ನಾನು ಜೆಡಿಎಸ್ ಟಿಕೆಟ್ ಆಕಾಂಕ್ಷಿ: ಈರಣ್ಣ
ಲೋಕದರ್ಶನ ವರದಿ
ಶಿಗ್ಗಾವಿ 21: ಲಿಂಗಾಯತರಿಗೆ ಟಿಕೆಟ್ ನೀಡುವುದಾರೆ 2023ರ ವಿಧಾನಸಭಾ ಚುನಾವಣೆಯಲ್ಲಿ ನಾನೂ ಸಹಿತ ಶಿಗ್ಗಾವಿ-ಸವಣೂರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ನ ಟಿಕೆಟ್ ಆಕಾಂಕ್ಷಿ ಎಂದು ಜೆಡಿಎಸ್ ಶಿಗ್ಗಾವಿ ತಾಲೂಕಾಧ್ಯಕ್ಷ ಈರಣ್ಣ ನವಲಗುಂದ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಪಕ್ಷ ಸಂಘಟನೆಗೆ ಆದ್ಯತೆ ನೀಡುವುದರ ಮೂಲಕ 2023 ರ ವಿಧಾನಸಭಾ ಚುನಾವಣೆಯಲ್ಲಿ ಪಿತೂರಿ ಮಾಡುವವರ ವಿರುದ್ದ ಎಚ್ಚರವಾಗಿರಿ, ಶಿಗ್ಗಾವಿ-ಸವಣೂರ ತಾಲೂಕಿನಲ್ಲಿ ಅಕಾಂಕ್ಷಿಗಳೂ ಸಹಿತ ಬಹಳಷ್ಟಿದ್ದು ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳದೇ ಹೈಕಮಾಂಡ್ನಿಂದ ಕೇವಲ ಟಿಕೆಟ್ ಪಡೆದು ಅಭ್ಯರ್ಥಿಗಳಾದರೆ ಅಂತವರಿಗೆ ಹೈಕಮಾಂಡ್ ಮಣೆ ಹಾಕಬಾರದು ಎಂದು ತಿಳಿಸಿದ ಅವರು ರೈತಪರ ಖಾಳಜಿಯುಳ್ಳ ಪಕ್ಷ ನಮ್ಮ ಜೆಡಿಎಸ್ ಪಕ್ಷವಾಗಿದ್ದು ರೈತ ನಾಯಕನಾಗುವ ಗುಣವಿರಬೇಕು ರೈತರ ಸಮಸ್ಯೆಗಳಿಗೆ ಸ್ಪಂದನೆ ಬೇಕಾಗಿರುವುದರಿಂದ ಅದನ್ನ ಮನಗಂಡು ರೈತರ ಸಾಲ ಮನ್ನಾದಂತಹ ಹಲವಾರು ಯೋಜನೆಗಳ ಮೂಲಕ ಮಾಜಿ ಸಿ ಎಂ ಕುಮಾರಣ್ಣನವರು ಎಲ್ಲರ ಮನಸಲ್ಲಿ ನೆಲೆಯೂರಿದ್ದಾರೆ, ಮಾಜಿ ಪ್ರಧಾನಿ ದೇವೇಗೌಡರ ಮಾರ್ಗದರ್ಶನ ಪಕ್ಷಕ್ಕೆ ಬಲ ತಂದಿದೆ, ಯುವ ನಾಯಕ ನಿಖಿಲ್ ಕುಮಾರಸ್ವಾಮಿಯವರ ಯುವಕರ ದಂಡೇ ಈಗ ಜೆಡಿಎಸ್ ಶಕ್ತಿಯಾಗಿದೆ ರಾಜ್ಯದಲ್ಲಿ ಮತ್ತೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗುವುದರಲ್ಲಿ ಸಂಶಯವಿಲ್ಲ ಎಂದರು.
ಸಭೆಯಲ್ಲಿ ನೂತನವಾಗಿ ಖಾಲಿಯಿದ್ದ ಜೆಡಿಎಸ್ ಪಕ್ಷದ ಪದಾಧಿಕಾರಿಗಳನ್ನ ಆದೇಶ ಪ್ರತಿ ನೀಡುವ ಮೂಲಕ ಆಯ್ಕೆ ಮಾಡಲಾಯಿತು, ಶಿಗ್ಗಾವಿ ಶಹರ ಅದ್ಯಕ್ಷ ಸಂಜೀವ ಮಣ್ಣಣ್ಣವರ, ತಾಲೂಕಾ ಉಪಾದ್ಯಕ್ಷ ಬಸಪ್ಪ ಮಲ್ಲೂರ, ಕಾರ್ಯಾದ್ಯಕ್ಷ ರಾಜು ಮಾಳವಾದೆ, ಕಾನೂನು ಘಟಕದ ಗಂಗಾಧರ ಯಲಿಗಾರ, ಪ್ರಧಾನ ಕಾರ್ಯದರ್ಶಿ ನಾಗಪ್ಪ ಚಹ್ವಾಣ್, ರೈತ ಘಟಕದ ಬಿ ಸಿ ಗುದ್ಲಿಶೆಟ್ಟರ, ಎಸ್.ಸಿ.ಎಸ್.ಸಿ ಘಟಕದ ಯಲ್ಲಪ್ಪ ಸಂದಿಮನಿ, ಅಲ್ಪ ಸಂಖ್ಯಾತ ಘಟಕದ ಸಿಖಂದರ್ ಅತ್ತಾರ, ಮಹಿಳಾ ಘಟಕದ ಲಕ್ಷ್ಮಿ ಕರಡಿ, ಕಾರ್ಮಿಕ ಘಟಕದ ರಾಜು ಬ್ಯಾಹಟ್ಟಿ, ಬಂಕಾಪೂರ ಘಟಕದ ರವಿ ಕುರಗೋಡಿ, ರಾಜು ದೊಡಮನಿ ಸೇರಿದಂತೆ ಜೆಡಿಎಸ್ನ ಕಾರ್ಯಕರ್ತರು, ಪದಾಧಿಕಾರಿಗಳು ಇದ್ದರು