ರಾಣೆಬೆನ್ನೂರ

ಹಾವೇರಿ ಜಿಲ್ಲಾ ನೋಟರಿ ಸಂಘದ ಅಧ್ಯಕ್ಷರಾಗಿ ಕುಮಾರ ಮಡಿವಾಳರ ಆಯ್ಕೆ

ಹಾವೇರಿ ಜಿಲ್ಲಾ ನೋಟರಿ ಸಂಘದ  ಅಧ್ಯಕ್ಷರಾಗಿ  ಕುಮಾರ ಮಡಿವಾಳರ ಆಯ್ಕೆ

ರಾಣೆಬೆನ್ನೂರ:1 ಕರ್ನಾಟಕ ರಾಜ್ಯ ನೋಟರಿ ಸಂಘದ ಸಲಹಾ ಸಮೀತಿಯ ಸದಸ್ಯ ಎಮ್‌. ಸಿ. ನಡುವಿನಮಠ, ಸಂಘದ ಉಪಾಧ್ಯಕ್ಷ  ಆರ್‌. ವ್ಹಿ. ಬೆಳಕೇರಿಮಠ ಹಾಗೂ ಕಾರ್ಯಕಾರಿ ಮಂಡಳಿಯ ಸದಸ್ಯ ಜಿ. ಕೆ. ಕಮ್ಮಾರ ಹಾಗೂ ಜಿಲ್ಲೆಯ  ರಾಣೇಬೆನ್ನೂರ, ಹಾವೇರಿ, ಶಿಗ್ಗಾಂವ, ಸವಣೂರ, ಹಾನಗಲ್ಲ, ಬ್ಯಾಡಗಿ, ಹಿರೇಕೆರೂರು, ರಟ್ಟೀಹಳ್ಳಿ, ತಾಲೂಕುಗಳ ಎಲ್ಲಾ ನೋಟರಿಗಳು ರವಿವಾರ   ಸಭೆ ಸೇರಿ, 2026-2027ನೇ ಸಾಲಿಗಾಗಿ ನೂತನವಾಗಿ ಹಾವೇರಿ ಜಿಲ್ಲಾ ನೋಟರಿ ಅಧ್ಯಕ್ಷರನ್ನಾಗಿ  ಸ್ಥಳೀಯ ಕುಮಾರ ಡಿ. ಮಡಿವಾಳರ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಹಾವೇರಿಯ ಕೆ. ಸಿ. ರಜಪೂತ  ಜಿಲ್ಲಾ  ಕಾರ್ಯದರ್ಶಿಯಾಗಿ, ಹಾವೇರಿಯ ಎನ್‌. ಎಸ್‌. ಪಾಟೀಲ  ಜಿಲ್ಲಾ ಸಂಚಾಲಕರಾಗಿ, ಸವಣೂರಿನ ಎಸ್‌. ಎಸ್‌. ಕೆರಿಯವರ, ಶಿಗ್ಗಾಂವಿಯ ಬಿ. ಎಮ್‌. ಸುಂಕದ, ಬ್ಯಾಡಗಿಯ ಕೆ. ಡಿ. ಪಾಟೀಲ, ಹಿರೇಕೆರೂರಿನ ದುರ್ಗೇಶ ತಿರಕಣ್ಣನವರ, ರಾಣೆಬೆನ್ನೂರಿನ ಪಿ. ಎಸ್‌. ಪಾಟೀಲ, ಹಾನಗಲ್ಲಿನ ಎಮ್‌. ಹೆಚ್‌. ತೊಗರಳ್ಳಿ, ಹಾವೇರಿಯ ಎಮ್‌. ಸಿ. ಮರಡಿ ಇವರುಗಳನ್ನು ಸದಸ್ಯರಾಗಿ ಆಯ್ಕೆ ಮಾಡಲಾಯಿತು ಎಂದು   ಜಿಲ್ಲಾ ನೋಟರಿ ಸಂಘವು ಪ್ರಕಟಣೆಯಲ್ಲಿ ತಿಳಿಸಿದೆ. 


ಸುದ್ದಿ ಓದಿ