ಶಿವಶಿಂಪಿ ಸಮಾಜದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಮಹಾಲಿಂಗಪುರ: ಪಟ್ಟಣದ ಶಿವಶಿಂಪಿ ಸಮಾಜದ 2022-23ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
2022-23ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ಮಹಾಲಿಂಗಪುರ ಶಿವಶಿಂಪಿ ಸಮಾಜದ ಸಾಧಕ ವಿದ್ಯಾರ್ಥಿಗಳಾದ ವರ್ಷಾ ಪ್ರದೀಪ ಚೆನ್ನಿ, ಸುಮಿತ ಸೋಮಶೇಖರ ಜತ್ತಿ, ನವೀನ ಮಲ್ಲಪ್ಪ ಕಡೆಬಾಗಿಲು ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸಮಾಜದ ಅಧ್ಯಕ್ಷ ಮಹೇಶ ಸನದಿ, ಹಿರಿಯರಾದ ಮಹಾಲಿಂಗಪ್ಪ ಜತ್ತಿ,ರಾಜಶೇಖರ ಶಿವಣಗಿ, ಮಲ್ಲಪ್ಪ ಪಾವಟೆ, ಮಹಾಲಿಂಗಪ್ಪ ರೇವಡಗಿ, ಪ್ರಶಾಂತ ಚೆನ್ನಿ, ಮಹಾದೇವ ಪಾವಟೆ, ಸಂಜು ಶಿಂಪಿ, ನಾಗಪ್ಪ ಜತ್ತಿ, ಶ್ರೀಶೈಲ ಚೆನ್ನಿ, ಸಂಗಪ್ಪ ಲೋಣಿ, ಸುಧೀರ ಚೆನ್ನಿ, ನಿಜಗುಣಿ ಗಂಗಾವತಿ, ಈರಪ್ಪ ಗುಂಡಾಳಿ ಸೇರಿದಂತೆ ಹಲವರು ಇದ್ದರು.