ಹಗರಿಬೊಮ್ಮನಹಳ್ಳಿ

ಪದ್ಮಶಾಲಿ ಸಮಾಜದಿಂದ ಜನಿವಾರಧಾರಣೆ ಕಾರ್ಯಕ್ರಮ

ಪದ್ಮಶಾಲಿ ಸಮಾಜದಿಂದ ಜನಿವಾರಧಾರಣೆ ಕಾರ್ಯಕ್ರಮ

ಲೋಕದರ್ಶನ ವರದಿ

ಹಗರಿಬೊಮ್ಮನಹಳ್ಳಿ 13: ಪ್ರತೀ ವರ್ಷದಂತೆ ಈ ಬಾರಿಯೂ ಸಹ ನೂಲು ಹುಣ್ಣಿಮೆಯ ಅಂಗವಾಗಿ ನಮ್ಮ ಪದ್ಮಶಾಲಿ ಸಮಾಜದಿಂದ ಜನಿವಾರಧಾರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಪದ್ಮಶಾಲಿ ಬಹೋತ್ತಮ ಸಮಾಜದ ತಾಲೂಕು ಅಧ್ಯಕ್ಷ ಅನಿಲ್ಕುಮಾರ್ ಜಾಣಾ ಹೇಳಿದರು. 

ಪಟ್ಟಣದ ಹಾಲಶಂಕರಸ್ವಾಮಿ ಮಠದಲ್ಲಿ ಆಯೋಜಿಸಿದ್ದ ಜನಿವಾರ ಧಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ ನೇಕಾರಿಕೆಯನ್ನೇ ವೃತ್ತಿಯನ್ನಾಗಿಸಿಕೊಂಡಿರುವ ನಮ್ಮ ಸಮಾಜ ಬಹಳ ಹಿಂದುಳಿದ ಸಮಾಜವಾಗಿದ್ದು ಇನ್ನು ಸಾಕಷ್ಟು ಸಂಘಟನೆಯಾಗಬೇಕಿದೆ ಆ ನಿಟ್ಟಿನತ್ತ ಮುಂದಿ ದಿನಗಳಲ್ಲಿ ನಮ್ಮ ಸಮಾಜದಿಂದ ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗುವುದು. ಈ 2ವರ್ಷ ಕೋವಿಡ್ ಹಾವಳಿಯಿಂದಾಗಿ ಸಮಾಜದ ಕಾರ್ಯ ಸ್ಥಗಿತಗೊಂಡಂತಾಗಿದೆ. ಇನ್ನು ಮುಂದೆ ಸಮಾಜದ ಅಭಿವೃದ್ಧಿಗಾಗಿ ತಾಲೂಕಿನಾಧ್ಯಂತ ಹಾಗೂ ಜಿಲ್ಲೆಯಾಧ್ಯಂತ ಸಂಘಟನೆಗೆ ಆಧ್ಯತೆ ನೀಡುತ್ತೇವೆ.

ಈ ನೂಲು ಹುಣ್ಣಿಮೆ ನಮ್ಮ ಸಮಾಜದ ಸಂಭ್ರಮದ ಹಬ್ಬವಾಗಿದ್ದು ಈ ಶುಭದಿನದಂದೇ ನಮ್ಮ ಸಮುದಾಯ ಬಾಂಧವರು ಹೊಸ ಜನಿವಾರ ಧಾರಣೆಯನ್ನು ಮಾಡಿಕೊಳ್ಳುತ್ತಾ ಬಂದಿದ್ದಾರೆ. ಅದೇ ರೀತಿ ಈ ಬಾರಿಯೂ ಸಹ ನಮ್ಮ ಕುಲದೈವವಾದ ಶ್ರೀ ಮಾರ್ಕಂಡೇಶ್ವರ ಸ್ವಾಮಿಯ ಪೂಜೆಯೊಂದಿಗೆ ಹೊಸ ಜನಿವಾರಗಳನ್ನು ಕುಲಬಾಂಧವರಿಗೆ ವಿತರಣೆ ಮಾಡುತ್ತಿದ್ದೇವೆ ಎಂದರು.  ಹಾಲಸಿದ್ದೇಶ್ವರಸ್ವಾಮೀಜಿ ಮಾತನಾಡಿ ನಮ್ಮ ಹಿರಿಯ ಸ್ವಾಮೀಜಿಗಳ ಕಾಲದಿಂದಲೂ ಇವರು ನಮ್ಮ ಮಠದಲ್ಲಿಯೇ ತಮ್ಮ ಸಮಾಜದ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿರುವುದು ಸ್ವಾಗತಾರ್ಹ. ಸಣ್ಣ ಪುಟ್ಟ ಸಮುದಾಯಗಳು ಸಂಘಟನೆಯಾಗುವ ಮೂಲಕ ಸಮಾಜ ಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂಬುದಕ್ಕೆ ಪದ್ಮಶಾಲಿ ಸಮಾಜ ಉದಾಹರಣೆಯಾಗಿದೆ ಎಂದರು. 

ಈ ಸಂದರ್ಭದಲ್ಲಿ ಪದ್ಮಶಾಲಿ ಸಮಾಜದ ಸರ್ವ ಸದಸ್ಯರು ಹಾಗೂ ಮಹಿಳಾ ಮಂಡಳಿಯ ಕಾರ್ಯಕತರ್ೆಯರು ಉಪಸ್ಥಿತರಿದ್ದರು 

ಸುದ್ದಿ ಓದಿ