ಮಹಲಿಂಗಪುರ

ಸ್ಪರ್ಧೆಗಳಿಂದ ಪ್ರತಿಭೆ ಪ್ರಜ್ವಲಿಸಲಿ : ಎ. ಆರ್. ಛಬ್ಬಿ

ಸ್ಪರ್ಧೆಗಳಿಂದ ಪ್ರತಿಭೆ ಪ್ರಜ್ವಲಿಸಲಿ : ಎ. ಆರ್. ಛಬ್ಬಿ

ಮಹಾಲಿಂಗಪುರ :  ಶಿಕ್ಷಣ ಕೇವಲ ಒಮ್ಮುಖವಲ್ಲ, ಸ್ಪರ್ಧೆಗಳು ಶಿಕ್ಷಣದ ಅವಿಭಾಜ್ಯ ಅಂಗ, ಸ್ಪರ್ಧೆಗಳಿಂದ ಪ್ರತಿಭೆ ಪ್ರಜ್ವಲಿಸಿ ಸುಭದ್ರ ರಾಷ್ಟ್ರ ನಿರ್ಮಾಣಮಾಡುವುದಾಗಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎ.ಆರ್.ಛಬ್ಬಿ ಹೇಳಿದರು. 

ಸಮೀಪದ ಮಧಬಾವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಧಬಾವಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಸುಪ್ತ ಪ್ರತಿಭೆ ಹೊರಗೆಳೆಯುವ ನಿಟ್ಟಿನಲ್ಲಿ ಶಾಲಾ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಪ್ರತಿಭಾ ಕಾರಂಜಿಯ ಹತ್ತಾರು ಸ್ಪರ್ಧೆಗಳು ನಡೆಯುತ್ತಿದ್ದು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವುದನ್ನು ಕಲಿಸುತ್ತವೆ ಎಂದರು. 

ಗ್ರಾಪಂ ಅಧ್ಯಕ್ಷ ವಿಠ್ಠಲ ಅರಭಾವಿ ಮಾತನಾಡಿ, ಸ್ಪರ್ಧೆಯಲ್ಲಿ ಪೂರ್ಣ ಪ್ರಮಾಣದ ಪ್ರತಿಭೆ ಮೆರೆದು ಸಾಧನೆಗೈದು ಹೆತ್ತವರ ಮತ್ತು ನಾಡಿನ ಕೀರ್ತಿ ಹೆಚ್ಚಿಸಿ ಎಂದರು. 

ಮುಖಂಡ ವಿನೋದಗೌಡ ಪಾಟೀಲ ಮಾತನಾಡಿ, ಸಂಸ್ಕಾರದಿಂದ ಮಾತ್ರ ಮಗು ಮಹಾನ್ ವ್ಯಕ್ತಿಯಾಗಬಲ್ಲದು ಹಾಗಾಗಿ ಮಕ್ಕಳು ಉತ್ತಮ ಸಂಸ್ಕಾರ ರೂಢಿಸಿಕೊಳ್ಳಬೇಕು ಎಂದರು. 

ಸಿಆರ್ ಪಿ ವೈ.ಎಸ್.ಲಮಾಣಿ ಪ್ರಾಸ್ತಾವಿಕವಾಗಿ ಮಾತನಾಡಿ.  ಸುಪ್ತ ಪ್ರತಿಭೆಯನ್ನು ಗುರುತಿಸಿ  ಶಕ್ತಿಯನ್ನಾಗಿ ಪರಿವರ್ತಿಸಿ ಮಗುವಿನ ಸರ್ವಾಗೀಣ  ಅಭಿವೃದ್ಧಿಗೆ ಸಹಕಾರಿಯಾಗುವ ಈ ಕಾರ್ಯಕ್ರಮ ಅಭಿನಂದನೀಯ ಎಂದರು. 

ಗ್ರಾಪಂ ಉಪಾಧ್ಯಕ್ಷ ಮಹಾದೇವ ಜಮಖಂಡಿ, ಎಸ್ಡಿಎಂಸಿ ಅಧ್ಯಕ್ಷ ಈರಪ್ಪ ಮಾಳಿ, ಶಿಕ್ಷಣ ಸಂಯೋಜಕ ಸಂಜು ಸಾವಳಗಿ, ಸಂಜಯ ಮಾಳಿ, ಸದಾಶಿವ ಕೋಳಿಕಾರ, ಸಿದ್ದಲಿಂಗಯ್ಯ ಮಠಪತಿ, ಈರಪ್ಪ ಬೋರನಡ್ಡಿ, ಸತ್ಯಪ್ಪ ಮುಧೋಳ, ಮಹಾಲಿಂಗಪ್ಪ ಇಟ್ನಾಳ, ಸಿದ್ದಲಿಂಗಪ್ಪ ಮಸಗುಪ್ಪಿ, ಮಹಾಂತೇಶ ಹಲಗಿಗೌಡರ, ಮಲ್ಲಪ್ಪ ಅರಬಾವಿ, ಮಾಳಪ್ಪ ಡುಮ್ಮಣ್ಣವರ, ಸಿಆರ್ಪಿಗಳಾದ ಎಸ್. ಎನ್. ಬ್ಯಾರಿ, ಟಿ. ಎಂ. ನಾಯಕವಾಡಿ , ಐ. ಎ. ನದಾಫ್, ಮುಖ್ಯೋಪಾಧ್ಯಾಯರು ಉಳ್ಳೇಗಡ್ಡಿ ಇದ್ದರು. 

ಐಶ್ವರ್ಯ ಸುತಾರ ಮತ್ತು ಸಂಗಡಿಗರು ಪ್ರಾರ್ಥಿಸಿ, ಶಿಕ್ಷಕ ಎಂ.ಡಿ.ನರಗಟ್ಟಿ ಸ್ವಾಗತಿಸಿ, ಶಿಕ್ಷಕ ಬಿ.ಡಿ.ನೇಮಗೊಂಡ ನಿರೂಪಿಸಿದರು 

ಸುದ್ದಿ ಓದಿ