ಜಾನಪದ ಸಂಗೀತ ಸಾಮಾಜಿಕ ಅರಿವು ನಾಟಕ ಕಾರ್ಯಕ್ರಮ
ಬಳ್ಳಾರಿ: ದೇವಿ ನಗರದ ಸುಂಕ್ಲಮ್ಮ ದೇವಿ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಂಗಸ್ವಂದನ ಕಲಾ ಟ್ರಸ್ಟ್ ಇವರ ವತಿಯಿಂದ ಜಾನಪದ ಸಂಗೀತ ಹಾಗೂ ಸಾಮಾಜಿಕ ಅರಿವು ನಾಟಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ನಂತರ ಡಾ.ಬಾಬು ಜಗಜೀವನ್ ರಾಮ್ ಜನಜಾಗೃತಿ ವೇದಿಕೆಯ ಗಾದಿಲಿಂಗಪ್ಪ ಇವರು ಮಾತನಾಡಿ ನಾಡಿನ ಸಾಂಸ್ಕೃತಿಕ ಪರಂಪರೆಗೆ ಮೂಲ ಜನಪದ ಕಲೆ ಇತ್ತೀಚಿಗೆ ಕಲೆಯ ಬಗ್ಗೆ ಜನರಲ್ಲಿ ತತ್ಸಾರ ಮನೋಭಾವ ಹೆಚ್ಚಾಗಿದ್ದು ಇದರಿಂದ ಮುಂದಿನ ಪೀಳಿಗೆಗೆ ಕಲೆ ಸಂಸ್ಕೃತಿಯನ್ನ ಪರಿಚಯಿಸುವ ಕೆಲಸ ಸಮಾಜದ ನಿರ್ಲಕ್ಷ ದಿಂದ ಅಳಿವಿನಂಚಿಗೆ ಬಂದು ನಿಂತಿವೆ. ಆದ್ದರಿಂದ ಟಿವಿ ಹಾಗೂ ಮೊಬೈಲ್ ಹಾವಳಿಯಲ್ಲಿ ದೇಸಿ ಪರಂಪರೆಗೆ ಇವತ್ತು ಕೊಡಲೇ ಪೆಟ್ಟು ಬಿದ್ದಂತಾಗಿದೆ,ಇದರಿಂದ ಮಾನವೀಯ ಮೌಲ್ಯಗಳು ಕಳಚಿ ಜನರಲ್ಲಿ ಅಸೂಯೆ ದ್ವೇಷ ಭಾವನೆಯಲ್ಲಿ ಜೀವನ ಕಳೆಯುವ ಅಂತಕ್ಕೆ ಬಂದಿದ್ದೇವೆ.
ಇನ್ನಾದರೂ ನಾಡಿನ ಮೂಲ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಮೂಲಕ ಕಲೆ ಸಾಹಿತ್ಯ ಸಂಗೀತ ನಾಟಕ ಇವುಗಳನ್ನ ಈಗಿನ ಮಕ್ಕಳಲ್ಲಿ ಆಸಕ್ತಿ ಮೂಡುವಂತೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ.ಇದಕ್ಕೆ ಶೈಕ್ಷಣಿಕವಾಗಿಯೂ ಮಕ್ಕಳಲ್ಲಿ ಸಾಂಸ್ಕೃತಿಕ ಮನೋಭಾವ ಹೆಚ್ಚಿಸುವಲ್ಲಿ ಶೈಕ್ಷಣಿಕ ಸಂಸ್ಥೆಗಳ ಪ್ರಮುಖ ಪಾತ್ರ ವಹಿಸಬೇಕಾಗುತ್ತದೆ ಎಂದು ಹೇಳಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜನಡಿಯಲ್ಲಿ ಎಚ್ ಜಿ ಸುಂಕಪ್ಪ ಇವರಿಂದ ಜನಪದ ಸಂಗೀತ ಹಾಗೂ ಆನಂದ ಬಿ ಕಲಕಂಬ ತಂಡದಿಂದ ಸಾಮಾಜಿಕ ಅರಿವು ನಾಟಕವನ್ನು ಪ್ರದರ್ಶಿಸಲಾಯಿತು.ಈ ಕಾರ್ಯಕ್ರಮದಲ್ಲಿ ಹಿರಿಯ ಜನಪದ ಕಲಾವಿದರಾದ ಎಸ್ ಎಮ್ ಹುಲುಗಪ್ಪ, ರಂಗ ಸ್ಪಂದನ ಟ್ರಸ್ಟಿನ ಅಧ್ಯಕ್ಷ ಹೇಮಂತ್ , ಹುಲಿಗಮ್ಮ, ಸರಸ್ವತಿ,ಲಕ್ಷ್ಮೀದೇವಿ,ಹನುಮಯ್ಯ,ಅಶ್ವಿನಿ,ತಾಯಪ್ಪ,ಎರಿಸ್ವಾಮಿ,ವೀರೇಶ್, ದಳವಾಯಿ ಲೋಕೇಶ, ವಾದ್ಯ ಸಹಕಲಾವಿದರಾದ ಹೇಮಂತ್ ಕುಮಾರ್ವಿಜಯಕುಮಾರ್, ಇತರರು ಉಪಸ್ಥಿತರಿದ್ದರು