ಗ್ರಂಥಪಾಲಕರ ದಿನಾಚರಣೆ: ಡಾ.ಎಸ್.ಆರ್.ರಂಗನಾಥನ್ ರ ಭಾವಚಿತ್ರಕ್ಕೆ ಮಾಲಾರ್ಪಣೆ
ಬಳ್ಳಾರಿ 12: ಇಂದು ದಿ.12ರ ಬೆಳಿಗ್ಗೆ 11.30ಕ್ಕೆ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಬುಡ್ಗಜಂಗಮ್ ಕಾಲೋನಿಯ ಅಲೆಮಾರಿ ಗ್ರಂಥಾಲಯ ಕಾರ್ಯಾಲಯದಲ್ಲಿ “ಗ್ರಂಥಪಾಲಕರ ದಿನಾಚರಣೆಯ” ಪ್ರಯುಕ್ತ ಗ್ರಂಥಾಲಯ ಪಿತಾಮಹ ರಾದ ಪದ್ಮಶ್ರೀ ಡಾ.ಎಸ್.ಆರ್.ರಂಗನಾಥನ್ ರವರ ಭಾವಚಿತ್ರಕೆಕ ಮಾಲಾರ್ಪಣೆ ಮಾಡಿ ಪೂಜೆ ಕಾರ್ಯಕ್ರಮ ನೆರವೇರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಅಲೆಮಾರಿ ಬುಡ್ಗಜಂಗಮ್ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷರ ಸಣ್ಣಮಾರೆಪ್ಪ ಮಾತನಾಡಿ 2008ರಲ್ಲಿಯೇ ಗ್ರಂಥಾಲಯಗಳು ಆರಂಭವಾಗಿದ್ದವು, ಅಂದರೆ ಜಿಲ್ಲೆಗೆ 1 ಅಥವಾ 2 ಮಾತ್ರ ಗ್ರಂಥಾಲಯಗಳನ್ನು ನೀಡಿದ್ದರು. ಆದರೆ ಅಲ್ಲಿಂದ ಇಲ್ಲಿಯವರೆಗೂ ಯಾವುದೇ ಹೊಸ ಗ್ರಂಥಾಲಯಗಳನ್ನು ಸರ್ಕಾರ ಮಂಜೂರು ಮಾಡಿರುವುದಿಲ್ಲ. ಹಾಗಾಗಿ ಪ್ರತಿ ಅಲೆಮಾರಿ ಕಾಲೋನಿಗಳಲ್ಲಿ ಹೊಸ ಗ್ರಂಥಾಲಯಗಳನ್ನು ಆದಷ್ಟು ಬೇಗನೆ ರೂಪಿಸಿ ಅಲೆಮಾರಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸರ್ಕಾರಕ್ಕೆ ಬೇಡಿಕೆ ಇಡಲಾಯಿತು. ಇದರಲ್ಲಿ ಅಲೆಮಾರಿ ಮಕ್ಕಳು ನಮ್ಮ ರಾಜ್ಯದಲ್ಲಿ ಜಿಲ್ಲಾವಾರು, ತಾಲೂಕುವಾರು, ನಗರ, ಗ್ರಾಮದ ಅಲೆಮಾರಿಗಳ ಕಾಲೋನಿಗಳಲ್ಲಿ ಅಲೆಮಾರಿ ಗ್ರಂಥಾಲಯಗಳನ್ನು ಸರ್ಕಾರ ಮಂಜುರು ಮಾಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಲಾಯಿತು. ಪ್ರಯುಕ್ತ ಅಲೆಮಾರಿ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ದಾರಿ ದೊರಕಿದಂತಾಗುತ್ತದೆ. ಇದರಿಂದ ಅಲೆಮಾರಿ ಮಕ್ಕಳು ಬಿಕ್ಷೆ ಬೇಡುವುದನ್ನು ನಿಲ್ಲಿಸಲು ಸಹ ದಾರಿಯಾಗುತ್ತದೆ.
ಈ ಕಾರ್ಯಕ್ರಮದಲ್ಲಿ ಗ್ರಂಥಾಲಯ ಮೇಲ್ವಿಚಾರಕರಾದ ಪಕ್ಕೀರ್ಪ ಬಾದಿಗಿ, ಚೆನ್ನದಾಸರ ಮುಖಂಡರಾದ ಶೇಖರ್.ಡಿ, ಇದೇ ಕಾಲೋನಿಯ ಮುಖಂಡರುಗಳಾದ ಡಿ.ಜಂಬಣ್ಣ, ದೊಡ್ಡ ಮಾರೆಪ್ಪ, ವೆಂಕಟೇಶ್, ಮಾರೆಪ್ಪ ಮತ್ತು ಇತರರು ಅಲೆಮಾರಿ ಸಂಘದವರು ಭಾಗವಹಿಸಿ ಕಾರ್ಯಕ್ರಮವನ್ನು ನೆರವೇರಿಸಲಾಯಿತು.