ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಿ
- ಮಂಜುನಾಥ ಮರಿತಮ್ಮನವರ, ಸವಣೂರ. ಜಿ. ಹಾವೇರಿ.
ಪುಸ್ತಕಗಳ ಅಧ್ಯಯನದಿಂದ ಬಡವರಿಗೆ, ಶ್ರೀಮಂತರಿಗೆ, ವೃದ್ಧರಿಗೆ, ನವ ತರುಣರಿಗೆ, ಪುರುಷ-ಸ್ರೀಯರಿಗೆ, ವ್ಯಾಪಾರಿಗಳಿಗೆ, ವಿವಿಧ ಉದ್ಯೋಗಿಗಳಿಗೆ ........ ಹೀಗೆ ಎಲ್ಲರಿಗೂ ಪ್ರಯೋಜನವಾಗುತ್ತದೆ. ಓದುಗಾರಿಕೆಯು ಕಾಲ, ದೇಶ, ಲಿಂಗ, ವಯಸ್ಸಿನ ಬೇಧ ಭಾವವಿಲ್ಲದೆ ಎಲ್ಲರನ್ನೂ ಆವರಿಸಿಬಿಡುವ ವಿಶಿಷ್ಟಶಕ್ತಿ. ಉತ್ತಮ ಗ್ರಂಥಗಳನ್ನು ಓದುವುದರಿಂದ ನಮ್ಮ ಪದಸಂಪತ್ತು, ಭಾವನೆಗಳು, ಗ್ರಹಿಕೆಗಳು ವಿಶಾಲವಾಗುತ್ತವೆ. ಓದಿನಿಂದ ನಮ್ಮ ವ್ಯಕ್ತಿತ್ವ ವಿಕಾಸವಾಗುತ್ತಾ ಹೋಗುತ್ತದೆ. ಪುಸ್ತಕಗಳು ನಿಜರ್ೀವ ವಸ್ತುಗಳಾಗಿದ್ದರೂ ಅವು ಸದಾಜೀವಂತ; ಉಸಿರಾಡದಿದ್ದರೂ ಅವು ಸಜೀವಿಗಳು. ಅವುಗಳನ್ನು ಅಧ್ಯಯನ ಮಾಡುವದರಿಂದ ನಮಗೆ ಹೊಸಲೋಕವೊಂದನ್ನು ಸುತ್ತಿದ ಅನುಭವವಾಗುತ್ತದೆ. ಓದುವುದರಿಂದ ನಾವು ವಿಭಿನ್ನ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುತ್ತೇವೆ. ಓದುತ್ತಾ ಹೋದಂತೆ ನಮ್ಮ ಮಾತು ಹಾಗೂ ಬರಹಗಳು ಹೆಚ್ಚು ಹೆಚ್ಚು ಅರ್ಥಪೂರ್ಣ ಹಾಗೂ ಆಕರ್ಷಕವಾಗುತ್ತಾ ಹೋಗುತ್ತವೆ. ಮನುಷ್ಯಯಾವುದನ್ನು ಅರ್ಥಮಾಡಿಕೊಂಡಿಲ್ಲವೋ ಅದನ್ನು ಅರ್ಥಮಾಡಿಸುವ, ಯಾವುದನ್ನು ಯೋಚಿಸಿರಲಿಲ್ಲವೋ ಅದನ್ನು ಯೋಚನೆ ಮಾಡಿಸುವ, ಯಾವುದನ್ನು ಕಾಣಲಾಗಿಲ್ಲವೋಅದನ್ನು ಕಾಣಿಸುವಂತೆ ಮಾಡುವ ಪುಟ್ಟ ಪ್ರಂಪಚವೇ ಪುಸ್ತಕಗಳು. ಅಂತಹ ಪುಸ್ತಕಗಳನ್ನು ಓದುವುದನ್ನು ನಮ್ಮ ಮಕ್ಕಳಿಗೆ ಕಲಿಸಬೇಕು.
