ಬಸವೇಶ್ವರ ವೃತ್ತದಲ್ಲಿ ಕರವೇಯಿಂದ ಕನ್ನಡ ರಾಜ್ಯೋತ್ಸವ ನಿತೊತ್ಸವವಾಗಲಿ : ಯಲ್ಲಣ್ಣಗೌಡ ಪಾಟೀಲ್
ಬಸವೇಶ್ವರ ವೃತ್ತದಲ್ಲಿ ಕರವೇಯಿಂದ ಕನ್ನಡ ರಾಜ್ಯೋತ್ಸವ ನಿತೊತ್ಸವವಾಗಲಿ : ಯಲ್ಲಣ್ಣಗೌಡ ಪಾಟೀಲ್
ಮಹಾಲಿಂಗಪುರ 03 : ಕನ್ನಡ ಭಾಷೆ ಜಗತ್ತಿನ ಅತೀ ಹಳೆಯ ಭಾಷಗಳಲ್ಲಿ ಒಂದು ನಮ್ಮ ನಾಡಿನ ಭಾಷೆಗೆ 2500 ವರ್ಷಗಳ ಹಳೆಯದು ವಿಶ್ವದ 33 ನೇ ಭಾಷೆ ಎಂಬುದು ನಮ್ಮ ಹೆಮ್ಮೆ ದೇಶದ ಸಂಸ್ಕೃತಿ, ಕಲೆ, ನೆಲ,ಜಲ ರಕ್ಷಣೆ ಪ್ರತಿಯೊಬ್ಬ ಕನ್ನಡಿಗನ ಹೊಣೆ ರಾಜ್ಯ ಇಂದು 69 ನೇ ರಾಜ್ಯೋತ್ಸವ ಆಚರಿಸಿಕೊಳ್ಳುತ್ತಿದೆ. ಕರ್ನಾಟಕ ಹೆಸರು ಪಡೆದು 50 ನೇ ಸುವರ್ಣ ಸಂಭ್ರಮ ವರ್ಷಾಚಾರಣೆ ಸಂಧರ್ಭದಲ್ಲಿ ನಮ್ಮ ನಾಡಿನ ಉತ್ಸವ ನಿತೋತ್ಸವಾಗಲಿ ಎಂದು ಪುರಸಭೆ ಅಧ್ಯಕ್ಷರಾದ ಯಲ್ಲಣ್ಣಗೌಡ ಪಾಟೀಲ ಹೇಳಿದರು.
ನಗರದ ಬಸವೇಶ್ವರ ವೃತ್ತದಲ್ಲಿ ಕರವೇ ನಗರ ಘಟಕ ಆಯೋಜಿಸಿದ 69 ನೇ ರಾಜ್ಯೋತ್ಸವ ಕಾರ್ಯಕ್ರಮವನ್ನು ನಾಡ ದೇವಿಯ ಫೋಟೋ ಪೂಜಿಸುವ ಮೂಲಕ ಉದ್ಘಾಟಸಿ ಮಾತನಾಡಿ ವಿಶ್ವದ ಸುಂದರ ಭಾಷೆ, ಸುಂದರ ನಾಡು,ಸಿರಿ ಗಂಧದ ನಾಡು, ಚಿನ್ನದ ಬಿಡು ಸಂಗೀತದ ನೆಲೆ ನಾಡು ವಿಜಯನಗರ ಸಾಮ್ರಾಜ್ಯವನ್ನು ಹೊಂದಿದ ನಾಡು ನಾವೆಲ್ಲರೂ ಈ ನಾಡಿನಲ್ಲಿರುವುದು ನಮ್ಮ ಪುಣ್ಯ 8 ಜ್ಞಾನ ಪೀಠ ಪಡೆದುಕೊಂಡದಲ್ಲದೆ ಇರವರಿಗೆ ಸರಸ್ವತಿ ಸಮ್ಮಾನ ಪುರಸ್ಕಾರ ಪಡೆದುಕೊಂಡ ಶ್ರೀಮಂತ ಸಾಹಿತ್ಯ ನಮ್ಮದು ಇನ್ನು ಅನೇಕ ವೀರ ಧೀರರನ್ನು ಹೊಂದಿದ ರಾಜ್ಯ ನಮ್ಮದು ಈ ಉತ್ಸವ ನಿತೋತ್ಸವಾಗಲಿ ಆಗಲೇ ಕನ್ನಡಿಗರಾದ ನಮ್ಮಗೆ ಹೆಮ್ಮೆ.