ಹಗರಿಬೊಮ್ಮನಹಳ್ಳಿ

ಉಚಿತ ಸಾಮೂಹಿಕ ವಿವಾಹಗಳು ಬಡವರಿಗೆ ಒಂದು ವರ: ಭೀಮಾನಾಯ್ಕ್

ಉಚಿತ ಸಾಮೂಹಿಕ ವಿವಾಹಗಳು ಬಡವರಿಗೆ ಒಂದು ವರ: ಭೀಮಾನಾಯ್ಕ್

ಲೋಕದರ್ಶನ ವರದಿ

ಹಗರಿಬೊಮ್ಮನಹಳ್ಳಿ 29: ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ನೆರಳು ಪತ್ರಿಕೆಯ 25ನೇ ವಾಷರ್ಿಕೋತ್ಸವದ ಪ್ರಯುಕ್ತ ನಡೆದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 18ನವ ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಈ ಸಂಧರ್ಭದಲ್ಲಿ ಶಾಸಕ ಎಸ್.ಭೀಮಾನಾಯ್ಕ್ ಮಾತನಾಡಿ ಪ್ರಸ್ತುತ ದುಬಾರಿ ದಿನಮಾನಗಳಲ್ಲಿ ಇಂತಹ ಸರಳ ಉಚಿತ ಸಾಮೂಹಿಕ ವಿವಾಹಗಳು ಬಡವರಿಗೆ ಒಂದು ವರವಾಗಿದೆ, ರಾಜ್ಯದಲ್ಲಿ ಹೆಚ್ಚಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಕೊಪ್ಪಳದ ಗವಿಮಠಗಲಲ್ಲಿ ಸಾಮೂಹಿಕ ವಿವಾಹಗಳನ್ನು ಕಾಣಬಹುದಾಗಿತ್ತು, ಇಂದು ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ನಾಲ್ಕರಿಂದ ಐದು ಮಠಗಳಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಕಾಣಬಹುದಾಗಿದೆ ಇದೆಲ್ಲದಕ್ಕೂ ವಿಶೇಷವಾಗಿ ನೆರಳು ಪತ್ರಿಕೆಯ ಸಂಪಾದಕ ಬುಡ್ಡಿ ಬಸವರಾಜ ಪ್ರತಿ ವಾಷರ್ಿಕೋತ್ಸವದಲ್ಲಿ ಸತತವಾಗಿ ಸಾಮೂಹಿಕ ವಿವಾಹವನ್ನು ಏರ್ಪಡಿಸುತ್ತಿರುವುದು ನಿಜಕ್ಕೂ ಸಂತಸದ ವಿಷಯವಾಗಿದೆ, ಇದರಿಂದ ಬಡವರ ಮೇಲಿನ ಹೊರೆಯನ್ನು ಇಳಿಸುವಲ್ಲಿ ಪ್ರಮಾಣಿಕ ಪ್ರಯತ್ನವನ್ನು ಪತ್ರಿಕೆಯ ವಾಷರ್ಿಕೋತ್ಸವದಲ್ಲಿ ಮಾಡುತ್ತಿದೆ, ಕೇವಲ ದೇಣಿಗೆ ಕೊಡುವುದು ದೊಡ್ಡದಲ್ಲ, ವಿವಾಹ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡುವುದು ದೊಡ್ಡ ವಿಷಯವಾಗಿದೆ. ರಾಜಕೀಯದಲ್ಲಿರಲಿ ಇರದಿರಲಿ ಈ ಭಾಗದಲ್ಲಿ ನಡೆಯುವ  ಸಾಮೂಹಿಕ ವಿವಾಹಗಳಿಗೆ ತಾಳಿಯನ್ನು ನಾನು ಉಚಿತವಾಗಿ ನೀಡುವೆ ಎಂಬ ಭರವಸೆಯನ್ನು ನೀಡಿದರು.