ಪುಸ್ತಕಗಳು ಆಯಾಕಾಲದ ಸಂಸ್ಕೃತಿಯ ಜೀವಂತ ಜೀವಾಳಗಳು. ಐತಿಹಾಸಿಕ ಪುಸ್ತಕಗಳನ್ನು ಓದುವುದರಿಂದ ನಾವುಹಿಂದಿನ ಕಾಲದ ಜನಜೀವನ, ಆಚಾರ-ವಿಚಾರ, ಉಡುಗೆ-ತೊಡುಗೆ, ಬಟ್ಟೆ ಬರೆಗಳ ಬಗ್ಗೆ, ಅವರು ಎದುರಿಸಿದ ಸಮಸ್ಯೆಗಳು, ಆ ಸಮಸ್ಯೆಗಳಿಂದ ಅವರು ಹೊರಬಂದ ಬಗೆಯನ್ನು ತಿಳಿದುಕೊಳ್ಳಬಹುದು. ಇದರಿಂದ ಮಕ್ಕಳಲ್ಲಿ ಸಮಸ್ಯೆಗಳನ್ನು ವಿಶ್ಲೇಷಿಸಿ ಪರಿಹಾರ ಕಂಡುಕೊಳ್ಳುವ ಸಾಮಥ್ರ್ಯ ಬೆಳೆಯುತ್ತದೆ.
ಸ್ವಾಮಿ ವಿವೇಕಾನಂದರು, ರಾಮಕೃಷ್ಣ ಪರಮಹಂಸರು, ಶಂಕರಾಚಾರ್ಯರು, ಬಸವಣ್ಣನವರು ಮುಂತಾದದಾರ್ಶನಿಕರ, ಮಹಾಪುರುಷರ ಜೀವನ ಚರಿತ್ರೆಗಳನ್ನು ಮಕ್ಕಳು ಓದುವಂತೆ ಪ್ರೋತ್ಸಾಹಿಸಿರಿ. ಡಾ|| ಬಿ.ಆರ್. ಅಂಬೇಡ್ಕರ್, ಸರ್. ಎಮ್. ವಿಶ್ವೇಶ್ವರಯ್ಯ, ಡಾ|| ಎ.ಪಿ.ಜೆ. ಅಬ್ದುಲ್ಕಲಾಂರಂತಹ ಕಡುಬಡತನದಲ್ಲಿ ಓದಿ ಮುಂದೆ ಬಂದು ಸಮಾಜಕ್ಕೆ ತಮ್ಮದೇ ಆಗಿರತಕ್ಕಂತಹ ಕೊಡುಗೆ ನೀಡಿದ್ದನ್ನು ಮಕ್ಕಳು ಅರ್ಥ ಮಾಡಿಕೊಳ್ಳಲಿ.
ಮನೆಯಲ್ಲಿ ಪುಸ್ತಕಗಳಿದ್ದರೆ ಏಕಾಂಗಿತನ ಹೊರಟು ಹೋಗುತ್ತದೆ. ಪುಸ್ತಕಗಳಿಗಿಂತ ಒಳ್ಳೆಯ ಮಿತ್ರರು ಇನ್ನೊಬ್ಬರಿಲ್ಲ. ಮಕ್ಕಳಿಗೆ ಮನೆಗಳಲ್ಲಿ ಓದುವ ವಾತಾವರಣ ಒದಗಿಸಿ, ಓದುವಿಕೆಗೆಅನುಕೂಲಕರ ಪ್ರಶಾಂತ ವಾತಾವರಣ ಕಲ್ಪಿಸಿ, ಬಗೆಬಗೆಯ ಪುಸ್ತಕಗಳನ್ನು ಮಕ್ಕಳಿಗೆ ಒದಗಿಸಿರಿ.
