ಎಂ.ಕಾಂನಲ್ಲಿ ಕೆಎಲ್ಇಗೆ ಶೇಕಡಾ ನೂರುರಷ್ಟು ಫಲಿತಾಂಶ
ಮಹಾಲಿಂಗಪುರ: ಸ್ಥಳೀಯ ಕೆಎಲ್ಇ ಸಂಸ್ಥೆಯ ಎಸ್ಸಿಪಿ ಕಲಾ, ವಿಜ್ಞಾನ ಮತ್ತು ಡಿಡಿ ಶಿರೋಳ ವಾಣಿಜ್ಯ ಪದವಿ ಮಹಾವಿದ್ಯಾಲಯದ ಸ್ನಾತಕೋತ್ತರ ಪದವಿ ಎಂ.ಕಾಂ ನಲ್ಲಿ ಶೇ. 100 ರಷ್ಟು ಫಲಿತಾಂಶ ಬಂದಿದ್ದು, 4 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 11 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತಿರ್ಣರಾಗಿ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ಡಾ.ಕೆ.ಎಮ್.ಅವರಾದಿ, ಸಂಸ್ಥೆಯ ಅಜೀವ ಸದಸ್ಯ ಎಸ್.ಆಯ್.ಕುಂದಗೋಳ, ವಾಣಿಜ್ಯ ವಿಭಾಗದ ಮುಖ್ಯಸ್ಥ ಎಮ್.ಎಮ್.ನಿಂಬರಗಿ, ಐಕ್ಯೂಎಸಿ ಸಂಯೋಜಕಿ ಡಾ.ಎಸ್.ಡಿ.ಸೊರಗಾಂವಿ ಎಂ.ಕಾಂ ಪ್ರಾಧ್ಯಾಪಕ ಬಿ.ಎಮ್. ನಾಯಿಕ, ರತ್ನಕುಮಾರ ಭೀಮನಳ್ಳಿ, ಡಿ.ಎಮ್.ಹೊಸಪೇಟಿ ಹಾಗೂ ಮಹಾವಿದ್ಯಾಲಯದ ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