ಕರುನಾಡಿಗೆ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ಪೂರ್ಣಗೊಂಡಿದ್ದು ಈ ಸುವರ್ಣ ಸಂಭ್ರಮ ವನ್ನು ಇಡೀ ನಾಡು ಅದ್ದೂರಿಯಾಗಿ ಆಚರಿಸುತ್ತಿದೆ. ಕಳೆದ ಐವತ್ತು ವರ್ಷಗಳಲ್ಲಿ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಈ ಅವಧಿಯಲ್ಲಿ ಜಗತ್ತಿನ ನಕ್ಷೆಯಲ್ಲಿ ಕರ್ನಾಟಕ ತನ್ನದೇ ಆದ ಅಚ್ಚಳಿಯದ ಛಾಪನ್ನು ಒತ್ತಿದೆ. ಆಡಳಿತದಿಂದ ಹಿಡಿದು ಸಿನಿಮಾದ ತನಕ, ಕ್ರೀಡೆಯಿಂದ ಹಿಡಿದು ಸಾಹಿತ್ಯದವರೆಗೆ, ವಿಜ್ಞಾನದಿಂದ ಹಿಡಿದು ಕೈಗಾರಿಕೆಯ ತನಕ ಕನ್ನಡ ನಾಡು ಇಡೀ ದೇಶ ಕಣ್ಣರಳಿಸುವ ಮಾದರಿಯಲ್ಲಿ ಸಾಧನೆ ತೋರಿದೆ. ಕಳೆದ 50 ವರ್ಷಗಳಲ್ಲಿ ಕರ್ನಾಟಕ ವಿವಿಧ ಕ್ಷೇತ್ರಗಳಲ್ಲಿ ಅನೇಕ ಸಾಧನೆಗಳನ್ನು ಮಾಡಿದೆ ಎಂದರು.
ನಂತರ ಮಾತನಾಡಿದ ಕರವೇ ಅಧ್ಯಕ್ಷರಾದ ಮೋಸಿನ ಅತ್ತಾರ ಕನ್ನಡ ನಾಡಿನಲ್ಲಿ ಕನ್ನಡಿಗರೇ ಸಾರ್ವಭೌಮರು. ಕನ್ನಡ ಭಾಷೆಯೇ ಮೇಲ್ಪಂಕ್ತಿಯ ಭಾಷೆಯಾಗಿ ಕನ್ನಡಿಗರ ಮನೆ ಮನಗಳಲ್ಲಿ ಎಲ್ಲಿಯವರೆಗೆ ರಾರಾಜಿಸುವುದಿಲ್ಲವೋ, ಸರ್ಕಾರಗಳು ಕನ್ನಡತನವನ್ನು ಮೆರೆಯುವುದಿಲ್ಲವೋ, ಅಲ್ಲಿಯವರೆಗೆ ಕನ್ನಡವು ಕನ್ನಡಿಗರ ಅನ್ನದ ಭಾಷೆಯಗಲು ಸಾಧ್ಯವಿಲ್ಲ, ಕನ್ನಡ ಭಾಷೆಯು ಕನ್ನಡಿಗರ ಆಶೋತ್ತರಗಳ ಭಾವನೆಯನ್ನು ಪ್ರತಿಬಿಂಬವಾಗಿ ರೂಪುಗೊಂಡಾಗ ಮಾತ್ರ ರಾಜ್ಯೋತ್ಸವ ಆಚರಣೆಗಳಿಗೆ ಬೆಲೆ ಬರುತ್ತದೆ. ಇಲ್ಲದಿದ್ದರೆ ಕೇವಲ ಆಚರಣೆಗಷ್ಟೇ ಸೀಮಿತವಾಗಿ ಕನ್ನಡ ನಾಡಿನಲ್ಲಿ ಕನ್ನಡಿಗರೇ ಅಲ್ಪಸಂಖ್ಯಾರಾದರೂ ಅಚ್ಚರಿಯಿಲ್ಲ ಎಂದರು.
