ಶಿಗ್ಗಾವ್

ಸರಿಯಾದ ವೇಳೆಗೆ ಬಸ್ ಬಾರದೆ ಮಕ್ಕಳ ಶಿಕ್ಷಣ ಕುಂಠಿತ : ಮ್ಯಾಗೇರಿ

ಸರಿಯಾದ ವೇಳೆಗೆ ಬಸ್ ಬಾರದೆ ಮಕ್ಕಳ ಶಿಕ್ಷಣ ಕುಂಠಿತ : ಮ್ಯಾಗೇರಿ


ಸರಿಯಾದ ವೇಳೆಗೆ ಬಸ್ ಬಾರದೆ ಮಕ್ಕಳ ಶಿಕ್ಷಣ ಕುಂಠಿತ : ಮ್ಯಾಗೇರಿ 


ಶಿಗ್ಗಾವಿ 04 : ಕಾಂಗ್ರೆಸ್ ಸರಕಾರ ಬಂದ ನಂತರ ಸರಿಯಾದ ವೇಳೆಗೆ ಬಸ್ ಬಾರದೆ ಮಕ್ಕಳ ಶಿಕ್ಷಣ ಕುಂಠಿತವಾಗಿದೆ ಎಂದು ಬಿಜೆಪಿ ನಿಕಟ ಪೂರ್ವ ತಾಲೂಕ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು  

     ಪಟ್ಟಣದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು ಹಳ್ಳಿಯಿಂದ ನಗರಕ್ಕೆ ವ್ಯಾಸಂಗಕ್ಕಾಗಿ ಹೋಗಲು ಬಸ್ಸುಗಳು ಸರಿಯಾದ ವೇಳೆಗೆ ಬಾರದಕ್ಕೆ ವಿದ್ಯಾರ್ಥಿಗಳು  ಶಾಲೆ, ಕಾಲೇಜಿಗೆ ಹಾಜರಾಗದೆ ಕಷ್ಟ ಅನುಭವಿಸುವ  ಶಿಕ್ಷಣದಿಂದ ವಂಚಿತವಾಗುವ ಪರಿಸ್ಥಿತಿ ಬಂದು ಒದಗಿದೆ. ಒಂದು ವೇಳೆ ಬಸ್ ಬಂದರೂ ಶಕ್ತಿ ಯೋಜನೆಯಿಂದ ಬಸ್ಸ್‌ ತುಂಬಿ ಕಿಕ್ಕಿರಿದು ಅನೇಕರು ಬಬ್ಬರಿಗೊಬ್ಬರು ಹೊಡೆದಾಡುವ ಪರಿಸ್ಥಿತಿ ಉದ್ಬವವಾಗಿವೆ.   

           ವಿದ್ಯಾರ್ಥಿಗಳಿಗೆ ನಿಲ್ಲಲು ಬಸ್ನಲ್ಲಿ ಜಾಗ ಸಿಗದೇ ಅಲ್ಲಿಂದ ಕಾಲ ಕಿತ್ತು ಮನೆ ಕಡೆಗೆ ಹೋಗುವಂತಾಗಿದೆ  ಕಾಂಗ್ರೆಸ್ ಸರ್ಕಾರ ಬಂದ ನಂತರ ಸಾರಿಗೆ ಸಂಸ್ಥೆ ಇದ್ದು ಇಲ್ಲದಂತಾಗಿದೆ ಜನರು ಚೀಮಾರಿ ಹಾಕುವಂತಾಗಿದೆ.  ಬಿಜೆಪಿಯ ಬೊಮ್ಮಾಯಿಯವರು ಯಡಿಯೂರ​‍್ಪನವರ ಸರಕಾರವಿದ್ದಾಗ ಸರಿಯಾದ ವೇಳೆಗೆ ಬಸ್ಸುಗಳು ಬರುತ್ತಿದ್ದವು ವಿದ್ಯಾರ್ಥಿಗಳಿಗೆ ಯಾವುದೇ ಸಾರಿಗೆ ತೊಂದರೆ ಇದ್ದಿದ್ದಿಲ್ಲ ಇಂದಿನ ಮಕ್ಕಳೇ ನಾಳೆ ನಾಡಿನ ದೇಶದ ನಾಗರಿಕ ಶಕ್ತಿ ಎಂಬುದನ್ನು ಅರಿತು ಕಾಂಗ್ರೆಸ್ ಸರ್ಕಾರ ತಕ್ಷಣದಿಂದ ಎಲ್ಲಾ ಊರುಗಳಿಗೆ ಹಳ್ಳಿಗಳಿಗೆ ನಗರಗಳಿಗೆ ಸರಿಯಾದ ವೇಳೆಗೆ ಬಸ್ಸುಗಳನ್ನು ಬಿಡಬೇಕು ಇಲ್ಲದೇ ಹೋದರೆ ಮಕ್ಕಳ ಭವಿಷ್ಯವನ್ನು ನಾಶ ಮಾಡಿದ ಕಾಂಗ್ರೆಸ್ ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಜನ ವಿರೋಧಿ ಹಾಗೂ ರೈತ ಹಗೂ ವಿದ್ಯಾರ್ಥಿಗಳ ವಿರೋಧಿ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ಸರಕಾರ ಬಹಳ ದಿನ ಉಳಿಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 


ಸುದ್ದಿ ಓದಿ