ಸಿಂಧಗಿ

ಮನಗೂಳಿ ಕುಟುಂಬದಿಂದ ಭೂ ಕಬಳಿಕೆ; ಮಾಜಿ ಶಾಸಕ ಭೂಸನೂರ

ಮನಗೂಳಿ ಕುಟುಂಬದಿಂದ ಭೂ ಕಬಳಿಕೆ; ಮಾಜಿ ಶಾಸಕ ಭೂಸನೂರ

       ಸಿಂದಗಿ 19 : ಶಾಸಕ ಅಶೋಕ ಮನಗೂಳಿಯವರು ಪೊಲೀಸ್ ಠಾಣೆಯನ್ನು ಕಾಂಗ್ರೆಸ್ ಕಚೇರಿ ಮಾಡಿಕೊಂಡ ಅವರ ಕುಟುಂಬ ನಗರದ ಹಲವೆಡೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಭೂ ಕಬಳಿಕೆ ಮಾಡಿದ್ದಾರೆ. ಈ ಬಗ್ಗೆ ನನ್ನ ಬಳಿ ದಾಖಲೆಗಳಿವೆ ಎಂದು ಮಾಜಿ ಶಾಸಕ ರಮೇಶ ಭೂಸನೂರ ಗಂಬೀರವಾಗಿ ಆರೋಪಿಸಿದರು.  ನಗರದ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಆರೋಪಕ್ಕೆ ಪೂರಕವಾಗಿ ದಾಖಲೆಗಳನ್ನು ಪ್ರದರ್ಶಿಸಿ ಮಾತನಾಡಿ, “ಸ.ನಂ.771ರಲ್ಲಿ ಗೊಲ್ಲರ ಸಮುದಾಯಕ್ಕೆ ಸೇರಿದ ಆಯಕಟ್ಟಿನ ಪ್ರದೇಶವನ್ನು ಶಾಸಕರ ಕುಟುಂಬ ಕಬಳಿಕೆ ಮಾಡಿಕೊಂಡು, ತಾಲ್ಲೂಕು ಶಿಕ್ಷಣ ಪ್ರಸಾರಕ ಸಹಕಾರಿ ಮಂಡಳಿಯ ಹೆಸರಿನಲ್ಲಿ ಪೆಟ್ರೋಲ್ ಬಂಕ್ ನಿರ್ಮಾಣ ಮಾಡಿ ಅದನ್ನು ಈಗ ಲೀಸ್‌ಗೆ ಕೊಟ್ಟಿದೆ' ಎಂದು ಆಪಾದಿಸಿದರು.  

     'ಬಸ್ ನಿಲ್ದಾಣದ ಬಳಿ ಸ.ನಂ 1028ರಲ್ಲಿ 3 ಎಕರೆ 35 ಗುಂಟೆ ನಿವೇಶನವನ್ನು 1944ರಲ್ಲಿ ತಾಲ್ಲೂಕು ಶಿಕ್ಷಣ ಪ್ರಸಾರಕ ಮಂಡಳಿಗೆ ದಾನ ಕೊಟ್ಟ ಆಸ್ತಿಯನ್ನು ಕೃಷಿಯೇತರ ಜಮೀನು ಎಂದು ಮಾಡಿಸಿ ಪ್ಲಾಟ್‌ಗಳ ಮಾರಾಟ ಮಾಡಿಕೊಳ್ಳಲಾಗಿದೆ. ಶಿಕ್ಷಣ ಸಂಸ್ಥೆಗೆ ದಾನವಾಗಿ ಕೊಟ್ಟ ವಿರಕ್ತಮಠದ ಆಸ್ತಿಯನ್ನು ಎಂ.ಸಿ. ಮನಗೂಳಿಯವರು ಮಾರಾಟ ಮಾಡಿದ್ದಾರೆ ಎಂದು ರಮೇಶ ಭೂಸನೂರ ದಾಖಲೆ ಪ್ರದರ್ಶಿಸಿದರು. 

