ಬಳ್ಳಾರಿ

ಹಾಸ್ಮಿ ಎಜ್ಯುಕೇಷನ್ ಅಂಡ್ ಚಾರಿಟಬಲ್ ಟ್ರಸ್ಟ್ ನೂತನ ಕಛೇರಿ ಉದ್ಘಾಟನೆ

ಹಾಸ್ಮಿ ಎಜ್ಯುಕೇಷನ್ ಅಂಡ್ ಚಾರಿಟಬಲ್ ಟ್ರಸ್ಟ್ ನೂತನ ಕಛೇರಿ ಉದ್ಘಾಟನೆ

ಬಳ್ಳಾರಿ: ನಗರದ ತಾಳೂರು ರಸ್ತೆಯ 15ನೇ ಅಡ್ಡರಸ್ತೆಯಲ್ಲಿ ಹಾಸ್ಮಿ ಎಜ್ಯುಕೇಷನ್ ಅಂಡ್ ಚಾರಿಟಬಲ್ ಟ್ರಸ್ಟ್ ನೂತನ ಕಛೇರಿಯನ್ನು ಜವಾಹರಲಾಲ್ ನೆಹರು ಅವರ ಜನ್ಮದಿನವಾದ ಇಂದು ಮಕ್ಕಳ ದಿನಾಚರಣೆ ಆಚರಿಸಿ ನೆಹರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಎನ್ ಜಿ .ಒ ಅಥವಾ ಟ್ರಸ್ಟ್ ಗಳನ್ನು ಹುಟ್ಟುಹಾಕುವುದು ದೊಡ್ಡ ಮಾತಲ್ಲ ಅವುಗಳಿಂದ ಸಾಮಾಜಿಕವಾದ ಕಾರ್ಯಗಳನ್ನು ನಡೆಸಿ ಸಮಾಜಕ್ಕೆ ಅನುಕೂಲವಾಗುವಂತ ಕೆಲಸಗಳನ್ನು ಮಾಡಲು ಮುಂದಾಗಬೇಕೆಂದು ಕನ್ನಡ ಹೋರಾಟಗಾರ ಸಯ್ಯದ್ ಕನ್ನಡ ನಜೀರ್ ಸಲಹೆ ನೀಡಿದರು.  

ಈ ಕಾರ್ಯಕ್ರಮದಲ್ಲಿ ಟ್ರಸ್ಟ್  ಜಿಲ್ಲಾಧ್ಯಕ್ಷ ಅರ್ಷಿಯಾಬಾನು ಮಾತನಾಡಿ, ಟ್ರಸ್ಟ್ ವತಿಯಿಂದ ಅನಾಥ ಮತ್ತು ಬಡ ಮಕ್ಕಳಿಗೆ ವಿದ್ಯಾಭ್ಯಾಕ್ಕೆ ನೆರವು ನೀಡುವುದು, ಮಹಿಳೆಯರಿಗೆ ಸ್ವ ಉದ್ಯೋಗ ಕೈಗೊಳ್ಳಲು ಹೊಲಿಗೆ, ಕಂಪ್ಯೂಟರ್, ಎಂಬ್ರಾಡಿಂಗ್, ಬೋಟಿಕ್ ಸೇರಿದಂತೆ ವಿವಿಧ ತರಬೇತಿಗಳನ್ನು ಏರ್ಪಡಿಸುವುದು, ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಆರೋಗ್ಯ ಶಿಬಿರಗಳನ್ನು ನಡೆಸುವುದು, ರಕ್ತದಾನ ಶಿಬಿರಗಳನ್ನು ಏರ್ಪಡಿಸುವುದು ಸೇರಿದಂತೆ ಸಮಾಜಮುಖಿ ಕಾರ್ಯಗಳನ್ನು ನಡೆಸುವುದು ಟ್ರಸ್ಟ್ ಉದ್ದೇಶವಾಗಿದೆ ಎಂದು ಆರ್ಷಿಯಾ ಬಾನು ತಿಳಿಸಿದರು. 

ಮುಖ್ಯ ಅತಿಥಿಗಳಾಗಿ ಮುನ್ನಾಭಾಯ್, ಹಂಪಿ ರಮಣ, ರಾಬಿನ್, ಷಾಷಾವಲಿ, ಅಂಜಲಿ ಸೇರಿದಂತೆ ಅನೇಕ ಜನರು ಉಪಸ್ಥಿತರಿದ್ದರು 

ಸುದ್ದಿ ಓದಿ