ಶರೀಫ ಶಿವಯೋಗಿ ಸ್ಪೋರ್ಟ್ಸ್ ಕ್ಲಬ್ ಕಬಡ್ಡಿ ಪಂದ್ಯಾವಳಿ
ಲೋಕದರ್ಶನ ವರದಿ
ಶಿಗ್ಗಾವಿ : ಸರ್ವರಿಗೂ ಆರೋಗ್ಯ ಬಲುಮುಖ್ಯ ಆರೋಗ್ಯವೇ ಭಾಗ್ಯ ಸದೃಢ ದೇಹವುಳ್ಳ ವ್ಯಕ್ತಿಯಲ್ಲಿ ವೈಚಾರಿಕ ಶಕ್ತಿ ಉದ್ಭವಗೂಂಡು ಸದೃಢ ದೇಶವನ್ನು ಕಟ್ಟಲು ಕಾರಣವಾಗುತ್ತಾನೆ. ಎಂದು ಶಿಗ್ಗಾವಿ ತಾಲೂಕ ಬಿಜೆಪಿ ಅಧ್ಯಕ್ಷ ಕ್ರೀಡಾ ಪ್ರೇಮಿ ಶಿವಾನಂದ ಮ್ಯಾಗೇರಿ ಹೇಳಿದರು.
ತಾಲೂಕಿನ ಶಿಶುನಾಳ ಸುಕ್ಷೇತ್ರದ ಶರೀಫ ಶಿವಯೋಗಿ ಸ್ಪೋರ್ಟ್ಸ್ ಕ್ಲಬ್ನವರು ಏರ್ಪಡಿಸಿದ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಯುವ ಸಮುದಾಯ ಮದ್ಯಪಾನ ಧೂಮಪಾನ ಓಸಿ ಇಸ್ಪೀಟ ಜೂಜು ಅನೇಕ ದುಶ್ಚಟಗಳಿಗೆ ಮಾರುಹೋಗುವ ಸಂದರ್ಭವನ್ನು ನಾವು ನೋಡುತ್ತಿದ್ದೇವೆ ಅದರಲ್ಲಿ ಶಿಶುನಾಳ ಸುಕ್ಷೇತ್ರದ ಯುವಕರು ಕ್ರೀಡೆಯನ್ನು ಮೈಗೂಡಿಸಿಕೊಳ್ಳುವುದರ ಜೊತೆಗೆ ದೈಹಿಕವಾಗಿ ನಾವು ಸದೃಢರಾದರೆ ಮಾನಸಿಕವಾಗಿ ನಾವು ಗಟ್ಟಿಗೊಳ್ಳುತ್ತೇವೆ ಎನ್ನುವುದನ್ನು ಕ್ರೀಡೆಯ ಮೂಲಕ ಕಬಡ್ಡಿ ಪಂದ್ಯಾವಳಿಯನ್ನು ಆಡುವ ಮೂಲಕ ಸಂತ ಶಿಶುನಾಳ ಶರೀಫರು ಜನಪದ ಸಾಹಿತ್ಯದೊಂದಿಗೆ ಇಡೀ ವಿಶ್ವಕ್ಕೆ ಮಾದರಿ ಆಗುವ ಮಾನವ ಬದುಕಿಗೆ ನಡೆ ನುಡಿ ಸಾಹಿತ್ಯ ಅನೇಕ ಪವಾಡಗಳೊಂದಿಗೆ ಸ್ಪೂತರ್ಿಯಾದ ನೆಲೆನಾಡಿನಲ್ಲಿ ಗ್ರಾಮೀಣ ಕ್ರೀಡೆಯ ಮೂಲಕ ಇಡೀ ನಾಡಿಗೆ ಮಾದರಿಯಾಗುವ ಕಾರ್ಯವನ್ನು ಸಂತಶಿಶುನಾಳ ಶರೀಫ ಶಿವಯೋಗಿಗಳ ಸ್ಪೋಟ್ಸರ್್ ಕ್ಲಬ್ ಯುವಕರು ಮಾಡಿದ್ದಾರೆ ಎಂದರು.
ವೇದಮೂರ್ತಿ ಜೋಗಯ್ಯ ಹಿರೇಮಠ, ನರಹರಿ ಕಟ್ಟಿ, ಬಸನಗೌಡ ರಾಮನಗೌಡ್ರ, ಡಾ. ಮಲ್ಲೇಶಪ್ಪ ಹರಿಜನ್, ಚೇತನ್ ಕಲಾಲ್, ಸುರೇಶ್ ಮೂಡನವರ್, ಸಂಜು ತಳಗೇರಿ,ಹನುಮಂತಪ್ಪ ಮಾದರ, ಪ್ರೊಫೆಸರ್ ಶಿವಯ್ಯಪೂಜಾರ್ ದೈಹಿಕ ಶಿಕ್ಷಕರಾದ ಬಸವರಾಜ ಹೊಸಪೇಟೆ, ಗಂಗಾಧರಯ್ಯ ಕಲ್ಮಠ, ಶಿವಾನಂದ ದೇವಗೇರಿ, ಕಲ್ಲನಗೌಡ ಚಂದನ ಗೌಡ, ಫಕೀರೇಶ ಜಾಡರ ,ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಶರೀಫ ಶಿವಯೋಗಿಗಳ ಟ್ರಸ್ಟ್ ಸಮಿತಿಯ ಪದಾಧಿಕಾರಿಗಳು ಶರೀಫ ಶಿವಯೋಗಿ ಸ್ಪೋಟ್ಸರ್್ ಕ್ಲಬ್ಬಿನ ಎಲ್ಲಾ ಪದಾಧಿಕಾರಿಗಳು ಯುವಕರು ಕ್ರೀಡಾಭಿಮಾನಿಗಳು ಪಾಲ್ಗೊಂಡಿದ್ದರು.