ನೆರಳು ಪತ್ರಿಕೆಯ ಸಂಪಾದಕ ಬುಡ್ಡಿ ಬಸವರಜ್ ಪ್ರಾಸ್ತಾವಿಕವಾಗಿ ಮಾತನಾಡಿ ಎಷ್ಟೋ ಜನ ಹತ್ತಾರು ಕಡೆ ಜೀತಕ್ಕಿದ್ದು, ತಮ್ಮ ಆಸ್ತಿ ಮಾರಿ, ಮಕ್ಕಳ ಮದುವೆ ಮಾಡಿದ್ದುಂಟು, ಸಾಲದ ಹೊರೆ ಹೊತ್ತು ವಿವಾಹ ನೆರವೇರಿಸುತ್ತಿದ್ದಾರೆ ಅಂತಹ ಬಡ ಕುಟುಂಬಗಳಿಗೆ ನೆರವಾಗಲು ಈ ಸಮೂಹಿಕ ವಿವಾಹ ಕಾರ್ಯಕ್ರಮ ಮಾಡಲಾಗುತ್ತಿದೆ, ನೆರಳು ಪತ್ರಿಕೆಯು 3 ಜಿಲ್ಲೆಯಲ್ಲಿ ತನ್ನದೆ ಆದ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿದೆ ಸದ್ಯ ನಾಲ್ಕನೇ ಜಿಲ್ಲೆಯಾಗಿ ವಿಜಯನಗರವು ಸೇರಿದೆ, ಮುಂದೆಯೇ ಇದೇ ರೀತಿ ತನ್ನ ಅಸ್ತಿತ್ವ ಕಾಪಾಡಿಕೊಳ್ಳಲಿದೆ, ಬೇಗ ವಿವಾಹ ಮಾಡಿಕೊಡುವ ಅಚಾತುರ್ಯ ಮಾಡದಂತೆ ಪೋಷಕರಿಗೆ ಕರೆ ನೀಡಿದರು. ಮಕ್ಕಳ ಆರೋಗ್ಯದ ಹಿತ ದೃಷ್ಠಿಯನ್ನು ಕಾಪಾಡಬೇಕಾಗಿದೆ, ನಾನು ಮಾಡುವ ಪ್ರತಿಯೊಂದು ಕಾರ್ಯಕ್ರಮಕ್ಕೆ ನಮ್ಮ ಕುಟುಂಬ ಮತ್ತು ಗ್ರಾಮದ ಪ್ರತಿಯೊಬ್ಬ ಯುವಕರು ಸಹಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಕೊಟ್ಟೂರು-ಉತ್ತಂಗಿ ಮಠದ ಮ.ನಿ.ಜಗದ್ಗುರು ಸೋಮಶಂಕರ ಮಹಾಸ್ವಾಮಿ ಹಾಗೂ ಷಟಸ್ಥಳ ಬ್ರಹ್ಮೆ ಚರಂತೇಶ್ವರ ಮಹಾಸ್ವಾಮಿಗಳು ಆಶಿರ್ವಚನ ನೀಡಿದರು.

ಈ ಸಂಧರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಗ್ರಾಮೀಣ ಕಾರ್ಯದಶರ್ಿ ಬಂಗ್ಲೆ ಮಲ್ಲಿಕಾಜರ್ುನ, ಎಂ.ಮರಿರಾಮಪ್ಪ, ಕನ್ನಿಹಳ್ಳಿ ಚಂದ್ರಶೇಖರ್, ಹೆಗ್ಡಾಳ್ ರಾಮಣ್ಣ, ಸೋಮಲಿಂಗಪ್ಪ, ಅಕ್ಕಿ ತೋಟೇಶ್, ಮುಟುಗನ ಹಳ್ಳಿ ಕೊಟ್ರೇಶ್, ಬಾಷಾ .ಕೆ,ಅನಿಲ್ ಕುಮಾರ್ ಜಾಣ, ಜಿ.ತಿಮ್ಮಣ್ಣ, ಭೀಮರಾಜ್ ಯಾದವ್  ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಎಂ.ಶಿವಮೂತರ್ಿ ಸ್ವಾಗತಿಸಿದರು, ಬಿ.ಹುಲುಗಪ್ಪ ನಿರೂಪಿಸಿದರು, ಕೋಗಳಿ ವೀರಭದ್ರ ಪ್ರಾಥರ್ಿಸಿದರು 

ಸುದ್ದಿ ಓದಿ