ವಿಜ್ಞಾನ-ತಂತ್ರಜ್ಞಾನ ಯುಗದಲ್ಲಿ ವೃತ್ತಿಗಳ ಬದುಕಲ್ಲಿ ಬಿರುಗಾಳಿ ಎದ್ದಿದೆ
ವಿಜ್ಞಾನ-ತಂತ್ರಜ್ಞಾನ ಯುಗದಲ್ಲಿ ವೃತ್ತಿಗಳ ಬದುಕಲ್ಲಿ ಬಿರುಗಾಳಿ ಎದ್ದಿದೆ
ಹಂಪಿ 16: ‘ಇಂದಿನ ವಿಜ್ಞಾನ-ತಂತ್ರಜ್ಞಾನ ಯುಗದಲ್ಲಿ ಅನೇಕ ವೃತ್ತಿಗಳ ಬದುಕಲ್ಲಿ ಬಿರುಗಾಳಿ ಎದ್ದಿದೆ. ಇದರಿಂದ ಮೇದಾರ ವೃತ್ತಿಯೂ ಹೊರತಾಗಿಲ್ಲ’ೆ ಎಂದು ಸಂಶೋಧನಾರ್ಥಿ ಶಿಲ್ಪ ಹೆಚ್.ವಿ. ಅವರು ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಕನ್ನಡ ಭಾಷಾಧ್ಯಯನ ವಿಭಾಗದಲ್ಲಿ ನವೆಂಬರ್ 14 ಗುರುವಾರ ಹಮ್ಮಿಕೊಂಡಿದ್ದ 271ನೇ ವಾರದ ಮಾತು ಆನ್‌ಲೈನ್ ಕಾರ್ಯಕ್ರಮದಲ್ಲಿ ‘ಮೇದಾರ ವೃತ್ತಿಪದಗಳು’ ಎಂಬ ವಿಷಯದ ಕುರಿತು ಅವರು ಮಾತನಾಡುತ್ತಿದ್ದರು. ಮೇದಾರ ಸಮುದಾಯದ ಹಳೆಯ ತಲೆಮಾರಿನವರು ಜೀವನೋಪಾಯಕ್ಕಾಗಿ ಬೇರೆ ಸೌಲಭ್ಯಗಳಿಲ್ಲದೆ ತಮ್ಮ ಮೂಲವೃತ್ತಿಯನ್ನೇ ನಂಬಿ ಮುಂದುವರೆಸಿಕೊಂಡು ಬಂದಿದ್ದಾರೆ.
ಪ್ಲಾಸ್ಟಿಕ್ ವಸ್ತುಗಳ ಬಳಕೆಯಿಂದಾಗಿ ಬಿದಿರುಗಳಿಂದ ಎಣೆಯಲ್ಪಟ್ಟ ವಸ್ತುಗಳು ಕಣ್ಮರೆಯಾಗಿವೆ. ಆದರೆ ಹಬ್ಬ-ಹರಿದಿನ, ಮದುವೆ ಶುಭಸಮಾರಂಭಗಳಂತಹ ಸಂದರ್ಭದಲ್ಲಿ ಬಿದಿರಿನ ವಸ್ತುಗಳು ಬಳಕೆಯಾಗುತ್ತವೆ. ಹೊಸಪೇಟೆ ಭಾಗದ ಮೇದಾರ ಸಮುದಾಯದವರನ್ನು ಸಂದರ್ಶಿಸಿದಾಗ ಪಾರಂಪರಿಕವಾದ ಈ ವೃತ್ತಿಯನ್ನು ಆಧುನೀಕರಣಗೊಳಿಸಿ ಹೊಸ ಹೊಸ ಶೈಲಿಯಲ್ಲಿ, ಹೊಸ ಮಾದರಿಗಳಲ್ಲಿ ವಿವಿಧ ಬಗೆಯ ಸಾಮಾಗ್ರಿಗಳನ್ನು ಸಿದ್ಧಪಡಿಸಲು ಈ ಸಮುದಾಯದ ಮಹಿಳೆಯರಿಗೆ ತರಬೇತಿ ಕಾರ್ಯಕ್ರಮಗಳನ್ನು ಏರಿ್ಡಸಲಾಗುತ್ತದೆ.
ಇಲ್ಲಿ ಕೈಕಸುಬಿಗಿಂತ ಆಧುನಿಕ ಯಂತ್ರೋಪಕರಣಗಳ ಬಳಕೆ ಜಾಸ್ತಿ ಇದೆ ಎನ್ನುವುದನ್ನು ತಿಳಿಸಿದರು. ಪ್ರತಿಯೊಂದು ವೃತ್ತಿಯು ತಮ್ಮ ಮೂಲವೃತ್ತಿಗೆ ಸಂಬಂಧಿಸಿದಂತೆ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಭಾಷಿಕವಾಗಿ ಪದಕೋಶವನ್ನು ಅಡಗಿಸಿಟ್ಟುಕೊಂಡಿರುತ್ತದೆ ಎಂದು ಉದಾಹರಣೆ ಸಹಿತ ಮಂಡಿಸಿದರು.
ಕನ್ನಡ ಭಾಷಾಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ಪಿ. ಮಹಾದೇವಯ್ಯ ಅವರು, ಸಂಶೋಧನಾ ವಿದ್ಯಾರ್ಥಿಗಳಾದ ಬಸಪ್ಪ ಬಿ., ಪ್ರಜ್ವಲ್ ಜೆ. ಅವರು ಪ್ರತಿಕ್ರಿಯೆ ನೀಡಿದರು. ಕಾರ್ಯಕ್ರಮದ ಸಂಚಾಲಕರಾದ ಚೌಡಪ್ಪ ಪಿ., ಅಂಬಿಕಾ, ಚೆಂದಸ್ವಾಮಿ ವಿ. ಉಪಸ್ಥಿತರಿದ್ದರು. ವಿಭಾಗದ ಆಂತರಿಕ ಮತ್ತು ಬಾಹ್ಯ ಸಂಶೋಧನಾರ್ಥಿಗಳು ಅಂತರ್ಜಾಲ ವೇದಿಕೆಯಲ್ಲಿ ಭಾಗವಹಿಸಿದ್ದರು.