ಕನಕದಾಸರ ಇತಿಹಾಸದ ಕಲ್ಪನೆಯನ್ನು ಸಾಕಾರಗೊಳಿಸಿದ್ದು: ಮುಖ್ಯಮಂತ್ರಿ ಬೊಮ್ಮಾಯಿ
ಲೋಕದರ್ಶನ ವರದಿ
ಶಿಗ್ಗಾವಿ 12: ಇತಿಹಾಸದ ಕಲ್ಪನೆಯನ್ನು ಸಾಕಾರಗೋಳಿಸುವುದು ಕಷ್ಟಕರ ಕಾರ್ಯವಾಗಿದ್ದು, ಅಂತಹ ಕಾರ್ಯವನ್ನು, ಮಾನ್ಯ ಮುಖ್ಯಮಂತ್ರಿ ಬೊಮ್ಮಾಯಿ ಯವರು ಸಾಕಾರಗೋಳಿಸಿ, ಕನಕದಾಸರ ಐದು ಶತಮಾನದ ಹಿಂದೆ ಗತಿಸಿದ ಇತಿಹಾಸವನ್ನು ಕಲ್ಪನೆಯಮೂಲಕ ಇಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಿದ ಕೀತರ್ಿ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರಿಗೆ ಸಲ್ಲುತ್ತದೆ ಎಂದು ಸಾಮಾಜಿಕ,ಸಾಂಸ್ಕೃತಿಕ ಚಿಂತಕರಾದ ನಿಕೇತರಾಜ ಮೌರ್ಯ ಹೇಳಿದರು.
ತಾಲೂಕಿನ ಬಾಡ ಗ್ರಾಮದ ಕನಕದಾಸರ ಅರಮನೆ ಆವರಣದಲ್ಲಿ ನಡೆದ ಸಂತ ಭಕ್ತ ಕನಕದಾಸರ 535 ನೇ ಜಯಂತೋತ್ಸವ ಕಾರ್ಯಕ್ರಮವನ್ನುದ್ದೇಸಿಸಿ ಉಪನ್ಯಾಸ ನೀಡಿದ ಅವರು, ಕನಕದಾಸರು ವೀರ, ಶೂರರಾಗಿ ಮೇರೆದವರಾಗಿದ್ದರು. ರಕ್ತಪಾತ ಬೇಡವೇ ಬೇಡವೆಂದು ಕತ್ತಿ ಹಿಡಿದ ಕೈಯಲ್ಲಿ ತಂಬೂರಿ ಹಿಡಿದು, ಹೆಗಲಮೇಲೆ ಕಂಬಳಿ ಹಾಕಿಕೋಂಡು ಊರೂರು ಸುತ್ತಿ ಕೀರ್ತನ, ಜಾತ್ಯಾತೀತ ಅರ್ಥನೀಡುವ ಹಾಡು ಹೇಳುವಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವಮೂಲಕ ಕನಕ ಕಬೀರದಾಸರಾಗಿ ಮೇರೆದರು. ಅವರು ನಮ್ಮನ್ನಗಲಿರಬಹುದು, ಐದು ಶತಮಾನಗಳ ಹಿಂದೆ ಅವರು ಹಾಡಿದ ಹಾಡು, ಕೀರ್ತನಗಳು ಇನ್ನೂ ಜೀವಂತವಾಗಿವೆ. ಸೂರ್ಯ ಚಂದ್ರಾದಿ ಇರುವವರೆಗೂ ಕೂಡಾ ಅವರ ಆದರ್ಶಗಳು ಪ್ರಸ್ತುತವಾಗಿರಲಿವೆ ಎಂದು ಹೇಳಿದರು.
ಕನಕದಾಸರ ಜನ್ಮಸ್ಥಳ ಬಾಡ ಎಂಬುದನ್ನು ನಿರೂಪಿಸಿದವರು ಬಂಕಾಪುರ ಹಂಡೆ ಮನೆತನದವರು ಸೇರಿದಂತೆ ಈ ಗ್ರಾಮದ ಹಿರಿಯರು, ಅದಕ್ಕೆ ಕಲ್ಪನೆಯ ರೂಪ ನೀಡಿ ಸಾಕಾರಗೋಳಿಸಿದವರು ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯನವರು ಸೇರಿದಂತೆ ಹಲವು ರಾಜಕೀಯ ನಾಯಕರುಗಳು, ಇಲ್ಲಿ ಕನಕನ ನೂತನ ಮೂತರ್ಿಯಾಗಬೇಕೇಂಬ ಜನರ ಬೇಡಿಕೆಯನ್ನು ಮಾನ್ಯ ಮುಖ್ಯಮಂತ್ರಿಗಳು ಇಡೇರಿಸುವ ಭರವಸೆ ನಮಗಿದೆ ಎಂದು ಹೇಳಿದರು.
ಬಿಜೆಪಿ ಮುಖಂಡ ನವೀನ ಸವಣೂರ ಮಾತನಾಡಿದರು, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಲ್ಲೇಶಪ್ಪ ಹೊರಪೇಟೆ, ತಹಶೀಲ್ದಾರ ಶಿವಾನಂದ ರಾಣೆ, ತಾ.ಪ.ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ ತುರಕಾಣಿ, ಬಿ.ಇ.ಒ.ಎಮ್.ಬಿ.ಅಂಬಿಗೇರ, ಬಾಡ ಗ್ರಾ.ಪ.ಅಧ್ಯಕ್ಷೆ ಚನ್ನಮ್ಮ ಕಾಕೋಳ, ಕುರಬಸಮಾಜದ ತಾಲೂಕಾ ಅಧ್ಯಕ್ಷ ಫಕ್ಕೀರಪ್ಪ ಕುಂದೂರ, ಬಿ.ಜೆ.ಪಿ.ತಾಲೂಕಾ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಸುರೇಶಪ್ಪ ಹಂಡೆ, ಶಿವಾನಂದ ರಾಮಗಿರಿ, ಸತೀಶ ಆಲದಕಟ್ಟಿ, ಭಿರಪ್ಪ ಸಣ್ಣತಮ್ಮಣ್ಣವರ, ನಿಂಗಪ್ಪ ದೇವಿಶೆಟ್ಟಿ, ಗುರುನಗೌಡ ಪಾಟೀಲ, ವಿ.ಬಿ.ಪಾಟೀಲ, ಯಲ್ಲಪ್ಪ ಸುಂಕದ, ಎಮ್.ಎನ್.ವೆಂಕೋಜಿ, ಎಮ್.ಎನ್.ಹೊನಕೇರಿ, ಸಂತೋಷ ಚಾಕಲಬ್ಬಿ, ಎ.ಕೆ.ಆದವಾನಿಮಠ, ಮಲ್ಲಿಕಾಜರ್ುನ ಹಡಪದ, ಸೇರಿದಂತೆ ಇತರರು ಇದ್ದರು.