ಕೊಟ್ಟೂರು ಎ.ಪಿ.ಎಂ.ಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಅಧಿಕಾರ ಸ್ವೀಕಾರ
ಕೊಟ್ಟೂರು ಎ.ಪಿ.ಎಂ.ಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಅಧಿಕಾರ ಸ್ವೀಕಾರ
ಕೊಟ್ಟೂರು 06 : ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೂತನ ಅಧ್ಯಕ್ಷರಾಗಿ ಹರಾಳು ಗ್ರಾಮದ ಅ.ನಂಜಪ್ಪ ಹಾಗೂ ಉಪಾಧ್ಯಕ್ಷರಾಗಿ ಪಂಚಮಿಸಾಲಿ ಸಮಾಜದ ಮುಖಂಡರು ನಗರದ ಪ್ರತಿಷ್ಠಿತ ತುಂಗಭದ್ರಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಯಾಗಿರುವ ಎಂ.ಶಿವಣ್ಣ ಇಂದು ಎ.ಪಿ.ಎಂ.ಸಿ ಸಭಾಂಗಣದಲ್ಲಿ ಸರ್ಕಾರದಿಂದ ನೇಮಕಗೊಂಡು ಅಧಿಕಾರ ಸ್ವೀಕಾರ ಮಾಡಿದರು ಈ ಸಂಧರ್ಬದಲ್ಲಿ ಸರ್ಕಾರದಿಂದ ನೇಮನಿರ್ದೇಶನಗೊಂಡಿರುವ 17 ಸದಸ್ಯರು ಹಾಜರಿದ್ದರು. ನೂತನ ಸದಸ್ಯರಾದ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಕೊಟ್ಟೂರಿನ ಚಿರಿಬಿ ಕೊಟ್ರೇಶಿ, ಬೇವೂರು ಗ್ರಾಮದ ದೇವಪ್ಪ, ಕೊಟ್ಟೂರಿನ ಕೋಟೆಯ ಮುಖಂಡ ಕೆ.ಶಿವಕುಮಾರಗೌಡ, ಹ್ಯಾಳ್ಯ ನಾಗರತ್ನಮ್ಮ ತಿಮ್ಮಲಾಪುರ ತಾಂಡದ ಜ್ಯೋತಿಲಕ್ಷ್ಮಿನೂರ್ಯನಾಯ್ಕ ಉಜ್ಜಿನಿಯ ಬಸಮ್ಮ, ಗಜಾಪುರದ ಎಲ್.ನಾಗರಾಜ್, ಕೆ.ಅಯ್ಯನಹಳ್ಳಿ ಗ್ರಾಮದ ಎಂ.ಓ.ಕೊಟ್ರಯ್ಯ, ಕೊಟ್ಟೂರು ಹೆಚ್.ಶಂಕ್ರ್ಪ, ತೂಲಹಳ್ಳಿ ಎಂ.ವೀರೇಶ್ ಕಲ್ಲನಗೌಡ, ಬಿ.ಶಿವಲಿಂಗಪ್ಪ, ನಿಂಬಳಗೇರಿಯ ಕೆ.ಕಲ್ಲಪ್ಪ, ಅಂಬಳಿಯ ಕಲ್ಲನಗೌಡ, ತೂಲಹಳ್ಳಿಯ ಶಾಂತನಗೌಡ, ಉಜ್ಜಿನಿಗ್ರಾಮದ ಎಸ್.ಕೊಡದಪ್ಪ, ಸರ್ಕಾರದಿಂದ ನಾಮನಿದೇಶನಗೊಂಡಿದ್ದಾರೆ.ಪತ್ರಿಕೆಯೊಂದಿಗೆ ಮಾತನಾಡಿದ ನೂತನ ಉಪಾಧ್ಯಕ್ಷರಾದ ಎಂ.ಶಿವಣ್ಣ, ನೂತನ ಅಧ್ಯಕ್ಷರಾಗಿ ಅಯ್ಕೆಯಾಗಿರುವ ಹರಾಳು ಗ್ರಾಮದ ಅ.