ಮಹಲಿಂಗಪುರ

ಗುರು ಮಹಾಲಿಂಗೇಶ್ವರ ಜಾತ್ರಾ ಮಹೋತ್ಸವ

ಗುರು ಮಹಾಲಿಂಗೇಶ್ವರ ಜಾತ್ರಾ ಮಹೋತ್ಸವ

 ಗುರು ಮಹಾಲಿಂಗೇಶ್ವರ ಜಾತ್ರಾ ಮಹೋತ್ಸವ  

ಮಹಾಲಿಂಗಪುರ    29 : ಸ್ಥಳೀಯ ಐತಿಹಾಸಿಕ   ಗುರು ಮಹಾಲಿಂಗೇಶ್ವರ ಜಾತ್ರೋತ್ಸವವು ಸೆ.5 ರಿಂದ ಸೆ.10 ವರೆಗೆ ಜರುಗಲಿದೆ ಎಂದು ಜಾತ್ರಾ ಕಮಿಟಿ ಚೇರ್ಮನ್ ರವಿಗೌಡ ಪಾಟೀಲ ತಿಳಿಸಿದರು.  ಸೋಮವಾರ ಸಂಜೆ ಪೀಠಾಧಿಪತಿ   ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಸೆಪ್ಟಂಬರ್ 5 ರ ಶುಕ್ರವಾರ ಜಟೋತ್ಸವ,  6ರ ಶನಿವಾರ ರಥೋತ್ಸವ, 7ರ ಭಾನುವಾರ ಮರುರಥೋತ್ಸವ, 8ರ ಸೋಮವಾರ ಕುಸ್ತಿಗಳು, 9 ಮತ್ತು 10 ರ ಮಂಗಳವಾರ ಮತ್ತು ಬುಧವಾರ ಈ ಎರಡೂ ದಿನ ರಸಮಂಜರಿ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. 

ಮುಖಂಡರಾದ ಲಕ್ಷ್ಮಣಗೌಡ ಪಾಟೀಲ, ಮಹಾಂತೇಶ ಹಿಟ್ಟಿನಮಠ, ಪುರಸಭಾ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಕೃಷ್ಣೇಗೌಡ ಪಾಟೀಲ, ಈರ​‍್ಪ ದಿನ್ನಿಮನಿ, ಪ್ರಕಾಶ ಜೀರಗಾಳ, ನಿಂಗಪ್ಪ ಬಾಳಿಕಾಯಿ, ಮಹಾಲಿಂಗ ಮಾಳಿ, ಬಸವರಾಜ ಕಂಠಿ, ಅರುಣಗೌಡ ಪಾಟೀಲ, ಮಹಾಲಿಂಗಪ್ಪ ಖೋತ, ಮಲ್ಲಿಕಾರ್ಜುನ ಕುಳ್ಳೊಳ್ಳಿ, ಬಸವರಾಜ ಪಾಶ್ಚಾಪುರ, ಚನ್ನಬಸಪ್ಪ ಹೊಸೂರ,  ಮಹಾಲಿಂಗಪ್ಪ ಕೋಳಿಗುಡ್ಡ, ಅಶೋಕ ಅಂಗಡಿ, ಗುರುಪಾದಯ್ಯ ಚಟ್ಟಿ, ಅನಿಲ ಜೋಶಿ, ಮುತ್ತಪ್ಪ ದಲಾಲ, ಮಲ್ಲಪ್ಪ ಕುಳಲಿ, ಬಸವರಾಜ ಮಡಿವಾಳ, ಮಲ್ಲಯ್ಯ ಜಕಾತಿಮಠ ಇತರರಿದ್ದರು 


ಸುದ್ದಿ ಓದಿ