಮಾಡದೆ, ಅವಶ್ಯಕತೆ ಇರುವ ಕಾಯಿಪಲ್ಯ ಮಾರುಕಟ್ಟೆ ನಿರ್ಮಿಸಿ ಸ್ಥಳೀಯ ನಿವಾಸಿಗಳಿಗೆ ನೆರವಾಗಿ, ಇಲ್ಲವೆ ಈಗಾಗಲೇ ಹಲವಾರು ಸಮಾಜಗಳಿಗೆ ಸಮುದಾಯ ಭವನಗಳ ಅವಶ್ಯಕತೆ ಇರುವುದಲ್ಲದೆ, ಕೆಲವು ತಿಂಗಳುಗಳ ಹಿಂದೆ ಕಂದಾಯ ಇಲಾಖೆಯ ಇನ್ನೊಂದು ಜಾಗೆಯಲ್ಲಿ 8/10 ವರ್ಷಗಳಿಂದ ವಾಸವಿದ್ದ ಜನತೆಯನ್ನು ತಾಲೂಕು ಮತ್ತು ಪುರಸಭೆ ಆಡಳಿತ ಒಕ್ಕಲೆಬ್ಬಿಸಿದ್ದು, ಅಂತಹವರಿಗೆ ಈ ಜಾಗೆ ನೀಡಿ.ಒಂದು ವೇಳೆ ಒಂದೇ ಸಮುದಾಯಕ್ಕೆ ಜಾಗೆ ನೀಡಿದ್ದೆ ಆದರೆ ಇಲ್ಲಿಯ ಜನ ಪ್ರತಿಭಟನೆಗೆ ಅನಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿಗಳಿಂದ ಉತ್ತಮ ಸ್ಪಂದನೆ ದೊರಕಿರುವುದಕ್ಕೆ ಸ್ಥಳೀಯರು ಹರ್ಷ ವ್ಯಕ್ತಪಡಿಸಿ ಅಧಿಕಾರಿಗಳನ್ನು ಅಭಿನಂದಿಸಿದ್ದಾರೆ.ಈ ಸಂದರ್ಭದಲ್ಲಿ ವಿಠ್ಠಲಗೌಡ ಕುಳಲಿ, ಪರಶುರಾಮ ಮೇತ್ರಿ, ತಿಪ್ಪು ಬಂಡಿವಡ್ಡರ, ಶ್ರೀಶೈಲ ದೊಡಮನಿ, ಬಸವರಾಜ ಮಾವಿನಹಿಂಡಿ, ರಾಜು ಖೋತ, ಮುತ್ತಪ್ಪ ಕುಂದ್ರಾಳ, ಮಲ್ಲಪ್ಪ ಚಿಚಖಂಡಿ, ಸುರೇಶ ಗೌಂಡಿ,ಅಲ್ಲಪ್ಪ ಲೋಕಾಪೂರ, ಚನ್ನಪ್ಪ ಮುಖ್ಯೆನ್ನವರ, ಮಂಜುನಾಥ ಅರವಂಶಿ, ಮಹಾಲಿಂಗಪ್ಪ ಹಳ್ಳಿ, ಸಿದ್ರಾಮ ಜಕ್ಕಾನಟ್ಟಿ, ಬಸು ಮಾಳಿ, ಅರುಣ ಸಾಳುಂಕೆ, ತಿಪ್ಪಣ್ಣ ಪಾತ್ರೋಟ, ಬಸು ಓಲೇಕಾರ, ರಾಜು ಜಮಾದಾರ, ಗುರು ಹಿಪ್ಪರಗಿ, ಗುರು ಖೋತ, ಬಸವರಾಜ ಹಿಪ್ಪರಗಿ, ಮಹಾಲಿಂಗಪ್ಪ ಚನ್ನದಾಸರ, ರಾಜು ಕುಕ್ಕುಗೋಳ ಇನ್ನಿತರರಿದ್ದರು.