ರಾಣೆಬೆನ್ನೂರ

ರೋಟರಿ ಹಾಗೂ ಇನ್ನರ್ ವೀಲ್ ನೂತನ ಪದಾಧಿಕಾರಿಗಳ ಪದಗ್ರಹಣ

ರೋಟರಿ ಹಾಗೂ ಇನ್ನರ್ ವೀಲ್ ನೂತನ ಪದಾಧಿಕಾರಿಗಳ ಪದಗ್ರಹಣ

ರಾಣೆಬೆನ್ನೂರು 4: ನಗರದ ವರ್ತಕರ ಸಂಘದ ಸಮುದಾಯ ಭವನದಲ್ಲಿ ರೋಟರಿ ಕ್ಲಬ್ ಹಾಗೂ ಇನ್ನರ್ ವೀಲ್ ಕ್ಲಬ್ನ 2025ಹಿ26್ಫೂ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ವಿಜೃಂಭಣೆಯಿಂದ ನಡೆಯಿತು.  ಸಮಾರಂಭದಲ್ಲಿ ರೋಟರಿ ಕ್ಲಬ್ನ ನೂತನ ಅಧ್ಯಕ್ಷರಾಗಿ ಪ್ರವೀಣ್ ಎಂ. ಖನ್ನೂರ, ಕಾರ್ಯದರ್ಶಿಯಾಗಿ ಜಿ.ಎಸ್‌. ರಾಮಚಂದ್ರ ಹಾಗೂ ಇನ್ನರ್ ವೀಲ್ ಕ್ಲಬ್ನ ಅಧ್ಯಕ್ಷೆಯಾಗಿ ಪ್ರಮೀಳಾ ಜಂಬಿಗಿ ತ್ರಿವೇಣಿ ಪವಾರ್ ಸೇರಿದಂತೆ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ನಡೆಯಿತು.  ಜಿಲ್ಲಾ ರಾಜ್ಯಪಾಲ ರೋ. ಎಸ್‌. ಜಯರಾಮನ್ ಹಾಗೂ ಇನ್ನರ್ ವೀಲ್ ಜಿಲ್ಲಾ ರಾಜ್ಯಪಾಲ ಭಾರತಿ ಜಂಬಿಗಿ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.  

ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಚೇರ್ಮನ್ ಡಾ. ಬಸವರಾಜ ಕೇಳಗಾರ, ಸಹಾಯಕ ರಾಜ್ಯಪಾಲ ಬಸವರಾಜ ಸುಂಕಾಪುರ, ಮಾಜಿ ಅಧ್ಯಕ್ಷೆ ದೀಪಾಲಿ ಪುನಿತ್, ಮೀನಾ ಗುಪ್ತಾ, ಮಂಗಳಗೌರಿ ಪೂಜಾರ, ಸಂಜನಾ ಕುರುವತ್ತಿ, ಜಿ.ಜಿ. ಹೊಟ್ಟಿಗೌಡರ, ಡಾ. ನಾರಾಯಣ ಪವಾರ್, ಶಿವಯೋಗಿ ಅಂಗಡಿ, ಕೆ.ವಿ. ಶ್ರೀನಿವಾಸ್, ಐ.ಎನ್‌. ಪಾಟೀಲ, ಬಿ.ಜೆ. ಹಿರೇಮಠ, ರೋಹಿತ್ ಅಗರವಾಲ್, ಶ್ರೀನಿವಾಸ್ ಗುಪ್ತಾ, ಫಕೀರ​‍್ಪ ಹೊನ್ನಾಳಿ, ಉಮಾಪತಿ ಹೊನ್ನಾಳಿ, ಜಯಣ್ಣ ಜಂಬಿಗಿ, ಗಣೇಶ್ ಜಾಧವ, ಎಸ್‌.ಕೆ. ಮಾಳಗಿ, ಪೂಜಾ ವಿರೂಪಣ್ಣವರ, ಜಯಾ ಶ್ರೀನಿವಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. 


ಸುದ್ದಿ ಓದಿ