ರ್ಮಸಭೆಶ್ರೀಶೈಲ್ ಜಗದ್ಗುರುಗಳ ಅಭಿವೃದ್ಧಿ ಕರ್ಯಗಳಿಗೆ ಕೈಜೋಡಿಸುವೆ : ಎಂಎಲ್ಸಿ ಪ್ರಕಾಶ ಹುಕ್ಕೇರಿ
ಚಿಕ್ಕೋಡಿ, 18 : ಶ್ರೀಶೈಲ್ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚರ್ಯ ಮಹಾಸ್ವಾಮೀಜಿಗಳ ಮರ್ಗರ್ಶನದಿಂದ ಯಡೂರ ಕ್ಷೇತ್ರ, ಶ್ರೀವೀರಭದ್ರೇಶ್ವರ ದೇವಸ್ಥಾನ ಹಾಗೂ ಶ್ರೀಮಠವು ಸಾಕಷ್ಟು ಅಭಿವೃದ್ಧಿ ಹೊಂದಿದೆ. ಮುಂದಿನ ದಿನಗಳಲ್ಲೂ ಯಡೂರ ಕ್ಷೇತ್ರದ ದೇವಸ್ಥಾನದ ಅಭಿವೃದ್ಧಿಗೆ ನಾನು ಹಾಗೂ ಶಾಸಕ ಗಣೇಶ ಹುಕ್ಕೇರಿ ಅವರು ಸೇರಿಕೊಂಡು ಸಂಪರ್ಣ ಸಹಕಾರ ನೀಡುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಹೇಳಿದರು.ಅವರು ಚಿಕ್ಕೋಡಿ ತಾಲೂಕಿನ ಯಡೂರದಲ್ಲಿ ಶ್ರೀವೀರಭದ್ರೇಶ್ವರ ವಿಶಾಳಿ ಜಾತ್ರಾಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ರ್ಮಸಭೆ ಹಾಗೂ ಸಾಂಸ್ಕೃತಿಕ ಕರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮರ್ಚ್ ತಿಂಗಳಲ್ಲಿ ಯಡೂರ ಕ್ಷೇತ್ರದಲ್ಲಿ ನಡೆಯುವ ಕೃಷ್ಣಾರತಿ, ಕುಂಭಾಭಿಷೇಕ, ಲಕ್ಷದೀಪೋತ್ಸವ ಸೇರಿದಂತೆ ವಿವಿಧ ಧರ್ಮಿಕ ಕರ್ಯಕ್ರಮಗಳಿಗೆ ಶಾಸಕ ಗಣೇಶ ಹುಕ್ಕೇರಿ ಅವರೊಂದಿಗೆ ಸಂಪರ್ಣ ಬೆಂಬಲ ನೀಡಲಾಗುವುದು ಎಂದರು ಎಡೂರ-ಕಲ್ಲೊಳ ಬ್ರಿಡ್ಜ್ ಕಮ್ ಬ್ಯಾರೇಜ್ ಕಾಮಗಾರಿ ಪರ್ಣಗೊಂಡ ಬಳಿಕವೇ ಶ್ರೀಶೈಲ್ ಜಗದ್ಗುರುಗಳಿಂದ ಸತ್ಕಾರ ಸ್ವೀಕರಿಸುವೆ ಎಂದು ಸಂಕಲ್ಪ ಮಾಡಿದ್ದೆ. ಆ ಸಂಕಲ್ಪದಂತೆ ಕಾಮಗಾರಿ ಪರ್ಣಗೊಂಡಿದ್ದು, ಈಗ ಶ್ರೀಗಳಿಂದ ಸತ್ಕಾರ ಸ್ವೀಕರಿಸುವೆ ಎಂದರು.
