ಕಮಠಾಣಾ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ

ಕಮಠಾಣಾ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ


ಬೀದರ್  28: ದಕ್ಷಿಣ ಕ್ಷೇತ್ರದ ಕಮಠಾಣಾ ಗ್ರಾಮ  ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಿದ್ದು ಗ್ರಾಮಸ್ಥರಿಂದ  ಸಂಭ್ರಮಾಚರಣೆ ನಡೆಯಿತು. ಕಮಠಾಣಾ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಿದ ಸುದ್ದಿ ತಿಳಿದ ಗ್ರಾಮಸ್ಥರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರಿಗೆ ಹಾಗೂ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ  ಗುರುನಾಥ್ ಎಂ ರಾಜಗಿರಿ,  ಮುಖಂಡರಾದ  ಉಮೇಶ್ ಯಾಬಾ, ಮಾಣಿಕರಾವ್ ಪಾಟೀಲ, ಲೋಕೇಶ್ ಯಾಬಾ, ಸಚಿನ್ ಪಾಟೀಲ್, ಶಿವಕುಮಾರ್ ಯಾಬಾ, ಓಂಕಾರ್ ಸ್ವಾಮಿ, ಸಂತೋಷ್ ಪಾಟೀಲ್, ಶಿವಶಂಕರ್ ಪಾಟೀಲ್, ಆಫ್ಸರಮಿಯಾ, ಸಮೀರೋದೀನ, ಓಂಕಾರ್ ಓರಾದೆ, ಗುರುನಾಥ್ ಗಾದಿಗೆ, ಶ್ರೀಕಾಂತ್ ಯಾಬಾ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