ಹೂವಿನ ಹಡಗಲಿ

ಮನುಷ್ಯನ ಒತ್ತಡ ಬದುಕಿನಲ್ಲಿ ಹಾಸ್ಯ ಅವಶ್ಯಕ

ಮನುಷ್ಯನ ಒತ್ತಡ ಬದುಕಿನಲ್ಲಿ ಹಾಸ್ಯ ಅವಶ್ಯಕ

ಹೂವಿನಹಡಗಲಿ  19: ಮನುಷ್ಯನ ಯಾಂತ್ರಿಕ ಬದುಕಿನಲ್ಲಿ ಒತ್ತಡ ನಿವಾರಣೆಗೆ  ಹಾಸ್ಯ ಅತ್ಯುತ್ತಮ ರಸ ಎಂದು ಶಿಕ್ಷಕ,ಕಲಾವಿದ ಎನ್‌. ಮಂಜುನಾಥ ಅಭಿಪ್ರಾಯಪಟ್ಟರು.  ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ, ಹಿರೇಹಡಗಲಿ ಹೋಬಳಿ ಘಟಕ ತಾಲೂಕಿನ    ಬ್ಯಾಲಹುಣಸಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಂಪ್ಲಿ ತೋಟದ್ದೇವರ ಹಿರೇಮಠದ ಕೊಟ್ರಯ್ಯ ಸ್ಮಾರಕ ದತ್ತಿ, ಷಾ ಪೋಜಾಜಿ ವನೇಚಂದ್ ಸ್ಮಾರಕ ದತ್ತಿ, ಕೆ.ಎಂ.ಕೃಷ್ಣಪ್ಪ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ’ಕನ್ನಡ ಸಾಹಿತ್ಯದಲ್ಲಿ ಹಾಸ್ಯ’ ಹಾಗೂ ’ಅಹಿಂಸೋ ಪರಮೋಧರ್ಮ’ ವಿಷಯ ಕುರಿತು ಮಾತನಾಡಿದರು. ಹಳೆಗನ್ನಡ ಸಾಹಿತ್ಯದಲ್ಲಿ ಹಾಸ್ಯವನ್ನು ಪ್ರಧಾನವಾಗಿಟ್ಟುಕೊಂಡು ಕೃತಿ ರಚನೆಯಾಗಿಲ್ಲವಾದರೂ ಕನ್ನಡ ಸಾಹಿತ್ಯದ ಪ್ರಾಚೀನ ಗ್ರಂಥಗಳಲ್ಲಿ, ಶಾಸನಗಳಲ್ಲಿ ಹಾಸ್ಯ ಪ್ರಸಂಗಗಳ ಉಲ್ಲೇಖಗಳಿವೆ ಎಂದರು.

ಶಾಲೆಯ ಮುಖ್ಯಗುರುಗಳಾದ  ಎಲ್‌.ಧರ್ಮನಾಯ್ಕ್‌ ಕಾರ್ಯಕ್ರಮ ಉದ್ಘಾಟಿಸಿ ಹಾಸ್ಯ ಸಾಹಿತ್ಯದ  ಬಗ್ಗೆ ತಿಳಿಸಿದರು. ಶಿಕ್ಷಕ ಎಂ.ಎಚ್‌.ಲಕ್ಷ್ಮಣ ಜನಪದ ಗೀತೆಗಳನ್ನು ಹಾಡಿ ರಂಜಿಸಿದರು. ಶಿಕ್ಷಕರಾದ ಟಿ.ಎನ್‌. ಮಂಜುನಾಥ, ನಗಿನಾ ಬೇಗಂ ಇದ್ದರು.  ಅಧ್ಯಕ್ಷತೆ ಕಸಾಪ ಹಿರೇಹಡಗಲಿ ಹೋಬಳಿ ಘಟಕದ ಅಧ್ಯಕ್ಷ ಜಿ.ಎಸ್‌. ಸತೀಶ ವಹಿಸಿದ್ದರು. ವಿದ್ಯಾರ್ಥಿಗಳಾದ ಕಾವೇರಿ ಜಂಬಿಗಿ, ಚೈತ್ರಾ ಗಳಗನಾಥ ಕವನ ವಾಚಿಸಿದರು.   ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕ      ಟಿ.ರವೀಂದ್ರ ಸ್ವಾಗತಿಸಿದರು.ಕಸಾಪ ತಾಲೂಕು ಅಧ್ಯಕ್ಷ ಟಿ.ವೀರೇಂದ್ರ ಪಾಟೀಲ್ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಪ್ರಭು ಹಾವಕ್ಕನವರ ವಂದಿಸಿದರು. ಶಿಕ್ಷಕಿ ಪವಿತ್ರ ಅಣ್ಣಿಗೇರಿ ಕಾರ್ಯಕ್ರಮ ನಿರ್ವಹಿಸಿದರು. 


ಸುದ್ದಿ ಓದಿ