ಗಣ್ಯ ಉದ್ಯಮಿ ಶ್ರೀ ಗಣೇಶ ವಾಸುದೇವ್ ಶೇಟ್ ರವರಿಗೆ ಭಾವಪೂರ್ಣ ಶ್ರದ್ದಾಂಜಲಿ
ಗಣ್ಯ ಉದ್ಯಮಿ ಶ್ರೀ ಗಣೇಶ ವಾಸುದೇವ್ ಶೇಟ್ ರವರಿಗೆ ಭಾವಪೂರ್ಣ ಶ್ರದ್ದಾಂಜಲಿ
ಶಿವಮೊಗ್ಗ 31:- ಮಲೆನಾಡಿನ ಹೆಬ್ಬಾಗಿಲು ಎಂದು ಕರೆಯಲ್ಪಡುವ ಶಿವಮೊಗ್ಗ ನಗರದ ನಿವಾಸಿಗಳಾಗಿದ್ದ ದೈವಜ್ಞ ಬ್ರಾಹ್ಮಣ ಸಮಾಜದ ಗಣ್ಯ ಉದ್ಯಮಿ ಹಾಗೂ ಚಿನ್ನ ಬೆಳ್ಳಿ ವರ್ತಕರಾದ ಶ್ರೀ ಗಣೇಶ ವಾಸುದೇವ್ ಶೇಟ್ ರವರು ತಮ್ಮ 87 ನೇ ವಯಸ್ಸಿನಲ್ಲಿ ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಯುತರು ಇದೇ ದಿನಾಂಕ 30 ರಂದು ಕೊನೆಯುಸಿರೆಳೆದಿರುತ್ತಾರೆ. ಇವರು ಶಿವಮೊಗ್ಗದ ರವೀಂದ್ರ ನಗರದ 6 ನೇ ಅಡ್ಡ ರಸ್ತೆಯಲ್ಲಿ ವಾಸವಾಗಿದ್ದರು.
ಶ್ರೀಯುತರು ಶಿವಮೊಗ್ಗ ನಗರದಲ್ಲಿ ಪ್ರಖ್ಯಾತ ಚಿನ್ನ-ಬೆಳ್ಳಿ ವರ್ತಕರಾಗಿದ್ದರು.ಗಾಂಧಿ ಬಜಾರ್ ನ ಶ್ರೀ ಗಣೇಶ ಜ್ಯುವೆಲ್ಲರಿ ಹಾಗೂ ಎಂಜಿ ಪ್ಯಾಲೆಸ್ ಮಾಲೀಕತ್ವವನ್ನು ಹೊಂದಿದ್ದರು.ಅಗಲಿದ ಗಣ್ಯರು ಈರ್ವ ಪುತ್ರರು, ಎಂಟು ಜನ ಪುತ್ರಿಯರು, ಅಳಿಯಂದಿರು, ಸೊಸೆಯಂದಿರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸುಮಾರು 6 ದಶಕಗಳ ಕಾಲ ಚಿನ್ನ-ಬೆಳ್ಳಿ ಉದ್ಯಮದಲ್ಲಿ ಸೇವೆ ಸಲ್ಲಿಸಿ ಖ್ಯಾತಿ ಪಡೆದಿದ್ದ ಶ್ರೀಯುತರು ದೈವಜ್ಞ ಕಲ್ಯಾಣ ಮಂದಿರದ ಸ್ಥಾಪಕರಲ್ಲೋರ್ವರು. ದೈವಜ್ಞ ಬ್ರಾಹ್ಮಣ ಸಮಾಜ ಹಾಗೂ ಶ್ರೀ ಕಾಳಿಕಾ ಪರಮೇಶ್ವರಿ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಶಿವಮೊಗ್ಗ ಚಿನ್ನ ಬೆಳ್ಳಿ ಮತ್ತು ಗಿರವಿ ವರ್ತಕರ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಶ್ರೀಯುತರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರ್ಪ, ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರ್ಪ, ಸಂಸದ ಬಿ.ವೈ. ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರ್ಪ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಾ. ಧನಂಜಯ ಸರ್ಜಿ, ಡಿ.ಎಸ್. ಅರುಣ್ ಹಾಗೂ ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಸಿ. ಪ್ರಕಾಶ್, ಕಾರ್ಯದರ್ಶಿ ಎಲ್. ಸುಬ್ರಹ್ಮಣ್ಯ ಮತ್ತು ಪಾದಾಧಿಕಾರಿಗಳು ಹಾಗೂ ಶಿವಮೊಗ್ಗ ಚಿನ್ನಿ ಬೆಳ್ಳಿ ಗಿರವಿ ವರ್ತಕರ ಸಂಘದ ಅಧ್ಯಕ್ಷ ವಿನೋದ್‌ಕುಮಾರ್ ಜೈನ್ ಮತ್ತು ಪದಾಧಿಕಾರಿಗಳು ಹಾಗೂ ಸಮಸ್ತ ದೈವಜ್ಞ ಬ್ರಾಹ್ಮಣ ಸಮಾಜ ಭಾಂದವರು ಸಂತಾಪ ಸೂಚಿಸಿದ್ದಾರೆ.