ಮುದ್ದೆಬಿಹಾಲ್

10ರಿಂದ ಉಚಿತ ನೇತ್ರ ತಪಾಸಣೆ, ಚಿಕಿತ್ಸಾ ಶಿಬಿರ: ಸದುಪಯೋಗಕ್ಕೆ ಮನಿಯಾರ ಕರೆ

10ರಿಂದ ಉಚಿತ ನೇತ್ರ ತಪಾಸಣೆ, ಚಿಕಿತ್ಸಾ ಶಿಬಿರ: ಸದುಪಯೋಗಕ್ಕೆ ಮನಿಯಾರ ಕರೆ

10ರಿಂದ ಉಚಿತ ನೇತ್ರ ತಪಾಸಣೆ, ಚಿಕಿತ್ಸಾ ಶಿಬಿರ: ಸದುಪಯೋಗಕ್ಕೆ ಮನಿಯಾರ ಕರೆ  

ಮುದ್ದೇಬಿಹಾಳ 06: ಸಧ್ಯ ಶ್ರಾವಣ ಮಾಸದ ನಿಮಿತ್ಯ ವಿಜಯಪುರ ಸುಪ್ರಸಿದ್ಧ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥ ಡಾ, ಪ್ರಭುಗೌಡ ಲಿಂಗದಳ್ಳಿ ಇವರ ನೇತೃತ್ವದಲ್ಲಿ ಇದೇ  ದಿ, 10,11,14 ಮೂರು ದಿನಗಳವರೆಗೆ ಮುದ್ದೇಬಿಹಾಳ, ತಾಳಿಕೋಟಿ, ನಾಲತವಾಡ ಪಟ್ಟಣಗಳಲ್ಲಿ ಉಚಿತ ನೇತ್ರ ತಪಾಸಣಾ ಹಾಗೂ ನೇತ್ರ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಕಾರಣ ದೃಷ್ಠಿದೋಷದ ತೊಂದರೆ ಅನುಭವಿಸುತ್ತಿರುವ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಮಾಜ ಸೇವಕ ಅಯೂಬ ಮನಿಯಾರ ಹೇಳಿದರು. 

ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 12 ವರ್ಷಗಳಿಂದ ನಮ್ಮ ತಂದೆ ತಾಯಿಯವರ ಸ್ಮರಣಾರ್ಥ ಮನಿಯಾರ ಚಾರಿಟೇಬಲ್ ಟ್ರಸ್ಟ್‌ ವತಿಯಿಂದ ಪವಿತ್ರ ರಂಜಾನ ತಿಂಗಳಲ್ಲಿ ಈ ಉಚಿತ ನೇತ್ರ ತಪಾಸಣಾ ಹಾಗೂ ಉಚಿತ ನೇತ್ರ ಚಿಕಿತ್ಸೆ ಹಾಗೂ ಆಹಾರ ಧಾನ್ಯಗಳ  ರಂಜಾನ ಈದ  ಕಿಟ್ ವಿತರಣೆ, ನೂರಾರು ಬಡ ನಿರ್ಗತಿಕ ವಿಧವೆಯರಿಗೆ ಮಾಸಿಕ ಪಿಂಚಣಿ, ಬಡ ಮತ್ತು ಪ್ರತಿಭಾನ್ವೀತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕಂಪ್ಯೂಟರ್ ತರಬೇತಿ, ಸೇರಿದಂತೆ ಅನೇಕ ರೀತಿಯ ಸಾಮಾಜಕ ಸೇವೆ ಮಾಡುತ್ತಾ ಬಂದಿದ್ದು. 