ಜೊತೆಗೆ 21 ಕೋಟಿ ರೂ. ವೆಚ್ಚದಲ್ಲಿ ಸೈನಿಕ ಟಕಳಿ-ಚಂದೂರಟೇಕ ನಡುವಿನ ಸೇತುವೆ ಕಾಮಗಾರಿ ಪರ್ಣಗೊಂಡು ಸಂಚಾರಕ್ಕೆ ಮುಕ್ತಗೊಂಡಿದೆ. ಎಡೂರ-ಕಲ್ಲೊಳ ದೊಡ್ಡ ಸೇತುವೆ ಕಾಮಗಾರಿಯನ್ನೂ ಆದಷ್ಟು ಶೀಘ್ರ ಪರ್ಣಗೊಳಿಸುವುದಾಗಿ ಭರವಸೆ ನೀಡಿದರು.ಶಾಸಕ ದರ್ಯೋಧನ ಐಹೊಳೆ ಮಾತನಾಡಿ, ಶ್ರೀಶೈಲ್ ಜಗದ್ಗುರುಗಳು ಯಡೂರ ಗ್ರಾಮಕ್ಕೆ ಆಗಮಿಸಿದ ನಂತರ ಯಡೂರ ಕ್ಷೇತ್ರ, ಶ್ರೀವೀರಭದ್ರೇಶ್ವರ ದೇವಸ್ಥಾನ ಹಾಗೂ ಕಾಡಸಿದ್ದೇಶ್ವರ ಮಠದಲ್ಲಿ ಅಪಾರ ಅಭಿವೃದ್ಧಿ ಕಂಡುಬಂದಿದೆ. ಬಾಲ್ಯದಿಂದಲೇ ಈ ಕ್ಷೇತ್ರಕ್ಕೆ ಬರುತ್ತಿದ್ದೆ, ಆದರೆ ಇಂದು ಈ ಕ್ಷೇತ್ರದ ಸಂಪರ್ಣ ಚಿತ್ರಣವೇ ಬದಲಾಗಿದೆ ಎಂದರು. ಸಾನಿಧ್ಯ ವಹಿಸಿದ್ದ ಶ್ರೀಶೈಲ್ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚರ್ಯ ಮಹಾಸ್ವಾಮೀಜಿಗಳು ಮಾತನಾಡಿ, ರ್ಮವೆಂದರೆ ರ್ತವ್ಯ, ನೈತಿಕತೆ ಹಾಗೂ ಸರಿಯಾದ ಜೀವನ ವಿಧಾನ.
ಅದು ಸಮಾಜವನ್ನು ಒಟ್ಟಿಗೆ ಹಿಡಿದಿಡುವ ಶಕ್ತಿ ಹಾಗೂ ದುಃಖದಿಂದ ಸಂತೋಷಕ್ಕೆ ಕರೆದೊಯ್ಯುವ ಮರ್ಗವಾಗಿದೆ ಎಂದು ಹೇಳಿದರು. ಯಡೂರ ಕ್ಷೇತ್ರದ ಅಭಿವೃದ್ಧಿಗೆ ಎಂಎಲ್ಸಿ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಅವರ ಕೊಡುಗೆ ಅಪಾರವಾಗಿದೆ ಎಂದರು. ಕರ್ಯಕ್ರಮವನ್ನು ಉದ್ದೇಶಿಸಿ ಮಾಜಿ ಶಾಸಕ ಕಲ್ಲಪ್ಪಣ ಮಗೆನ್ನವರ ಮಾತನಾಡಿದರು.ಸಾಂಸ್ಕೃತಿಕ ಕರ್ಯಕ್ರಮದ ಭಾಗವಾಗಿ ಯುವ ಗಾಯಕಿ ಶಿವಾನಿ ಶಿವದಾಸ ಸ್ವಾಮಿ, ಗಾನಕೋಗಿಲೆ ಶೋಭಾ ಹೊನವಾಡ ಅಕ್ಕಮಹಾದೇವಿ ಭಜನಾ ಮಂಡಳಿಯಿಂದ ವಿಶೇಷ ಸಂಗೀತ ಹಾಗೂ ಶಿವಭಜನೆ ಕರ್ಯಕ್ರಮಗಳು ನಡೆದವು. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕರ್ಯಕ್ರಮಗಳು ಮನಸೂರೆಗೊಂಡವು. ಶ್ರೀಮತಿ ಡಾ. ಕವಿತಾ ಶಿವಬಸಯ್ಯ ಸಾಲಿಮಠ ಸೇರಿದಂತೆ ಹಲವು ಗಣ್ಯರನ್ನು ಸತ್ಕರಿಸಲಾಯಿತು