ಸಾಯಿ ಸರ್ಕಲ್ನಲ್ಲಿ ಕನಕದಾಸ ಜಯಂತಿ ದೃವತಾರೆಯಂತೆ ಅವತರಿಸಿದ ಕನಕದಾಸರು- ಶೇಖರ ಅಂಗಡಿ
ಸಾಯಿ ಸರ್ಕಲ್ನಲ್ಲಿ ಕನಕದಾಸ ಜಯಂತಿ ದೃವತಾರೆಯಂತೆ ಅವತರಿಸಿದ ಕನಕದಾಸರು- ಶೇಖರ ಅಂಗಡಿ
ಮಹಾಲಿಂಗಪುರ 18: ದೈವಸ್ತುತಿಯೇ ಪ್ರಮುಖವೇನಿಸಿದ ಭಕ್ತಿ ಪರಂಪರೆಯ ಕಾಲದಲ್ಲಿ ಧೃವತಾರೆಯಂತೆ ಅವತರಿಸಿದ ಕನಕದಾಸರು ಎಂದು ಪುರಸಭೆ ಮಾಜಿ ಅಧ್ಯಕ್ಷ ಶೇಖರ ಅಂಗಡಿ ಹೇಳಿದರು.
ಸ್ಥಳೀಯ ಕೆಂಗೇರಿಮಡ್ಡಿಯ ಸಾಯಿ ವೃತ್ತದಲ್ಲಿ ನಡೆದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಕನಕದಾಸರು ಮತ್ತು ಪುರಂಧರದಾಸರಂಥ ವೈಚಾರಿಕ ಸಂತರಿಂದಾಗಿ ಸಮಾಜದಲ್ಲಿ ಬೇರುಬಿಟ್ಟಿದ್ದ ಮೇಲು ಕೀಳು ಎಂಬ ಮತ್ತು ಜಾತಿ ಮತಗಳ ಸಿದ್ದಾಂತ ಪಕ್ಕಕ್ಕೆ ಸರಿದವು. ತಮ್ಮ ವೈಚಾರಿಕ ಮತ್ತು ಪ್ರತಿಭಟನಾ ನೆಲೆಗಟ್ಟಿನಿಂದ ದಾಸಸಾಹಿತ್ಯಕ್ಕೆ ಮತ್ತು ಕನ್ನಡ ಸಾಹಿತ್ಯಕ್ಕೆ ವೈಚಾರಿಕ ಪ್ರಭೆಯನ್ನು ನೀಡಿದರು. ಕನಕದಾಸರು ಆದಿಗುರು ಶಂಕರಾಚಾರ್ಯರು ಪ್ರತಿಪಾದಿಸಿದ ಅದೈತ ತತ್ವಸಾರವನ್ನು ಅನುಸರಿಸಿ ನಾನು ನನ್ನದೆಂಬ ಮೋಹ, ಪರಬ್ರಹ್ಮ ಬದುಕು, ಜೀವನಸಾರವನ್ನು ಬೋಧಿಸಿ ಮನುಜಕುಲ ಒಂದೆಂಬ ತತ್ವ ಸಾರಿದರು ಮಹಾನ ಸಂತ ಕನಕದಾಸರು ಎಂದರು.
ನಂತರ ಮಾತನಾಡಿದ ಗಣ್ಯರಾದ ಮಹಾಲಿಂಗಪ್ಪ ಜಕ್ಕನ್ನವರ ಮಾತನಾಡಿ ಕನಕದಾಸರು ಸಕಲ ಮನುಕುಲ ಉದ್ದಾರಕರಾಗಿದ್ದರು. ಸಮಾನತೆ ಸಾರಿದ ಸಂತ ಜಗತ್ತಿನ ಮಹಾನ ಚೇತನ, ವಿಶ್ವ ಗುರು ದಾಸ ಶ್ರೇಷ್ಠ ದಾಸ ಪರಂಪರೆಯಲ್ಲಿ ಇವರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ ಅವರು ರಚಿಸಿದ ಕೃತಿಗಳು ಇಂಗ್ಲೀಷ ಸೇರಿ ಹದಿನಾರು ಭಾಷೆಗಳಿಗೆ ಅನುವಾದವಾಗಿವೆ ಮನುಕುಲದ ಉದ್ದಾರವೇ ಅವರ ಧ್ಯೆಯವಾಗಿತ್ತು ಎಂದರು.
