ಚಿಕ್ಕೋಡಿ

ಎಲ್ಲಕ್ಕಿಂತಲೂ ಆರೋಗ್ಯ ಸಂಪತ್ತೇ ಮಿಗಿಲು : ಶಾಸಕ ಐಹೊಳೆ

ಎಲ್ಲಕ್ಕಿಂತಲೂ ಆರೋಗ್ಯ ಸಂಪತ್ತೇ ಮಿಗಿಲು : ಶಾಸಕ ಐಹೊಳೆ

ಮಾಂಜರಿ, 17 : ಎಲ್ಲಕ್ಕಿಂತಲೂ ಆರೋಗ್ಯ ಸಂಪತ್ತೇ ಮಿಗಿಲು. ಈ ಭಾಗದ ಜನರಿಗೆ ಆರೋಗ್ಯ ಸೇವೆ ನೀಡಬೇಕು ಎಂಬ ಕಲ್ಪನೆಯಿಂದ ಶ್ರೀಶೈಲ ಪೀಠದ ಜಗದ್ಗುರುಗಳಾದ ಡಾ. ಚನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಗಳ ದಿವ್ಯ ನೇತೃತ್ವದಲ್ಲಿ ಪ್ರತಿವರ್ಷ ನಡೆಯಲಿರುವ ವೀರಭದ್ರ ದೇವರ ವಿಶಾಲಿ ಯಾತ್ರಾ ಮಹೋತ್ಸವ ಹಾಗೂ ಮಹಾ ರಥೋತ್ಸವ ಅಂಗವಾಗಿ ಯಡುರಿನ ಕಾಡಸಿದ್ದೇಶ್ವರ ಸಂಸ್ಥಾನ ಮಠದ ಸಯುಕ್ತ ಆಶ್ರಯದಲ್ಲಿ ಉಚಿತ  ಆರೋಗ್ಯ ಶಿಬಿರ ಹಮ್ಮಿಕೊಳ್ಳುವ ಮೂಲಕ ಸಮಾಜ ಸೇವೆಗೆ ಮುಂದಾಗಿರುವುದು ಅಭಿನಂದನಾರ್ಹ ಎಂದು ರಾಯಬಾಗ್  ಶಾಸಕ ದುರ್ಯೋಧನ ಐಹೊಳೆ  ಹೇಳಿದರು. 

ಅವರು ಶನಿವಾರರಂದು ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ವೀರಭದ್ರ ದೇವರ ವಿಶಾಳಿ ಯಾತ್ರಾ ಮಹೋತ್ಸವ ಮಹಾರಥೋತ್ಸವ ಅಂಗವಾಗಿ ಆಯೋಜಿಸಲಾರದ  ಉಚಿತ ಆರೋಗ್ಯ ತಪಾಸಣಾ ಶಿಬಿರದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಎಷ್ಟು ಹಣವಿದ್ದರೂ ಅದನ್ನು ಅನುಭವಿಸಲು ಆರೋಗ್ಯಯುತ ಶರೀರ ಇರದಿದ್ದರೆ ಪ್ರಯೋಜನವಿಲ್ಲ. ಇಂದಿನ ಆಧುನಿಕ ಜೀವನ ಶೈಲಿಯಿಂದಾಗಿ ಹಲವರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಇಂದು ಉಳ್ಳವರು ಪ್ರತಿಷ್ಠಿತ ಆಸ್ಪತ್ರೆ ಗಳಿಗೆ ತೆರಳಿ ಚಿಕಿತ್ಸೆ ಪಡೆದು ಗುಣಮುಖರಾಗುತ್ತಾರೆ. ಬಡವರು, ನಿರ್ಗತಿಕರು ಸರಿಯಾದ ಚಿಕಿತ್ಸೆ ಪಡೆಯದೇ ಆರೋಗ್ಯ ಸಮಸ್ಯೆ ಎದುರಿಸುತ್ತಿರುವುದನ್ನು ಕಾಣುತ್ತೇವೆ. ಇದನ್ನು ಗಮನದಲ್ಲಿ ಶ್ರೀಶೈಲ್ ಜಗದ್ಗುರುಗಳು ಪ್ರತಿಷ್ಠಿತ ಆಸ್ಪತ್ರೆಗಳನ್ನು ಒಂದೆಡೆ ಸೇರಿಸಿ ಸರ್ವ ರೋಗಗಳಿಗೂ ಚಿಕಿತ್ಸೆ, ವೈದ್ಯರಿಂದ ಸಮಾಲೋಚನೆ, ಅಗತ್ಯ ಪರಿಹಾರೋಪಾಯಗಳ ಕುರಿತು ಅರಿವು ಮೂಡಿಸುವ ಕಾರ್ಯ ಕೈಗೊಂಡಿ ರುವುದು ಅಭಿನಂದನಾರ್ಹ ಎಂದರು. 