ಆದರೇ ಪ್ರಸ್ತುತ ಈ ವರ್ಷದಿಂದ ಬರಿ ರಂಜಾನ ತಿಂಗಳು ಮಾತ್ರವಲ್ಲದೇ ಹಿಂಧೂ ಧರ್ಮಧರ್ಮ ಪವಿತ್ರ ತಿಂಗಳಾದ ಶ್ರಾವಣ ಮಾಸದಲ್ಲಿಯೂ ಇದೇ ದಿ, 10 ರಂದು ಬೆಳಿಗ್ಗೆ 8 ಗಂಟೆಇಂದ ಸಂಜೆ 5 ಗಂಟೆಯವರಿಗೆ ಮುದ್ದೇಬಿಹಾಳ ಪಟ್ಟಣದ ಅನುಗ್ರಹ ಕಣ್ಣಿನ ಆಸ್ಪತ್ರೆಯಲ್ಲಿ, ದಿ, 11 ರಂದು ತಾಳಿಕೋಟಿಯಲ್ಲಿ, ದಿ, 12 ನಾಲತವಾಡ ಪಟ್ಟಣದಲ್ಲಿ ಕೂಡ ಈ ಉಚಿತ ನೇತ್ರ ತಪಾಸಣಾ ಹಾಗೂ ನೇತ್ರ ಶಸ್ತ್ರ ಚಿಕಿತ್ಸಾ ಶಿಭೀರ ನಡೆಸಲಾಗುವುದು ಬಳಿಕ ದಿ, 14 ರಂದು ಶೀಬೀರದಲ್ಲಿ ಬಾಗವಹಿಸಿ ಶಸ್ತ್ರ ಚಕಿತ್ಸೆಗೊಳಗಾದವರನ್ನು ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸಲಾಗುವುದು, ಈ ವೇಳೆ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದವರನ್ನು ವಿಜಯಪುರಕ್ಕೆ ಕರೆದುಕೊಂಡು ಹೋಗಿಬರಲು ಉಚಿತ ಬಸ್ ಸೌಲಭ್ಯ ಕಲಿಸಲಾಗಿದೆ. 

ಬಳಿಕ ದಿ. 20 ಬುಧವಾರದಂದು ಬಿದರಕುಂದಿ ಆರ್ ಎಂ ಎಸ್ ಎ  ಶಾಲೆಯ ಹತ್ತಿರ ವಿರುವ ನಮ್ಮ ಶಿಕ್ಷಣ ಸಂಸ್ಥೆಯ ಶಾಲಾ ಆವರಣದಲ್ಲಿ ಗಣ್ಯರಶ್ರಾವಣ ಮಾಸದ ಸೌಹಾರ್ಧ ಸಂಭ್ರಮ ಎನ್ನುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಈ ವೇಳೆ ಹಲವಾರ ಮಠಾಧೀಶರು, ಸ್ವಾಮಿಜಿಗಳು, ರಾಜಕೀಯ ಮುಖಂಡರು, ಸಾಹಿತಿಗಳು, ವಿವಿಧ ಸಂಘ ಸಂಸ್ಥೆಯ ಮುಖಂಡರು ಬಾಗವಹಿಸಲಿದ್ದಾರೆ ಜತೆಗೆ ಇದೇ ಸಂದರ್ಭದಲ್ಲಿ ನೇತ್ರ ಚಿಕಿತ್ಸೆ ಪಡೆದುಕೊಂಡ ರೋಗಿಗಳಿಗೆ ಉಚಿತ ಓಷಧ ವಿತರಣೆ ಮಾಡಲಾಗುವುದು. ಶಿಬಿರಕ್ಕೆ ಸಂಬಂಧಿಸಿದ ವಿಷಯಕ್ಕೆ ಅಪ್ತಾಬಹ್ಮದ ಮನಿಯಾರ 8123277124  ಅವರ ದೂರವಾಣಿಗೆ ಕರೆ ಮಾಡಿ ಸಂಪರ್ಕಿಸಬೇಕೆಂದು ತಿಳಿಸಿದರು.  

ತಾಲೂಕಾ ಕುರುಬ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿಯವರು ಮಾತನಾಡಿ ಇಂದು ಬಹಳಷ್ಟು ಜನ ಶ್ರೀಮಂತರಿದ್ದಾರೆ ಆದರೇ ತಾವು ಗಳಿಸಿದ ಹಣದಲ್ಲಿ ಒಂದು ಭಾಗವನ್ನು ಇಂಹತ ಸಮಾಜ ಮುಖಿ ಕೆಲಸಕ್ಕೆಂದು ವಿನಿಯೋಗಿಸುತ್ತಿರುವ ಮೂಲಕ ಸಮಾಜ ಸೇವೆ ಮಾಡುವವರು ಕೆಲವಷ್ಠೆ ಜನರಿರುತ್ತಾರೆ ಅಂತವರ ಸಾಲಿನಲ್ಲಿ ಅಯ್ಯೂಬ ಮನಿಯಾರರೊಬ್ಬರು ಎಂದರು. 

ರೂಪಸಿಂಗ್ ಲೋನಾರಿ, ಫಯಾಜ ಸಾಸನೂರ, ಹಾಜಿ ಮಹಿಬೂಬಸಾಬ  ಗೋಲಂದಾಜ, ಐ ಎಲ್ ಮಮದಾಪೂರ, ದಾದಾ ಎತ್ತಿನಮನಿ ಸೇರಿದಂತೆ ಹಲವರು ಇದ್ದರು. 


ಸುದ್ದಿ ಓದಿ