      ಶಿಕ್ಷಣ, ವಿದ್ಯುತ್ ಹಾಗೂ ರಸ್ತೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ. ಮತಕ್ಷೇತ್ರದಲ್ಲಿ ಕೇವಲ 16 ತಿಂಗಳ ಅವಧಿಯಲ್ಲಿ 120 ಕಿ.ಮೀ. ರಸ್ತೆ ಮಾಡಲಾಗಿದೆ. ಮನಗೂಳಿ ಶಾಸಕರಾದ ಎರಡೂವರೆ ವರ್ಷದ ಅವಧಿಯಲ್ಲಿ ಸಿಂದಗಿ ನಗರದಲ್ಲಿ ಕೆಲವು ಕಡೆ ಲಾಭ ತರುವ ಸಿ.ಸಿ ರಸ್ತೆಗೆ ಗಂಟು ಬಿದ್ದಿದ್ದಾರೆ ವಿನ:ಹ 1 ಕಿ.ಮೀ. ಡಾಂಬರೀಕರಣ ರಸ್ತೆಯಾಗಿಲ್ಲ. ಅಲ್ಲದೆ 'ನಗರದ 842/ಅ 3 ಎಕರೆ 35 ಗುಂಟೆ ಈ ಆಸ್ತಿ ಈ ವರೆಗೂ ಮಲ್ಲಪ್ಪ ಚನವೀರ​‍್ಪ ಮನಗೂಳಿ ಅವರ ಹೆಸರಿಯಲ್ಲಿಯೇ ಉತಾರ ಇದೆ. ಈ ಜಮೀನಿನಲ್ಲಿ ಪುರಸಭೆ ವತಿಯಿಂದ 140 ಜನರಿಗೆ ಹಕ್ಕುಪತ್ರ ಹಂಚಿ ಮನೆಗಳು ನಿರ್ಮಾಣಗೊಂಡಿವೆ. ಈ ಆಸ್ತಿಯನ್ನು ಇನ್ನೂ ತಮ್ಮ ಹೆಸರಿನಲ್ಲಿಯೇ ಉಳಿಸಿಕೊಂಡಿದ್ದಾರೆ. ಸದ್ಯದ ಉತಾರ ಪ್ರದರ್ಶಿಸಿ ಚುನಾವಣೆ ಸಂದರ್ಭದಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿ ಮತ ಪಡೆಯುವ ದುರುದ್ದೇಶ ಹೊಂದಿದ್ದಾರೆ' ಎಂದು ದೂರಿದರು. 

      ಪುರಸಭೆಯ ಠರಾವು ಇಲ್ಲ, ಅಗತ್ಯ ಅನುಮತಿಯೂ ಇಲ್ಲದೆ 'ನಗರದಲ್ಲಿನ ಮಹಾತ್ಮಗಾಂಧಿ ವೃತ್ತ, ಪುತ್ಥಳಿ ಕಿತ್ತು ಹಾಕಿ ಅಲ್ಲಿ ಅಶೋಕ ಸ್ತಂಭ ನಿರ್ಮಾಣ ಮಾಡಿದ್ದಾರೆ. ಎಂದು ಆರೋಪಿಸಿದ ಅವರು 'ನಾನು ಶಾಸಕನಾದ 12 ವರ್ಷದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ಪುಸ್ತಕವಾಗುವಷ್ಟಿವೆ. 'ನನ್ನ ಅವಧಿಯಲ್ಲಿ ಟೆಂಡರ ಆಗಿದ್ದ ಹಲವಾರು ಕಾಮಗಾರಿಗಳನ್ನು ರದ್ದುಪಡಿಸಿ ಅದೇ ಅನುದಾನವನ್ನು ಈಗ ತಮ್ಮ ಕಾಮಗಾರಿ ಎಂದು ಪ್ರಚಾರ ಗಿಟ್ಟಿಸಿಕೊಳ್ಳುವ ಭಂಡತನ ಪ್ರದರ್ಶಿಸುತ್ತಿದ್ದಾರೆ. ನಗರದಲ್ಲಿ ನನ್ನ ಅವಧಿಯಲ್ಲಿ ನಿರ್ಮಾಣಗೊಂಡ ರಸ್ತೆಗಳಲ್ಲಿ ಲೈಟ್ ಕಂಬ ಮಾತ್ರ ಹಾಕಿದ್ದಾರೆ” ಎಂದು ಟೀಕಿಸಿದರು. ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಪೀರೂ ಕೆರೂರ, ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ ಮಾತನಾಡಿದರು. ಈ ವೇಳೆ ಬಿ.ಆರ್‌. ಯಂಟಮಾನ, ಸಿದ್ದು ಪಾಟೀಲ, ಬಿ.ಎಚ್‌.ಬಿರಾದಾರ, ಶಂಕರಲಿಂಗ ಬಗಲಿ, ಸಂಗನಗೌಡ ಪಾಟೀಲ, ಯಲ್ಲಪ್ಪ ಹಾದಿಮನಿ, ಗುರು ತಳವಾರ ಪ್ರಶಾಂತ ಹತ್ತಿರ, ನಾಗಪ್ಪ ಶಿವೂರ, ರಾಜಶೇಖರ ಪೂಜಾರಿ, ಸಿದ್ರಾಮ ಆನಗೊಂಡ, ವಿಠ್ಠಲ ನಾಯ್ಕೋಡಿ,  ನೀಲಮ್ಮ ಯಡ್ರಾಮಿ ಇದ್ದರು. 


ಸುದ್ದಿ ಓದಿ