ಮಹಲಿಂಗಪುರ

ಸಮಾಜಘಾತುಕರನ್ನು ಮಟ್ಟ ಹಾಕಲು ಪೊಲೀಸರಿಗೆ ಪತ್ರಕರ್ತರು ಸಹಕಾರಿ

ಸಮಾಜಘಾತುಕರನ್ನು ಮಟ್ಟ ಹಾಕಲು ಪೊಲೀಸರಿಗೆ ಪತ್ರಕರ್ತರು ಸಹಕಾರಿ

ಮಹಾಲಿಂಗಪುರ : ಸಮಾಜ ವಿದ್ರೋಹಿ ಕೆಲಸಗಳನ್ನು ಮಾಡುವ ಜನರನ್ನು ಮಟ್ಟ ಹಾಕುವಲ್ಲಿ ಪೊಲೀಸರಿಗೆ ಪತ್ರಕರ್ತರು ಸಹಕಾರಿಯಾಗಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.

ಬುಧವಾರ ಮುಂಜಾನೆ ಸಿದ್ಧಾರೂಢ ಮಠದಲ್ಲಿ ಸ್ಥಳೀಯ ಕಾರ್ಯ ನಿರತ ಪತ್ರಕರ್ತರ ಸಂಘ ಏರ್ಪಡಿಸಿದ್ದ ಪ್ರಸಕ್ತ ವರ್ಷದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

 ಸಮಾಜದಲ್ಲಿ ನಡೆಯುವ ಮಾರಕ ಚಟುವಟಿಕೆಗಳು ಪೋಲಿಸ್ ಇಲಾಖೆಗೆ ಸುದ್ದಿ ಮುಟ್ಟುವ ಮುಂಚೆಯೇ ಪತ್ರಿಕೆಗಳ ಮೂಲಕ ಜಗಜ್ಜಾಹೀರಾಗುತ್ತವೆ.ಇದರಿಂದ ಪೊಲೀಸ್ ಇಲಾಖೆ ಎಚ್ಚೆತ್ತು ಕ್ರಮ ಕೈಗೊಳ್ಳುತ್ತದೆ ಎಂದರೆ ಪತ್ರಕರ್ತರು ಪೊಲೀಸ್   ಕಾರ್ಯದಲ್ಲಿ ಸಹಕರಿಸಿದಂತೆಯೇ ಸರಿ ಅಲ್ಲವೆ?. ಆದ್ದರಿಂದ ವಸ್ತು ನಿಷ್ಠ ಸುದ್ದಿಗಳನ್ನು ಬಿತ್ತರಿಸುವ ಪತ್ರಿಕೆ ಮತ್ತು ಪತ್ರಕರ್ತರಿಗೆ ಬೆಲೆ ಹೆಚ್ಚು ಎಂದರು. 

ಅಷ್ಟೇ ಅಲ್ಲದೆ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ರಂಗಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಲು ಸದಾ ಕಣ್ಗಾವಲಿನಂತೆ ಈ ಪತ್ರಿಕಾ ರಂಗ ದೇಶದ ಸಂವಿಧಾನದ ನಾಲ್ಕನೇ ಅಂಗದಂತೆ ವರ್ತಿಸುತ್ತದೆ. ಇದರ ಜೊತೆಗೆ ಅಧ್ಯಾತ್ಮಿಕ ಮತ್ತು ಕ್ರಿಡೆ ಕಡೆಗೂ ಗಮನ ಹರಿಸಿ ಸಮಾಜಕ್ಕೆ ಸಂಪೂರ್ಣ ಮಾಹಿತಿ ನೀಡಿ ಸಮಾಜದ ಅಭಿವೃದ್ಧಿಯಲ್ಲಿ ಸಹಕಾರಿಯಾಗುತ್ತದೆ. ಇದೆ ತೆರನಾಗಿ ಪತ್ರಕರ್ತರು ಪತ್ರಿಕಾ ಧರ್ಮ ಪಾಲಿಸಿ, ತುಳಿತಕ್ಕೊಳಗಾದ ದುರ್ಬಲ ಜನಾಂಗ, ಸ್ತ್ರೀಯರಿಗೆ ಮತ್ತು ಪ್ರತಿ ಸಮುದಾಯಕ್ಕೆ ನ್ಯಾಯ ಒದಗಿಸುವ ಸಾಮಥ್ರ್ಯ ಕೇವಲ ಪತ್ರಕರ್ತರಿಗಿದೆ ಎಂದರು.

