ಚದುರಂಗ ಪಂದ್ಯಾವಳಿಯನ್ನು ಮಹಾವಿದ್ಯಾಲಯದ ಸಭಾಂಗಣದಲ್ಲಿ ಉದ್ಘಾಟನೆ

ಚದುರಂಗ ಪಂದ್ಯಾವಳಿಯನ್ನು ಮಹಾವಿದ್ಯಾಲಯದ ಸಭಾಂಗಣದಲ್ಲಿ ಉದ್ಘಾಟನೆ

ಚದುರಂಗ ಪಂದ್ಯಾವಳಿಯನ್ನು ಮಹಾವಿದ್ಯಾಲಯದ ಸಭಾಂಗಣದಲ್ಲಿ ಉದ್ಘಾಟನೆ 

ಧಾರವಾಡ 06:  ಚದುರಂಗ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ಕ್ರೀಡೆಯಾಗಿದೆ. ಇದರ  ಗುಪ್ತರ ಕಾಲಘಟ್ಟದಿಂದ ಇತಿಹಾಸ ಪ್ರಾರಂಭವಾಯಿತು ಎಂದು ಆಡಳಿತ ಮಂಡಳಿ ಖಜಾಂಚಿ ಎನ್‌.ಎಸ್ ಕುಲಕರ್ಣಿ ಹೇಳಿದರು.ಕೆ. ಇ ಬೋರ್ಡ್‌ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ಅಂತರ್ ಮಹಾವಿದ್ಯಾಲಯಗಳ  ಚದುರಂಗ ಪಂದ್ಯಾವಳಿಯನ್ನು ಮಹಾವಿದ್ಯಾಲಯದ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಡಾ.   ಸುನಿತ್ ಪುರೋಹಿತ ಮಾತನಾಡಿ, ವಿದ್ಯಾರ್ಥಿಗಳು ಸೋಲು ಗೆಲುವುಗಳನ್ನ ಸಮಾನವಾಗಿ ಸ್ವೀಕರಿಸಿ ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಳ್ಳಿ. ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಮುಖ್ಯ ಎಂದರು.ಅಧ್ಯಕ್ಷತೆಯನ್ನ ವಹಿಸಿಕೊಂಡಂತ ಪ್ರಾಚಾರ್ಯ ಪ್ರೊ.ಎಂ ಎ ಸಿದ್ಧಾಂತ ಮಾತನಾಡಿ, ವಿದ್ಯಾರ್ಥಿಗಳು ಚಂದುರಂಗದ ನಿಯಮಾವಳಿಗಳನ್ನು ಅರಿತುಕೊಂಡು ತಾಳ್ಮೆಯಿಂದ ಆಟ ಆಡಿ ಎಂದು ತಿಳಿಸಿದರು. ಈ  ವೇಳೆ ಭಾರತಿ ಅಂಗಡಿ, ಶಿವಪ್ಪ ಗಾಣಿಗೇರ, ಆನಂದ್ ಎಲಿಗಾರ್ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು. ಪ್ರೊ.ಈಶ್ವರರಾವ್ ಕರಾತ್ ನಿರೂಪಿಸಿದರು.--ಪೋಟೋ:ಧಾರವಾಡ - ಕಾರ್ಯಕ್ರಮವನ್ನು ಗಣ್ಯರು ಸಸಿಗೆ ನೀರು ನೀಡುವ ಮೂಲಕ ಉದ್ಘಾಟಿಸಿದರು. 


ಸುದ್ದಿ ಓದಿ