ಪಠ್ಯಪುಸ್ತಕದಲ್ಲಿನ ಪಾಠಗಳಿಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕೆನಿಸಿದಾಗ ಪರಾಮರ್ಶನ ಗ್ರಂಥಗಳನ್ನು ಬಳಸಿ ಮಕ್ಕಳು ಮಾಹಿತಿ ಪಡೆದುಕೊಳ್ಳಲಿ. ಇದರಿಂದ ಪಠ್ಯಾಂಶದ ಪರಿಕಲ್ಪನೆಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಅನುಕೂಲವಾಗುತ್ತದೆ. ಪುಸ್ತಕಗಳ ಅಧ್ಯಯನದಿಂದ ಮಕ್ಕಳ ಸಾಮಾನ್ಯಜ್ಞಾನ ಹೆಚ್ಚುತ್ತಾ ಹೋಗುತ್ತದೆ. ಹೆಚ್ಚು ಹೆಚ್ಚು ಓದುವುದರಿಂದ ಸ್ಪಧರ್ಾತ್ಮಕ ಪರೀಕ್ಷೆಗೆ ಮನೋಭೂಮಿಕೆ ತಯಾರಾದಂತಾಗುತ್ತದೆ.
ಬೇರೆ ಬೇರೆಧರ್ಮದ ಗ್ರಂಥಗಳನ್ನು ಓದುವುದರ ಮೂಲಕ, ಧಾಮರ್ಿಕ ಗುರುಗಳ ಜೀವನ ತಿಳಿದುಕೊಳ್ಳವುದರ ಮೂಲಕ ಎಲ್ಲ ಧರ್ಮಗಳ ಸಾರವೂ ಒಂದೇ ಎಂಬುದು ಅರ್ಥವಾಗುತ್ತದೆ. ಇದರಿಂದ ಮಕ್ಕಳಲ್ಲಿ ಧಾಮರ್ಿಕ ಸಹಿಷ್ಣುತಾ ಮನೋಭಾವ, ಐಕ್ಯತಾ ಮನೋಭಾವ ವೃದ್ಧಿಸುತ್ತದೆ. ನೀತಿ ಕಥೆಗಳನ್ನು ಓದುವ ಮೂಲಕ ಮಕ್ಕಳು ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುತ್ತಾರೆ.
ಪುಸ್ತಕಗಳನ್ನು ಓದುವುದರಿಂದ ವಿರಾಮಕಾಲದ ಸದುಪಯೋಗವಾಗುತ್ತದೆ. ಓದುವ ಹವ್ಯಾಸ ಬೆಳೆಸಿಕೊಂಡರೆ ದುಶ್ಚಟಗಳಿಗೆ ಬಲಿಯಾಗುವುದಿಲ್ಲ. ಪಾಲಕರು ಪುಸ್ತಕಗಳನ್ನು ಸಂಗ್ರಹಿಸಿ ಓದುವ ಹವ್ಯಾಸ ಬೆಳೆಸಿಕೊಂಡರೆ ಮಕ್ಕಳು ತಾವೇತಾವಾಗಿ ಓದುವ ಹವ್ಯಾಸ ಬೆಳೆಸಿಕೊಳ್ಳುತ್ತಾರೆ. ಕೀಳುಮಟ್ಟದ, ಲೈಂಗಿಕ ಆಸಕ್ತಿ ಹೆಚ್ಚಿಸುವ, ಅಪರಾಧ ಸಂಬಂಧಿ ಪುಸ್ತಕ ಓದದಂತೆ ಪಾಲಕರು ಮಕ್ಕಳಿಗೆ ಮಾರ್ಗದರ್ಶನ ಮಾಡಬೇಕು.
