ತಾಂತ್ರಿಕ ಯುಗದಲ್ಲಿ ಎಲ್ಲರೂ ಜ್ಞಾನವನ್ನು ಪಡೆದುಕೊಂಡರೇ ಮಾತ್ರ ಬೆಲೆ ಇರುತ್ತದೆ
ಲೋಕದರ್ಶನ ವರದಿ
ಶಿಗ್ಗಾವಿ 15: ದಿನನಿತ್ಯ ಗುರುಗಳು ಹೇಳುವ ಪ್ರತಿಯೊಂದು ಅಭ್ಯಾಸವನ್ನು ಶ್ರದ್ಧೆಯಿಂದ ಕಲಿತು ಒಬ್ಬ ಆದರ್ಶ ವ್ಯಕ್ತಿಯಾಗಲು ಸಂಕಲ್ಪ ಮಾಡೋಣ ಎಂದು ವಿದ್ಯಾರ್ಥಿನಿ ಶಿವರಂಜಿನಿ ಹೇಳಿದಳು.
ಪಟ್ಟಣದ ಕುನ್ನೂರ ಇಂಟರನ್ಯಾಶನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಚಾಚಾ ಜವಾಹರಲಾಲ ನೆಹರೂರವರ ಭಾವಚಿತ್ರಕ್ಕೆ ವಿದ್ಯಾರ್ಥಿಗಳು ಪೂಜೆ ನಂತರ ಪುಷ್ಪ ಸಮರ್ಪಿ ಸಿ ಮಾತನಾಡಿ ಇಂದಿನ ತಾಂತ್ರಿಕ ಯುಗದಲ್ಲಿ ಎಲ್ಲರೂ ಜ್ಞಾನವನ್ನು ಪಡೆದುಕೊಂಡರೇ ಮಾತ್ರ ಬೆಲೆ ಇರುತ್ತದೆ ಎಂದರು.
ವಿದ್ಯಾರ್ಥಿ ಗಣೇಶ ಮಾತನಾಡಿ ಶಿಕ್ಷಕರು ಹಾಗೂ ತಂದೆ ತಾಯಿಗಳು ಹೇಳಿದ ಮಾತನ್ನು ಚಾಚು ತಪ್ಪದೇ ಪಾಲಿಸಿದರೇ ಒಬ್ಬ ಒಳ್ಳೆಯ ವಿದ್ಯಾರ್ಥಿಯಾಗಿ ಹೊರಹೊಮ್ಮಲು ಸಾಧ್ಯಎಂದರು.
ವಿದ್ಯಾರ್ಥಿನಿ ಅನ್ವಿತಾ ಮಾತನಾಡಿ ಭಾರತದೇಶಕ್ಕಾಗಿ ಮಡಿದ ಅನೇಕ ಸ್ವಾತಂತ್ರ್ಯ ಹೋರಾಟಗಾರರು, ವೀರಯೋಧರನ್ನು, ರೈತರನ್ನು ನನೆದು ನಾವು ಜೀವನವನ್ನು ಸಾಗಿಸಬೇಕು ಅಲ್ಲದೇ ಅವರ ಆದರ್ಶ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿ ಸಮರ್ಥಕ ಬಾಡಿತಾಯಿ ಮೊದಲು ಪಾಠಶಾಲೆಯಾದರೆ ಗುರುಗಳೇ ನಮ್ಮ ಜೀವನ ರೂಪಿಸುವ ಸೂತ್ರದಾರಿಗಳು ಆದ್ದರಿಂದ ನಾವು ಗುರುಗಳು ಹೇಳಿದ ಹಾಗೇ ದೈನಂದಿನ ಅಭ್ಯಾಸವನ್ನು ಅಂದೇ ಪಠಣ ಮಾಡಬೇಕು ಎಂದರು.
ಪ್ರಾಚಾರ್ಯ ಶಿವು ಹಾವೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ ನಿಮ್ಮ ಸುಂದರ ವಿದ್ಯಾರ್ಥಿ ಜೀವನದಲ್ಲಿ ಯಸಸ್ಸು ಸಾಧಿಸಬೇಕು ಹಾಗೂ ಉನ್ನತ ಹುದ್ದೆಯನ್ನು ಅಲಂಕರಿಸಲು ಕಷ್ಟ ಪಟ್ಟು ಓದಿ ನಿರಂತರವಾಗಿ ಪ್ರಯತ್ನಿಸಬೇಕು ಎಂದರು.
*2021-22 ನೇ ಸಾಲಿನ ಎಸ್.ಎಸ್.ಎಲ್.ಸಿಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
-ಪ್ರಾಚಾರ್ಯ ಶಿವು ಹಾವೇರಿ.
ಈ ಸಂದರ್ಭದಲ್ಲಿ ಮಾರುತಿ ಲಮಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು, ವೇದಿಕೆಯ ಮೇಲೆ ವಿದ್ಯಾರ್ಥಿಗಳಾದ ಅಂಬಿಕಾ, ಲಕ್ಷ್ಮೀ, ಸುಷ್ಮಾ, ನಿಖೀಲ, ಸಾಕೀಭ, ಮೈತ್ರಿ, ಪ್ರಜ್ವಲ, ಮಾಹಿನೂರ, ದೀಕ್ಷಿತ, ಬಿ.ಬಿ.ಜವೇರಿಯಾ, ಗಗನ ಶೇಜವಾಡಕರ ಸೇರಿದಂತೆ ಮತ್ತು ಶಿಕ್ಷಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಂಗೀತಾ, ಮಂಜುಳಾ ಪ್ರಾರ್ಥಿ ಸಿದರು, ಸುನೀತಾ ಕಮ್ಮಾರ ಸ್ವಾಗತಿಸಿದರು, ಲಾವಣ್ಯ ಸೋಮಸಾಗರ ವಂದಿಸಿದರು, ಪವೀತ್ರಾ ಕಿರೇಸೂರ ಕಾರ್ಯಕ್ರಮ ನಿರ್ವಹಿಸಿದರು