ಈ ಶಿಬಿರದಲ್ಲಿ ವೈದ್ಯರು ಕೇವಲ ಚಿಕಿತ್ಸೆ ನೀಡದೇ ಉತ್ತಮ ಆರೋಗ್ಯ ಹೊಂದಲು ಬೇಕಾದ ಅಗತ್ಯ ಸಲಹೆ, ಆರೋಗ್ಯಯುತವಾದ ಜೀವನ ಪದ್ಧತಿ ಕುರಿತು ಸಲಹೆ ನೀಡುತ್ತಿರುವುದು ಶ್ಲಾಘನೀಯ ಕಾರ್ಯ. ಇಂದು ಚಿಕ್ಕಮಕ್ಕಳಿಂದ ಹಿಡಿದು ವೃದ್ಧರಿಗೂ ಆರೋಗ್ಯ ಸಮಸ್ಯೆಗಳನ್ನು ನಾವಿಂದು ಕಾಣುತ್ತೇವೆ. ಒತ್ತಡದ ಕೆಲಸ, ಕಲಬೆರಕೆಯ ಆಹಾರವೇ ಇದಕ್ಕೆ ಪ್ರಮುಖ ಕಾರಣ.  ಪ್ರತಿಯೊಬ್ಬರೂ ತಮ್ಮ ಆರೋಗ್ಯದಕುರಿತು ಕಾಳಜಿ ಹೊಂದುವಂತೆ ಕರೆ ನೀಡಿದರು. 

ಶ್ರೀಶೈಲ್ ಜಗದ್ಗುರುಗಳ ಮಾತನಾಡಿ ನಿತ್ಯದ ವಿದ್ಯಮಾನಗಳನ್ನು ಜನರಿಗೆ ತಿಳಿಸುವುದರ ಸಾಮಾಜಿಕ ಜತೆಗೆ ಹೊಣೆಗಾರಿಕೆಯ ಭಾಗವಾಗಿ ಈ ಶಿಬಿರ ಆಯೋಜಿಸಲಾಗಿದೆ. ಬಡವರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಸಂಕಲ್ಪದೊಂದಿಗೆ ಪ್ರತಿಷ್ಠಿತ ಆಸ್ಪತ್ರೆ ಗಳನ್ನು ಈ ಶಿಬಿರದಲ್ಲಿ ಒಂದೆಡೆ ಸೇರಿಸಲಾಗಿದೆ.ಈ ಹಿಂದೆಯೂ ಕೊರೋನಾ, ಅತಿವೃಷ್ಟಿ ಯಂತಹ ಸಂದರ್ಭದಲ್ಲೂ ಶ್ರೀ ಮಠದಿಂದ  ಬಾಗಿಲಿಗೆ ತೆರಳಿ ಪರಿಹಾರ ಸಾಮಗ್ರಿ ಮೂಲಕ ವಿತರಿಸುವ ನೊಂದವರ ಧ್ವನಿಯಾಗಿ ಕಾರ್ಯನಿರ್ವಹಿಸಿದೆ ಎಂದರು. 



ಸುದ್ದಿ ಓದಿ