ನಾವು ಬಾಹ್ಯ ಆಡಂಬರಗಳಿಗೆ ಹೆಚ್ಚಿಗೆ ಬೆಲೆ ಕೊಡುತ್ತೇವೆ. ಮಕ್ಕಳ ತಿಂಡಿ-ತಿನಿಸು, ಬಟ್ಟೆ, ಅಲಂಕಾರಿಕ ಸಾಮಾನುಗಳು, ಆಟಿಕೆಗಳು ಮುಂತಾದವುಗಳಿಗೆ ಸಾವಿರಾರು ರೂಪಾಯಿ ಖಚರ್ುಮಾಡುತ್ತೇವೆ. ಅದುತಪ್ಪಲ್ಲ. ಆದರೆ ನೂರು ರೂಪಾಯಿಯ ಪುಸ್ತಕ ಖರೀದಿಸಲು ನಾಲ್ಕಾರು ಬಾರಿಯೋಚಿಸುತ್ತೇವೆ. ಇದುತಪ್ಪು. ಉತ್ತಮಗುಣ ಮಟ್ಟದ ಪುಸ್ತಕಗಳನ್ನು ಖರೀದಿಸಿ ಮಕ್ಕಳಿಗೆ ನೀಡಿ.
ಉತ್ತಮ ಪುಸ್ತಕಗಳು ಉತ್ತಮ ವ್ಯಕ್ತಿತ್ವವನ್ನುರೂಪಿಸುತ್ತದೆ. ಬೇರೆ ಬೇರೆ ಊರುಗಳಿಗೆ ಹೋದಾಗ ಮಕ್ಕಳನ್ನು ಪುಸ್ತಕದ ಮಳಿಗೆಗಳಿಗೆ ಕರೆದುಕೊಂಡು ಹೋಗಿ. ಅವರಿಗೆ ಇಷ್ಟವಾದ ಪುಸ್ತಕ ಕೊಡಿಸಿ. ಉತ್ತಮ ಸಾಹಿತ್ಯಿಕ, ನೈತಿಕ, ಸಾಂಸ್ಕೃತಿಕ, ಸ್ಪಧರ್ಾತ್ಮಕ ಪರೀಕ್ಷೆಯ ಪುಸ್ತಕಗಳನ್ನು ಕೊಂಡುಕೊಂಡು ಮನೆಯಲ್ಲಿ ಸಣ್ಣ ಗ್ರಂಥಾಲಯವೊಂದನ್ನು ನಿಮರ್ಿಸಿರಿ. ಬಿಡುವಿದ್ದಾಗ ಅವುಗಳಲ್ಲಿನ ಮುಖ್ಯಾಂಶಗಳನ್ನು ಮಕ್ಕಳಿಗೆ ಹೇಳಿ. ಸಂಧರ್ಭ, ಸನ್ನಿವೇಶಗಳ ಒತ್ತಡಕ್ಕೆ ಸಿಕ್ಕು ಸ್ನೇಹಿತರು, ಬಂಧು-ಬಾಂದವರು ಸ್ವತಃ ಮನೆಯವರೇ ಕೆಲವೊಮ್ಮೆ ನಮಗೆ ಮೋಸ, ವಂಚನೆ ಮಾಡಬಹುದು. ಆದರೆಉತ್ತಮ ಪುಸ್ತಕಗಳು ಯಾರಿಗೂ ಯಾವಕಾಲದಲ್ಲಿಯೂ, ಯಾವ ಸಂದರ್ಭದಲ್ಲಿಯೂ ಮೋಸಮಾಡಿಯೇ ಇಲ್ಲ. ಹೀಗಾಗಿ ಪುಸ್ತಕಗಳು ಅತ್ಯುತ್ತಮವಾದ ಸಂಗಾತಿಗಳು, ಸ್ನೇಹಿತರು ಮತ್ತು ಶಿಕ್ಷಕರು. ಆದ್ದರಿಂದ ನಿಮ್ಮ ಮಕ್ಕಳಿಗೆ ಪುಸ್ತಕಗಳ ಸಾಂಗತ್ಯ ಮತ್ತು ಓದುವ ಹವ್ಯಾಸವನ್ನು ಬೆಳೆಸಿರಿ.