ನಂತರ ಮಾತನಾಡಿದ ಶರಣ, ಪ್ರವಚನಕಾರ ಮಹೇಶ ಇಟಕನ್ನವರ ಮಾತನಾಡಿ ತಿರುಪತಿ ತಿಮ್ಮಪ್ಪನ ವರ ಪ್ರಸಾದ ಬೀರ್ಪ ಮತ್ತು ಬಚ್ಚಮ್ಮ ದಂಪತಿಗಳಿಗೆ ಬಹಳ ದಿನಗಳಿಂದ ಮಕ್ಕಳು ಆಗಿರಲಿಲ್ಲ. ಅವರು ತಮಗೆ ಒಬ್ಬ ವಂಶೋದ್ದಾರಕನಾದ ಮಗನನ್ನು ಕರುಣಿಸು ಎಂದು ತಿಮ್ಮಪ್ಪನ ಮೊರೆ ಹೋದರು. ಅವರ ಕೋರಿಕೆ ಮನ್ನಿಸಿದ ತಿಮ್ಮಪ್ಪ ಒಬ್ಬ ಮಗನನ್ನು ಕರುಣಿಸಿದ ಆತನಿಗೆ ಅವರು ತಿಮ್ಮಪ್ಪ ಎಂದೇ ನಾಮಕರಣ ಮಾಡಿದರು ಎಂದರು.
ನಗರದ ಕೆಂಗೇರಿ ಮಡ್ಡಿಯಲ್ಲಿರುವ ಕನಕದಾಸ ಮತ್ತು ಸಾಯಿ ಸರ್ಕಲನಲ್ಲಿ ಇಬ್ಬರು ಮಹಾತ್ಮಾರ ಭಾವ ಚಿತ್ರಗಳಿಗೆ ಪೂಜೆ ಸಲ್ಲಿಸಿ ಮಾಲಾರೆ್ಣ ಮಾಡಿ ಕನಕದಾಸರ 537 ನೇ ಜಯಂತಿಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
ಮೆರವಣಿಗೆ : ಪ್ರಗತಿಪರ ರೈತರಾದ ಯಲ್ಲಣ್ಣಗೌಡ ಪಾಟೀಲ ಅವರು ನಗರದ ಕೆಂಗೇರಿ ಮಡ್ಡಿಯಲ್ಲಿರುವ ಕನಕ ಸಾಯಿ ಸರ್ಕಲನಲ್ಲಿ ಸಾಯಿ ಬಾಬಾ ಮತ್ತು ಕನಕದಾಸರ ಫೋಟೋಗೆ ಪೂಜ್ಯ ಸಲ್ಲಿಸಿ ಎತ್ತಿನ ಗಾಡಿಯಲ್ಲಿರುವ ಬ್ರಹತ್ ಕನಕರ ಫೋಟೋ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು, ಸಕಲ ಮಂಗಲವಾದ್ಯಗಳೊಂದಿಗೆ ಭಕ್ತ ಶ್ರೀ ಕನಕದಾಸರ ಫೋಟೋವನ್ನು ಬೀರಸಿದ್ದೇಶ್ವರ ದೇವಸ್ಥಾನಕ್ಕೆ ಬಂದು ತಲುಪಿ ಅಲ್ಲಿ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಅಲ್ಪೊಪಹಾರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಈ ಸಂದರ್ಭದಲ್ಲಿ ಹಿರಿಯರಾದ ಚಂದ್ರ್ಪ ಡೋಣಿ, ಪರಸಪ್ಪ ಬಂಡಿ, ಯಲ್ಲಪ್ಪ ಪಟ್ಟಣಕೋಡಿ, ಸುರೇಶ ಯರಗುದ್ರಿ, ಶ್ರೀಶೈಲ ಕಾರಜೋಳ, ಜಿ.ಎಸ್ ಗೊಂಬಿ, ಆನಂದ ಸನದಿ, ಜ್ಯೋತೆಪ್ಪ ಕಪರಟ್ಟಿ, ಪ್ರಬು ಹುಣಶಿಕಟ್ಟಿ, ಕರೆಪ್ಪ ಹುಣಶಿಕಟ್ಟಿ, ಸಂಗಪ್ಪ ಐಗಳಿ, ಮಾನಿಂಗ ಶಿವಣಗಿ, ಶಿವು ಹೂಗಾರ, ಭೀಮಶಿ ಹುಗಾರ, ಬಸಣ್ಣ ಓಲೆಕಾರ, ಯಲ್ಲಪ್ಪ ಐಗಳಿ, ರಾಜು ಡೋಣಿ ಸೇರಿದಂತೆ ಹಲವರು ಇದ್ದರು.