ಕಾನಿಪ ಜಿಲ್ಲಾಧ್ಯಕ್ಷ ಆನಂದ ದಲಭಂಜನ ಮಾತನಾಡಿ,ಮಕ್ಕಳಿಗೆ ಪತ್ರಿಕೆ ಓದುವುದನ್ನು ಕಲಿಸಬೇಕಾಗಿದೆ ಹಾಗೂ ಡಿಜಿಟಲ್ ಮಾಧ್ಯಮಗಳ ಮಧ್ಯೆ ಪತ್ರಿಕೆಗಳನ್ನುಳಿಸುವ ಜವಾಬ್ದಾರಿ ಹಾಗೂ ಚಿಂತನೆಯ ಅಗತ್ಯವಿದೆ ಸಮಾಜಕ್ಕೂ ಪತ್ರಿಕಾ ಬಳಗದ ಬಗ್ಗೆ ಕಳಕಳಿ ಇರಬೇಕಾಗಿದೆ ಎಂದರು. ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ ಮಾತನಾಡಿದರು.

ಪತ್ರಕರಾದ ವಿಶ್ವಜ ಕಾಡದೇವರ,ಡಾ.ಟಿ.ಪಿ.ಗಿರಡ್ಡಿ, ವೆಂಕಟೇಶ ಗುಡೆಪ್ಪನವರ, ಶ್ರೀನಿವಾಸ ಬಬಲಾದಿ, ಇಲಾಹಿ ಜಮಖಂಡಿ ಇವರಿಗೆ ಸ್ಥಳೀಯ ಕಾನಿಪ ನೀಡುವ ಪತ್ರಿಕಾ ಮಿತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ತ್ರಕರ್ತರ ಸಾದಕ ಮಕ್ಕಳಾದ ನೀಟ್ ಸಾಧಕಿಯರಾದ ಹರ್ಷಿತಾ ನಾರನಗೌಡ ಉತ್ತಂಗಿ, ಸ್ತುತಿ ಜಯರಾಮಶೆಟ್ಟಿ,ಸರ್ಕಾರಿ  ನೌಕರಿ ಸಾಧಕರಾದ ಸಚಿನ್ ಈಶ್ವರಪ್ಪಗೋಳ, ಅರಬಾಜ ಖಾನ್ ಜಮಖಂಡಿ, ಪಿಯು ಸಾಧಕಿ ಬಿಂದು ಮನ್ನಯ್ಯನವರಮಠ ಇವರನ್ನು ಗೌರವಿಸಲಾಯಿತು, ದಿನಾಚರಣೆ ಪ್ರಯುಕ್ತ ಜರುಗಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಪಟ್ಟಣದ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ನಗದು ಬಹುಮಾನ ನೀಡಲಾಯಿತು.

ಸಿದ್ಧಾರೂಢ ಬ್ರಹ ವಿದ್ಯಾಶ್ರಮದ ಸಹಜಾನಂದ ಶ್ರೀಗಳು ಸಾನಿಧ್ಯ, ಕಾನಿಪ ಸಂಘದ ಆಧ್ಯಕ್ಷ ಮಹೇಶ ಆರಿ ಅಧ್ಯಕ್ಷತೆ ವಹಿಸಿ, ಜಿಬಿಎಲ್ ಕಾರ್ಯ ನಿರ್ವಾಹಕ ಅಧಿಕಾರಿ ಬಾಲಚಂದ್ರ ಭಕ್ಷಿ, ಡಾ.ವಿಜಯಕುಮಾರ ಕಣವಿ,ಕಾನಿಪ ರಾಜ್ಯ ಸದಸ್ಯ ಮಹೇಶ ಅಂಗಡಿ, ಪಿಕೆಪಿಎಸ್ ಅಧ್ಯಕ್ಷ ಬಸನಗೌಡ ಪಾಟೀಲ, ಕಾನಿಪ ಕಾರ್ಯದರ್ಶಿ  ಮೀರಾ ತಟಗಾರ, ಮಲ್ಲು ಸಂಗನ್ನವರ, ವಿನೋದ ಚೌಗಲಾ, ಮಹಾಲಿಂಗಪ್ಪ ಕೋಳಿಗುಡ್ಡ, ಸಂಜು ನಾಯಕ, ಶಂಕರ ಕಲ್ಯಾಣಿ ಇದ್ದರು, ಜಯರಾಮ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಷಣ ಕಿಶೋರಿ ಸ್ವಾಗತಿಸಿ, ನಾರನಗೌಡ ಉತ್ತಂಗಿ ನಿರೂಪಿಸಿ,ಚಂದ್ರಶೆಖರ ಮೋರೆ ವಂದಿಸಿದರು.


 

ಸುದ್ದಿ ಓದಿ