ಮಹಾಲಿಂಗಪುರದಲ್ಲಿ ಭಯಂಕರ ಬಿರುಗಾಳಿ ಸಹಿತ ಮಳೆ, ಲಕ್ಷಾಂತರ ಹಾನಿ
ಮಹಾಲಿಂಗಪುರ: ಭಯಂಕರ ಬಿರುಗಾಳಿ ಮತ್ತು ಮಳೆಗೆ ಪಟ್ಟಣದಲ್ಲಿ ಅನೇಕ ಗಿಡಮರಗಳು, ವಿದ್ಯುತ್ ಕಂಬಗಳು, ಪತ್ರಾಸ್ ಶೆಡ್ಡಿನ ಮನೆ, ಅಂಗಡಿ ಮುಂಗಟ್ಟುಗಳು ಧರಾಶಾಹಿಯಾಗಿ ಲಕ್ಷಾಂತರ ಹಾನಿ ಸಂಭವಿಸಿದೆ.
ಗುರುವಾರ ಸಂಜೆ ಸಾಯಂಕಾಲ 7ಗಂಟೆಗೆ ಉತ್ತರ ದಿಕ್ಕಿನಿಂದ ರಭಸದಿಂದ ಗಾಳಿ ಮತ್ತು ಆಲಿಕಲ್ಲು ಸಹಿತ ಮಳೆ ಸುರಿಯಲಾರಂಭಿಸಿ ಒಂದು ಘಂಟೆಯಲ್ಲಿಯೇ ಪಟ್ಟಣದ ತುಂಬೆಲ್ಲ ಸರೋವರದಂತೆ ಮನೆಗಳಲ್ಲೆಲ್ಲ ನೀರು ನುಗ್ಗಿ ಜನರಲ್ಲಿ ಪ್ರವಾಹದ ಆತಂಕ ಸೃಷ್ಟಿ ಮಾಡಿತು.
ಬಸವೇಶ್ವರ ವೃತ್ತ ಮತ್ತು ಬೆಳಗಲಿ ರಸ್ತೆಯ ಮಧ್ಯದಲ್ಲಿ ಹಲವಾರು ವಿದ್ಯುತ್ ಕಂಬ ಮತ್ತು ಗಿಡಗಳು ರಸ್ತೆಯಲ್ಲಿ ಬಿದ್ದಿರುವುದರಿಂದ ಕೆಲ ಗಂಟೆಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡು ಇದೇ ಮಾರ್ಗದಿಂದ ಸಾಗುವ ನೂರಾರು ವಾಹನಗಳಿಗೆ, ಪ್ರಯಾಣಿಕರಿಗೆ ತೊಂದರೆ ಉಂಟಾಯಿತು. ಕೆಲವು ಪತ್ರಾಸ್ ಶೆಡ್ಡುಗಳ ಅಂಗಡಿಗಳನ್ನು ತೆರುವುಗೊಳಿಸಲು ಜೆಸಿಬಿ ಯಂತ್ರಗಳನ್ನು ಬಳಸಲಾಯಿತು.ವಾರದ ಹಿಂದೆ ಸುರಿದ ಭಾರಿ ಮಳೆಯ ಕಾರಣದಿಂದ ಆದ ಆವಾಂತರ ಮತ್ತೊಮ್ಮೆ ನೆನಪಿಸಿತು.
ಸುರಕ್ಷತೆ ದೃಷ್ಟಿಯಿಂದ ಹೆಸ್ಕಾಂನವರು ಪಟ್ಟಣದಲ್ಲಿ ವಿದ್ಯುತ್ ಕಡಿತಗೊಳಿಸಿರುವುದರಿಂದ ಸ್ಥಳೀಯ ಪೋಲಿಸ್ ಸಿಬ್ಬಂದಿಗಳಿಗೆ ರಕ್ಷಣಾ ಕಾಯರ್ಾಚರಣೆ ಕೈಗೊಳ್ಳುವಲ್ಲಿ ತೊಂದರೆ ಉಂಟಾಯಿತು. ಶುಕ್ರವಾರ ರಾತ್ರಿವರೆಗೂ ವಿದ್ಯುತ್ ಮರುಳುವ ಸಂಭವವಿಲ್ಲ.ಸಾಗರೋಪಾದಿಯಲ್ಲಿ ಹೆಸ್ಕಾಂ ಕಾರ್ಯ ನಿರ್ವಹಿಸುತ್ತಿದೆ. ಇದಕ್ಕೆ ಪುರಸಭೆ ಪೌರ ಕಾಮರ್ಿಕರು, ಅಧಿಕಾರಿಗಳು ಸಹಕರಿಸುತ್ತಿದ್ದಾರೆ.
