ನಿಲ್ಲದ ವರುಣನ ಅಬ್ಬರ:ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ನಿನ್ನೆಯಿಂದ 8 ಅಡಿ ಹೆಚ್ಚಳ..ಕುಡಚಿ ಸೇತುವೆ ಮುಳುಗಡೆ....
ಚಿಕ್ಕೋಡಿ ಆಗುಸ್ಟ್ 07: ರಾಜ್ಯದ ಗಡಿ ಭಾಗದಲ್ಲಿ ಮಳೆರಾಯಣ ರೌದ್ರನರ್ತನ ಕಡಿಯಾಗಿದೆ.ಆದರೆ ಕೊಂಕಣ ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಿದ್ದು. ಹೀಗಾಗಿ ಕೃಷ್ಣಾ ಮತ್ತು ಉಪನದಿಗಳ ನೀರಿನ ಮಟ್ಟದಲ್ಲಿ ನಿನ್ನೆಯಿಂದ 8 ಅಡಿಯಷ್ಟು ಹೆಚ್ಚಳವಾಗಿದೆ.
ರಾಯಬಾಗ ತಾಲೂಕಿನ ಕುಡಚಿ ಸೇತುವೆ ಮುಳುಗಡೆಗೊಂಡಿದೆ. ಇದರಿಂದ ಮಹಾರಾಷ್ಟ್ರ ಕರ್ನಾಟಕ ಸಂಪರ್ಕ ಕಲ್ಪಿಸುವ ಸಾಂಗ್ಲೀ ಭಾಗಲಕೋಟ ರಾಜ್ಯ ಹೆದ್ದಾರಿ ಬಂದ್ ಆಗಿದೆ.
ಕೃಷ್ಣಾ.ದೂಧಗಂಗಾ.ವೇಧಗಂಗಾ ನದಿಗಳಿಗೆ ಮಹಾ ಮಳೆಯಿಂದ ರಾಜ್ಯಕ್ಕೆ 1.60 ಲಕ್ಷ ಕ್ಯುಸೆಕ್ ಹೆಚ್ಚಿನ ನೀರು ಹರಿದು ಬರುತ್ತಿದೆ.
ಮಹಾರಾಷ್ಟ್ರ ರಾಜಾಪೂರ ಬ್ಯಾರೇಜದಿಂದ ಕೃಷ್ಣಾ ನದಿಗೆ 1.21 ಲಕ್ಷ ಕ್ಯುಸೆಕ್ ನೀರು ಹರಿದು ಬರಲಾರಂಭಿಸಿದೆ. ದೂಧಗಂಗಾ ಹಾಗೂ ವೇಧಗಂಗಾ ನದಿಗಳಿಂದ 38 ಸಾವಿರ ಕ್ಯುಸೆಕ್ ನೀರು ಬರುತ್ತಿದೆ. ಚಿಕ್ಕೋಡಿ ತಾಲೂಕಿಮ ಕಲ್ಲೋಳ ಹತ್ತಿರ ಒಟ್ಟಾರೆ 1.55 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಬರುವ ನೀರಿನಷ್ಟೇ ಹಿಪ್ಪರಗಿ ಬ್ಯಾರೇಜ ಮೂಲಕ ಆಲಮಟ್ಟಿ ಜಲಾಶಯಕ್ಕೆ ಹೋಗುತ್ತಿದೆ.
ಮಹಾರಾಷ್ಟ್ರದ ಕೋಯ್ನಾ 142 ಮಿಮೀ. ಮಹಾಬಳೇಶ್ವರ 237 ಮಿಮೀ. ನವಜಾ 95 ಮಿಮೀ. ವಸರಣಾ 100 ಮಿಮೀ ಮಳೆಯಾಗಿದೆ ಎಂದು ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನ್ನವರ ತಿಳಿಸಿದರು.