ನಂಜಪ್ಪ , ಅಬಕಾರಿ ಇಲಾಖೆಯ ನಿವೃತ್ತ ಅಧಿಕಾರಿಯಾಗಿದ್ದು , ಇವರ ಅಧ್ಯಕ್ಷತೆಯಲ್ಲಿ 17 ಸದಸ್ಯರು ಒಳಗೊಂಡು ಕೃಷಿ ಉತ್ಪನ್ನ ಮಾರುಕಟ್ಟೆ ಅಭಿವೃದ್ದಿಗೇ ಶ್ರಮಿಸುವುದಲ್ಲದೇ, ವಿಜಯನಗರ ಜಿಲ್ಲೆಯಲ್ಲೆ ಅತೀ ಹೆಚ್ಚು ತೆರಿಗೆ ಸಂಗ್ರಹವಾಗುತ್ತಿದ್ದು, ಈಗಿರುವ ಜಾಗ ಸಾಲದು ಅಗಿರುವುದರಿಂದ ಕಾರ್ಯದರ್ಶಿ ಹೇಳಿರುವ ಪ್ರಕಾರ ಇನ್ನೂ 2-3 ಎಕರೆ ಜಾಗದ ಅವಶ್ಯಕತೆ ಇದ್ದು ಶೀಘ್ರದಲ್ಲೇ ಜಾಗವನ್ನು ಹುಡುಕಲು ಮೊದಲ ಸಭೆಯಲ್ಲೇ ಕಾರ್ಯನಿರತರಾಗುವುದಾಗಿ ಹೇಳುತ್ತಾ, ರೈತರ ಬೆಳೆದಂತ ಬೆಳೆಗೆ ಸೂಕ್ತ ಬೆಲೆ ಸಿಗುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಲ್ಲದೇ, ರೈತರು ಹಾಗೂ ಖರೀದದಾರರು ದಲ್ಲಾಲರು ಒಂದೇ ನ್ಯಾಣದ ಎರಡು ಮುಖಗಳಾಗಿದ್ದು ಅವರಿಬ್ಬರ ನುಡುವೆ ಸೇತುವೆ ರೀತಿಯಲ್ಲಿ ಕೆಲಸ ಮಾಡುವುದಾಗಿ ತಿಳಿಸುತ್ತಾ, ನಾವು ಅವಿರೋಧವಾಗಿ ಅಯ್ಕೆ ಯಾಗಲು ಕಾರಣೀಭೂತರಾಗಿರುವ ಮಾಜಿ ಶಾಸಕರು ಹಾಗೂ ಹಾಲೀ ಕೆ.ಎಂ.ಎಫ್ ಅಧ್ಯಕರಾದ ಭೀಮನಾಯ್ಕ ಹಾಗೂ ಕೂಡ್ಲಿಗಿ ಶಾಸಕರಾದ ಶ್ರೀನಿವಾಸ ಕೃತಜ್ಞತೆ ಸಲ್ಲಿಸುವುದಲ್ಲದೇ, ಅವರ ಮಾರ್ಗದರ್ಶನದಲ್ಲಿ ಕೊಟ್ಟೂರು ಎ.ಪಿ.ಎಂ.ಸಿ ಯನ್ನು ಜಿಲ್ಲೇಯಲ್ಲೇ ನಂ. 1 ಅಭಿವೃದ್ದಿ ಮಾಡುವುದಾಗಿ ಹೇಳಿದರು. ನಮ್ಮ ಅವಧಿ 3 ವರ್ಷಗಳಾಗಿದ್ದು, ಅಭಿವೃದ್ದಿ ಮಾಡಲು ಸಾಕಷ್ಟು ಸಮಯ ಸಿಕ್ಕಿದೆಯೆಂದು ಹೇಳಿದರು. ಈ ಸಂಧರ್ಬದಲ್ಲಿ ರಾಜ್ಯ ಬೀಜ ನಿಗಮದ ಹಾಲೀ ಅಧ್ಯಕ್ಷರಾದ ಸಾವಜ್ಜಿ ರಾಜೇಂದ್ರ್ರಸಾದ್, ಹಗರಿಬೊಮ್ಮನಹಳ್ಳಿಯ ಕಾಂಗ್ರೇಸ್ ಮುಖಂಡ ಅಕ್ಕಿ ತೋಟೇಶ್, ಬಿ.ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷರಾದ ದಾರುಕೇಶ್, ಪಂಚಮಸಾಲಿ ಮುಖಂಡ ಉದ್ಯಮಿ ಹುಲ್ಮನಿ ಮಲ್ಲೇಶ್, ಶೆಟ್ಟಿ ರಾಜಣ್ಣ, ಕಾಳಾಪುರ ಗ್ರಾಮದ ಮಾಜಿ ಅಧ್ಯಕ್ಷರಾದ ಭಂಡಾರಿ ಸಿದ್ದೇಶ್ ಸೇರಿದಂತೆ ಅನೇಕರು ಹಾಜರಿದ್ದು ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಕಾರಣೀಭೂತರಾದರು.