ಪ್ರಿಯಾಂಕಗಾಂಧಿ ಘೋಷಿಸಿದ 6ನೇ ಗ್ಯಾರಂಟಿ ಜಾರಿಗೊಳಿಸಿ - ಎಸ್‌.ಅರ್ಕಾಣಿ

ಪ್ರಿಯಾಂಕಗಾಂಧಿ ಘೋಷಿಸಿದ 6ನೇ ಗ್ಯಾರಂಟಿ ಜಾರಿಗೊಳಿಸಿ - ಎಸ್‌.ಅರ್ಕಾಣಿ

ಪ್ರಿಯಾಂಕಗಾಂಧಿ ಘೋಷಿಸಿದ 6ನೇ ಗ್ಯಾರಂಟಿ ಜಾರಿಗೊಳಿಸಿ - ಎಸ್‌.ಅರ್ಕಾಣಿ

ಬೆಂಗಳೂರು (ಬಳ್ಳಾರಿ) 03: ಈ ಹಿಂದೆ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಹಾಗೂ ಖಾನಾಪುರದಲ್ಲಿ ಎಐಸಿಸಿಯ ಪ್ರಿಯಾಂಕಾ ಗಾಂಧಿ ಅವರು ಘೋಷಿಸಿದ ಆರನೇ ಗ್ಯಾರಂಟಿಯಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ ರೂ. 15 ಸಾವಿರ ಮತ್ತು ಸಹಾಯಕಿಯರಿಗೆ ರೂ. 10 ಸಾವಿರ ಗೌರವ ಧನ ನೀಡಬೇಕೆಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ನ ಬಳ್ಳಾರಿ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಕಾರ್ಯದರ್ಶಿ ಎಸ್‌.ಅರ್ಕಾಣಿ ಅವರು ಒತ್ತಾಯಿಸಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ ನಲ್ಲಿ ಎಐಟಿಯುಸಿ ನೇತೃತ್ವದಲ್ಲಿ ಖಾಯಂ ಕೆಲಸಕ್ಕಾಗಿ ಗೌರವ ಧನ ಹೆಚ್ಚಳ, ಗ್ರಾಚ್ಯುಟಿ ಅನುದಾನ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹಮ್ಮಿಕೊಂಡಿದ್ದ ಅನಿರ್ದಿಷ್ಟ ಹೋರಾಟ, ಅಹೋರಾತ್ರಿ ಧರಣಿ, ಬೆಂಗಳೂರು ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಸಕ್ತ ಬಜೆಟ್ ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಪ್ರಿಯಾಂಕ ಗಾಂಧಿ ಘೋಷಿಸಿದ ಆರನೇ ಗ್ಯಾರಂಟಿಯಾಗಿ ಗೌರವ ಧನ ಹೆಚ್ಚಿಸಬೇಕೆಂದರು. ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗಾಗಿ ಸರ್ಕಾರ ಜಾರಿಗೊಳಿಸಿರುವ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 1975ರಲ್ಲಿ ರೂಪಿಸಿರುವ ಸಮಗ್ರ ಶಿಶು ಅಭಿವೃದ್ಧಿ ಯೋಜನೆ 50 ವರ್ಷಕ್ಕೆ ಅಡಿ ಇರಿಸಿದೆ. ರಾಜ್ಯದ 1.50 ಲಕ್ಷ ಅಂಗನವಾಡಿ ಮತ್ತು ಮಹಿಳಾ ಸಹಾಯಕಿಯರಿದ್ದಾರೆ.  

ದೇಶದಲ್ಲಿ ಈ ಸಂಖ್ಯೆ 28 ಲಕ್ಷ ಇದೆ. ದೀನ, ದುರ್ಬಲ ವರ್ಗದ ಮಕ್ಕಳ ಪೌಷ್ಠಿಕ ಆಹಾರ, ಲಾಲನೆ-ಪಾಲನೆ, ಆರೋಗ್ಯ, ಶಾಲಾ ಪೂರ್ವ ಶಿಕ್ಷಣ, ಗರ್ಭಿಣಿ-ಬಾಣಂತಿಯರ ಪೂರಕ ಪೌಷ್ಠಿಕ ಆಹಾರ, ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಮಕ್ಕಳು ಮತ್ತು ಮಹಿಳೆಯರಲ್ಲಿ ಅಪೌಷ್ಠಿಕತೆ ಹಾಗೂ ರಕ್ತ ಹೀನತೆಯಂತಹ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸೈನಿಕರಂತೆ ಸೇವೆ ಸಲ್ಲಿಸುತ್ತಿದ್ದಾರೆ. ನಿಸ್ವಾರ್ಥತೆಯ ದುಡಿಮೆಗೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲ.  

ಸರ್ಕಾರಗಳು ಕನಿಷ್ಟ ಪ್ರಮಾಣದ ಗೌರವಧನ ನೀಡದೇ ಶೋಷಣೆ ಮಾಡುತ್ತಿವೆ ಎಂದು ತಮ್ಮ ನೋವನ್ನು ಹಂಚಿಕೊಂಡರು. 2022ರಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ​‍್ಿನಂತೆ ನಿವೃತ್ತರಾದ ಎಲ್ಲ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ಸೌಲಭ್ಯ ಜಾರಿಗೊಳಿಸಬೇಕು. ಗುಜರಾತಿನ ಉಚ್ಛ ನ್ಯಾಯಾಲಯ ತನ್ನ ಇತ್ತೀಚಿನ ತೀರ​‍್ಿನಲ್ಲಿ ನಮ್ಮ ಸೇವೆಯನ್ನು ನಾಗರಿಕ ಸೇವೆಗೆ ಸಮಾನವಾಗಿ ಪರಿಗಣಿಸಬೇಕು ಎಂದು ನಿರ್ದೇಶನ ನೀಡಿದೆ. ಅಲ್ಲಿ ಸಿ ಮತ್ತು ಡಿ ದರ್ಜೆ ನೌಕರರ ಸ್ಥಾನಮಾನ ನೀಡಿರುವಂತೆ ರಾಜ್ಯದಲ್ಲಿಯೂ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿದರು.  

ಈ ಕುರಿತು ಲಿಖಿತ ರೂಪದಲ್ಲಿ ನೀಡಡದೇ ಹೋದರೆ ವಿಧಾನಸೌಧ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು. ಎಐಟಿಯುಸಿಯ ಬಳ್ಳಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇ.ಮಂಗಮ್ಮ ಮಾತನಾಡಿ, 2022ರಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ​‍್ಿನಂತೆ ನಿವೃತ್ತರಾದ ಎಲ್ಲ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ಸೌಲಭ್ಯ ಜಾರಿಗೊಳಿಸಬೇಕು. ಗುಜರಾತ್ ಹೈಕೋರ್ಟ್‌ ನೀಡಿದ ತೀರ​‍್ಿನ ಅನ್ವಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸೇವೆಯನ್ನು ‘ನಾಗರಿಕ ಸೇವೆ’ ಎಂದು ಪರಿಗಣಿಸಿ ಸಿ ಮತ್ತು ಡಿ ದರ್ಜೆ ನೌಕರರ ಸ್ಥಾನ ಮಾನ ನೀಡಬೇಕು. 2011 ರಲ್ಲಿ ಗ್ರಾಚ್ಯುಟಿ ಅನುದಾನ ಬಿಡುಗಡೆ ಮಾಡಿದ್ದಾರೆಂದು ಹೇಳಿದ್ದಾರೆ. ಅದು ಎಲ್ಲಿದೆ? ಎಂದು ಇದುವರೆಗೆ ಗೊತ್ತಾಗುತ್ತಿಲ್ಲ. ನಮ್ಮ ಬೇಡಿಕೆ ಈಡೇರಿಸದೇ ಹೋದರೆ ಈ ಹೋರಾಟ ಮುಂದುವರಿಯುತ್ತದೆ.  

ಕೇಂದ್ರ ಸರ್ಕಾರ ಕಳೆದ 10 ವರ್ಷಗಳಿಂದ ಮತ್ತು ರಾಜ್ಯ ಸರ್ಕಾರ ಕಳೆದ ಮೂರು ವರ್ಷಗಳಿಂದ ಬೇಡಿಕೆ ಈಡೇರಿಸದೇ ಸತಾಯಿಸುತ್ತಿವೆ. ಇದು ಮುಂದುವರಿದರೆ ನಮ್ಮ ಹೋರಾಟವೂ ಮುಂದುವರಿಯುತ್ತದೆ ಎಂದು ಹೇಳಿದರು. ಈ ಧರಣಿ ಸತ್ಯಾಗ್ರಹದಲ್ಲಿ ಎಐಯುಟಿಸಿಯ ರಾಜ್ಯಾಧ್ಯಕ್ಷ ಬಿ.ಅಮ್ಜದ್, ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಜಯಮ್ಮ, ಸಹ ಕಾರ್ಯದರ್ಶಿ ರತ್ನ ಶಿರೂರು, ಕಾಮ್ರೆಡ್ ಸಿದ್ಧನಗೌಡ ಪಾಟೀಲ್, ಚಂದ್ರು ಆವರಕೆರೆ, ಗಿರಿಜಾ, ಸಂತೋಷ್, ಕಾನೂನು ಸಲಹೆಗಾರರಾದ ಎಆರ್‌ಎಂ ಇಸ್ಮಾಯಿಲ್, ಬಿ.ಕೆ.ಶಾರದಾ, ಮಂಗಳಗೌರಿ, ಪಿ.ಸತ್ಯಸಾವಿತ್ರಿ, ಟಿ.ಇಂದಿರಾ, ಕಲಾವತಿ, ರ್ರೆಮ್ಮ, ವೀರಮ್ಮ ಹಿರೇಮಠ, ಗಂಗಮ್ಮ, ಜಮೇಲಾ, ಪುಷ್ಪಾವತಿ, ಶಿವಗಂಗಮ್ಮ, ಕೆ.ಸುನಿತಾ, ರತ್ನಮ್ಮ, ಜ್ಯೋತಿ, ಪದ್ಮ, ಜಗದೀಶ್ವರಿ, ಮಾರ್ಗರೇಟ್, ಪದ್ಮ, ವೀಣಾ, ಈರಮ್ಮ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳ ಘಟಕಗಳ ಪದಾಧಿಕಾರಿಗಳು ಮತ್ತು 40 ಸಾವಿರಕ್ಕೂ ಅಧಿಕ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಇದ್ದರು. 


ಸುದ್ದಿ ಓದಿ