ಬಸ್ ಪ್ರಯಾಣದ ದರ ಹೆಚ್ಚಳ ಸರ್ಕಾರ ಕೂಡಲೇ ಹಿಂಪಡೆಯಬೇಕು :ವೆಲ್ಫೇರ್ ಪಾರ್ಟಿ

ಬಸ್ ಪ್ರಯಾಣದ ದರ ಹೆಚ್ಚಳ ಸರ್ಕಾರ ಕೂಡಲೇ ಹಿಂಪಡೆಯಬೇಕು :ವೆಲ್ಫೇರ್ ಪಾರ್ಟಿ

ಬಸ್ ಪ್ರಯಾಣದ ದರ ಹೆಚ್ಚಳ ಸರ್ಕಾರ ಕೂಡಲೇ ಹಿಂಪಡೆಯಬೇಕು :ವೆಲ್ಫೇರ್ ಪಾರ್ಟಿ  

ಬೆಂಗಳೂರು 03 : ರಾಜ್ಯದಲ್ಲಿ ಬಸ್ ಪ್ರಯಾಣದ ದರ ಹೆಚ್ಚಳದ ಬಗ್ಗೆ ರಾಜ್ಯ ಸರ್ಕಾರ ತನ್ನ ನಿರ್ಧಾರ ಕೂಡಲೇ ಹಿಂಪಡಿಯಬೇಕು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರು ಅಡ್ವೋಕೇಟ್ ತಾಹೇರ್ ಹುಸೇನ್ ಆಗ್ರಹಿಸಿದ್ದಾರೆ.ದೇಶದಲ್ಲಿ ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಏರುತ್ತಲೇ ಇದು ಜನ ಸಂಕಷ್ಟದಲ್ಲಿ ಇದ್ದಾರೆ,ಇಂಥಹ ಸಂಧರ್ಭ ದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಜನರಿಗೆ ನೇರವು ನೀಡುವ ಬದಲು ರಾಜ್ಯದಲ್ಲೂ ಬೆಲೆ ಏರಿಕೆ ಮಾಡಿ ಗಾಯದ ಮೇಲೆ ಬರೇ ಎಳೆಯುವ ಕೆಲಸ ಮಾಡುತ್ತಿದೆ.ಬಸ್ ಪ್ರಯಾಣ ದರ ಇದ್ದಕಿದಂತೆ 15ಅ ಏರಿಕೆ ಮಾಡುವ ನಿರ್ಧಾರ ಖಂಡನಿಯ, ಗ್ಯಾರಂಟಿ ಯೋಜನೆ ಯಿಂದ ಆಗುವ ನಷ್ಟದ ಹೊರೆ ಜನರ ಮೇಲೆ ಯಾವುದೇ ಕಾರಣಕ್ಕೂ ಹಾಕಬಾರದು, ಯೋಜನೆ ನಡೆಸಲಿಕ್ಕೆ ಸಮರ್ಥ ಕಾರ್ಯತಂತ್ರ ರೋಪಿಸಬೇಕೆಂದು ಅವರು ಹೇಳಿದರು.ಇನ್ನೊಂದು ಕಡೆ ಕೋವಿಡ್ ಸಂಧರ್ಭದಲ್ಲಿ ತನ್ನ ಪ್ರಾಣ ಕಳೆದುಕೊಂಡ ಸಾರಿಗೆ ಸಿಬಂಧಿಗಳ ಕುಟುಂಬಗಳು ಇನ್ನು ತನಕ ಪರಿಹಾರ ಸಿಗದೇ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ, ಈ ಬಗ್ಗೆ ಮಾನ್ಯ ಸಾರಿಗೆ ಸಚಿವರ ಗಮನಕ್ಕೆ ವಿಷಯ ತಂದು ಒಂದು ವರುಷವಾದರೂ ಇನ್ನು ತನಕ ಇದರ ಬಗ್ಗೆ ಯಾವುದೇ ಕ್ರಮ ತಗೆದುಕೊಂಡಿಲ್ಲ. ಸರಕಾರ ಬೆಲೆ ಹೆಚ್ಚಳ ಮಾಡುವ ಬದಲು ಇಂಥ ಸಮಸ್ಯೆ ಗಳ ಬಗ್ಗೆ ಕೂಡಲೇ ಗಮನಹರಿಸಬೇಕೆಂದು ಅವರು ಒತ್ತಾಯಿಸಿದರು. 


ಸುದ್ದಿ ಓದಿ