ಪುರಸಭೆಯಲ್ಲಿ ಕನ್ನಡ ರಾಜ್ಯೋತ್ಸವ ನಗರದ ಆಡಳಿತ ಭವನದಲ್ಲಿ ಪುರಸಭೆ ಸದಸ್ಯರಾದ ಬಲವಂತಗೌಡ ಪಾಟೀಲ ನಾಡದೇವಿ ಭುವನೇಶ್ವರಿ ಫೋಟೋ ಪೂಜೆ ಸಲ್ಲಿಸಿ ಮಾತನಾಡಿ ನಾಡಿನ ಎಲ್ಲ ಕನ್ನಡಿಗರು ಹೆಮ್ಮೆ ಪಡುವ ಷಣ ಎಲ್ಲರೂ ನಾಡಿನ ಏಳಿಗೆಗಾಗಿ ದುಡಿಯೋಣ ಸುಂದರ ನಾಡು ಕಟ್ಟೋಣ, ಕನ್ನಡಿಗರು ಎಂಬ ಹೆಮ್ಮೆಯಿಂದ ಬಾಳೋಣ ಬದುಕೋಣ ಸಾರ್ವಜನಾಂಗ ಶಾಂತಿ ತೋಟ ನಮ್ಮದು. ಇದೀಗ ಕರ್ನಾಟಕ ಹೆಸರು ಪಡೆದು ಇಂದಿಗೆ 50 ವರ್ಷ ತುಂಬಿದ್ದು ಸುವರ್ಣ ಸಂಭ್ರಮ ಕಾರ್ಯಕ್ರಮವನ್ನು ಇಡೀ ವರ್ಷ ಆಚರಿಸಲು ರಾಜ್ಯ ಸರ್ಕಾರ ನಿರರ್ಧಸಿದ್ದು, ಅದಕ್ಕಾಗಿ ಒಂದು ಸುಂದರ ಸುವರ್ಣ ಸಂಭ್ರಮ ಕಾರ್ಯಕ್ರಮ ಆಯೋಜಿಸಿ ನಾಡುನುಡಿಗೆ ಗೌರವ ಸಲ್ಲಿಸಬೇಕು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಪುರಸಭೆ ಸದಸ್ಯರಾದ ಚನ್ನಬಸು ಯರಗಟ್ಟಿ, ಬಲವಂತಗೌಡ ಪಾಟೀಲ, ಮುಸ್ತಾಕ ಚಿಕ್ಕೋಡಿ,ರಾಜು ಗೌಡಪ್ಪಗೋಳ ಅಧಿಕಾರಿಗಳಾದ ಎಸ್ ಏನ್ ಪಾಟೀಲ, ಎಂ ಎಂ ಮುಗಳಖೊಡ,ವಿ ಜಿ ಕುಲಕರ್ಣಿ, ಸಿ ಎಸ್ ಮಠಪತಿ, ಎಸ್ ಜಿ ಅಳ್ಳಿಮಟ್ಟಿ, ಆರ್ ಎಸ್ ಹೂಗಾರ, ಎಸ್ ಎ ಲಮಾಣಿ, ಎಂ ಎಸ್ ಮುಲ್ಲಾ, ಬಿ ಏನ್ ಬಳಿಗಾರ, ಎಸ್ ಎಂ ಕಲಬುರ್ಗಿ, ಶ್ರೀಮತಿ ಆರ್ ಬಿ ಸೊರಾಗಾಂವಿಮಾರುತಿ ದಳವಾಯಿ ,ಉಪ ಸಿಬ್ಬಂದಿಗಳಾದ ರಾಮು,ಎಂ ಡಿ ಆನಂದ,ರಾಜೇಶ ಭಾವಿಕಟ್ಟಿ, ಶಿವಬಸು ಗೌಂಡಿ, ಸುನೀಲಗೌಡ ಪಾಟೀಲ,ಬಸವರಾಜ್ ರಾಯರ, ಪಂಡಿತ ಬಡಿಗೇರ,ನಿಂಗಪ್ಪ ಬಾಳಿಕಾಯಿ,ಅರ್ಜುನ್ ಮೊಪಗಾರ, ಗೋಪಾಲ ಟೋನಪೆ, ಅಮಿತ ಮದ್ದಿನಮಠ ಮಹಾಲಿಂಗ ದಡುತಿ, ಸಿರಾಜ ಪೆಂಡಾರಿ, ಸಂತೋಷ ಹುದ್ದಾರ, ಇರ್ಫಾನ, ಸಜ್ಜದ, ರಿಹಾನ, ಸೈಯಾದ, ಪಾರುಕ, ಸಮೀರ್, ಗೌಸ್, ಉಮರ,ಬಸವರಾಜ್ ಹುಕ್ಕೇರಿ,ಸೇರಿ ಹಲವರು ಇದ್ದರು ಕಾರ್ಯಕ್ರಮವನ್ನು ರವಿ ಹಲಸಪ್ಪಗೋಳ ನಿರೂಪಿಸಿ ವಂದಿಸಿದರು.