ಕೆಂಗೇರಿಮಡ್ಡಿ ಮತ್ತು ಕಲ್ಪಡ್ ಬಡಾವಣೆ : ಸುಮಾರು ಹತ್ತು ಸಾವಿರ ಜನ ಹೆಚ್ಚಿನ ಕೂಲಿ ಕಾರ್ಮಿಕರೇ ವಾಸಿಸುವ ಸ್ಥಳಗಳಿವು.ಗುರುವಾರ ಸಂಜೆ ಬಿರುಗಾಳಿ ಮತ್ತು ಮಳೆಗೆ ಕುಕ್ಕುಗೋಳ ಎಂಬ ನೇಕಾರನ ಪತ್ರಾಸ್ ಮೇಲ್ಚಾವಣಿ ಹಾರಿ ಹೋಗಿ ನಾಲ್ಕು ಮಗ್ಗುಗಳು, ಕಚ್ಚ್ಛಾ ಸಾಮಗ್ರಿಗಳು, ನೇಯ್ದ ಸೀರೆಗಳು ಇನ್ನಿತರ ವಸ್ತುಗಳು ಒಟ್ಟಾರೆ ಸುಮಾರು 5ಲಕ್ಷ ನಷ್ಟವಾಗಿದೆ.ಕೆಲ ಮನೆಗಳ ಮೇಲೆ ದೊಡ್ಡ ದೊಡ್ಡ ಮರಗಳು ಬಿದ್ದಿವೆ. ಅದೃಷ್ಟವಶಾತ್ ಪ್ರಾಣ ಹಾನಿಗಳು ಸಂಭವಿಸಿಲ್ಲ. ಕೆಲವರಿಗೆ ಗಾಯಗಳುಂಟಾಗಿದ್ದು ಚಿಕಿತ್ಸೆಗಾಗಿ ಅಂತಹವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಟ್ಟಣದ ಪ್ರತಿ ವಾರ್ಡ್ ನಲ್ಲಿ ಮಳೆಯಿಂದ ಒಂದಿಲ್ಲೊಂದು ಆವಾಂತರಗಳು ಜರುಗಿವೆ. ಸರ್ಕಾರ ಸೂಕ್ತ ಪರಿಹಾರ ನೀಡಿ ಪುನಃ ಬದುಕು ಕಟ್ಟಿಕೊಳ್ಳಲು ಆರ್ಥಿಕ ಹಿನ್ನಡೆ ಉಳ್ಳ ಇವರಿಗೆ ಅನುವು ಮಾಡಿಕೊಡಬೇಕೆಂದು ಪುರಸಭೆ ಸದಸ್ಯ ಶೇಖರ ಅಂಗಡಿ ಮತ್ತು ನೇಕಾರ ನಾಯಕ ಶಿವಲಿಂಗ ಟಿರಿಕಿ ಸಕರ್ಾರವನ್ನು ಆಗ್ರಹಿಸಿದ್ದಾರ
ಚುನಾವಣೆಯಲ್ಲಿ ಸ್ಪರ್ಧಿಸಿ ರನ್ನರ್ ಆಫ್ ಆದ ಸಿದ್ದು ಕೊಣ್ಣೂರ ಮಾತನಾಡಿ, ಕಾಂಗ್ರೆಸ್ ಮುಖಂಡರೆಲ್ಲ ಸೇರಿ ಮಳೆಯಿಂದ ಹಾನಿಗೊಳಗಾದ ಎಲ್ಲ ಮನೆಗಳಿಗೆ ಭೇಟಿ ನೀಡಿದ್ದೇವೆ. ಸಂತ್ರಸ್ತರಿಗೆ ಆದಷ್ಟು ಹೆಚ್ಚಿನ ಪ್ರಮಾಣದ ಅನುದಾನವನ್ನು ಕೊಡಿಸುವಲ್ಲಿ ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.
ಸುನೀಲಗೌಡ ಪಾಟೀಲ್, ಬಸವರಾಜ ರಾಯರ, ವಿಠ್ಠಲ ಕುಳಲಿ, ಫಾರೂಕ್ ಪಕಾಲಿ, ಲಕ್ಕಪ್ಪ ಭಜಂತ್ರಿ, ಅಶೋಕ ತಳವಾರ, ಯಾಸೀನ್ ಅತ್ತಾರ, ಕುಮಾರ್ ನಾಯಕ, ತಹಶೀಲ್ದಾರ್ ಡಿ ಎಚ್. ಹೂಗಾರ, ಪುರಸಭೆ ಮುಖ್ಯಾಧಿಕಾರಿ ಜಗದೀಶ ಈಟಿ, ಸ್ಥಳೀಯ ತಲಾಟಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
*ಮಹಾಲಿಂಗಪುರದಲ್ಲಿ ಮಳೆ ಗಾಳಿಗೆ 5ಮನೆಗಳು ಸಂಪೂರ್ಣ ಹಾಳಾಗಿದ್ದು ಮತ್ತು ತಾಲೂಕಿನಾದ್ಯಂತ ಹತ್ತು ಹಳ್ಳಿಗಳಲ್ಲಿಯೂ ಹಾನಿಯ ವರದಿಯಾಗಿವೆ.ನಮ್ಮ ಸ್ಥಳೀಯ ಅಧಿಕಾರಿಗಳಿಗೆ ಕೂಲಂಕುಷ ಪರಿಶೀಲನೆಗೆ ಆದೇಶ ನೀಡಲಾಗಿದೆ. ಅವರು ನೀಡುವ ವರದಿ ಆಧರಿಸಿ ರಾತ್ರಿ ಏಕಾಏಕಿ ಸುರಿದ ಮಳೆ ಸಂತ್ರಸ್ತರಿಗೆ ಪರಿಹಾರ ಒದಗಿಸಲಾಗುವುದು.
-ಡಿ ಎಚ್. ಹೂಗಾರ,
ತಹಶೀಲ್ದಾರ್ ರಬಕವಿ ಬನಹಟ್ಟಿ ತಾಲೂಕು.