ಮಧುಸೂದನ್ ಛಬ್ಬಿ ಸೇವಾ ಸಂಸ್ಥೆಯ ಪ್ರಥಮ ವಾರ್ಷಿಕೋತ್ಸವ
ಲೋಕದರ್ಶನ ವರದಿ
ಶಿಗ್ಗಾವಿ 06: ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಹೀಗಿದ್ದಾಗಲೂ ಮನುಷ್ಯನು ಬದುಕಿನಲ್ಲಿಕಷ್ಟ ಸುಖಗಳು ಇರುವುದು ಸಹಜ ಈ ಎರಡನ್ನು ಸಮಾನದೃಷ್ಟಿಯಿಂದ ಸ್ವೀಕರಿಸುವ ಮನಸ್ಥಿತಿ ನಮ್ಮದಿರಬೇಕು ಎಂದು ಧಾರವಾಡ ಜೆಎಸ್ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿನದತಡಗಲಿ ಹೇಳಿದರು.
ಸುಕ್ಷೇತ್ರ ಅರಟಾಳ ಜನಾಲಯ ಸಭಾಭವನದಲ್ಲಿ ಮಧುಸೂದನ್ ಛಬ್ಬಿ ಸೇವಾ ಸಂಸ್ಥೆಯ ಪ್ರಥಮ ವಾರ್ಷಿಕೋತ್ಸವ ಕ್ಷೇತ್ರದ ಜಿನಬತ್ತಿ ಗೀತೆಗಳು ಹಾಗೂ ಮಗನಿಗಾಗಿ ತಾಯಿ ರಚಿಸಿ ಹಾಡಿದಧ್ವನಿ ಸುರಳಿ ಬಿಡುಗಡೆ ಮತ್ತು ಅನಾಥ ಬಡ ವಿದ್ಯಾರ್ಥಿಗಳಿಗೆ ಧನಸಹಾಯ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಉದ್ಘಾಟನಾ ಪ್ರತಿಭಾವಂತ ಸುರದ್ರೂಪಿ ಮಗನನ್ನ ಕಳೆದುಕೊಂಡ ಭಾರತಿ ವರ್ಧಮಾನ್ ದಂಪತಿಗಳು ಅವನ ಹೆಸರಲ್ಲಿಟ್ರಸ್ಟ್ ಸ್ಥಾಪಿಸಿ ಅದರ ಮುಖಾಂತರ ಜನೋಪಯೋಗಿ ಕೆಲಸ ಮಾಡುತ್ತಿರುವುದು ಶ್ಲಾಘನಿಯವಾದದ್ದು ಎಂದು ಹೇಳಿದರು.
ಸಮಾಜ ಸೇವಾ ರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಶಿಧರ್ ಎಲಿಗಾರ್ ಕೊರೋನಾದಿಂದ ಬದುಕಿ ಪುನರ್ಜನ್ಮ ಪಡೆದ ನಾನು ಸಾಕಷ್ಟು ಸಂಪತ್ತಿದೆ ನಾನೇನಾದರೂ ಜಗತ್ತಿಗೆ ಕೊಟ್ಟು ಹೋಗಬೇಕೆಂಬ ಹಂಬಲದಿಂದ ಬಡ ವಿದ್ಯಾಥರ್ಿಗಳಿಗೆ ಬಡವರಿಗೆದಾನ ಮಾಡುತ್ತಿದ್ದೇನೆ ಆದರೆ ಸಾಮಾನ್ಯ ಬದುಕು ಬದುಕುತ್ತಿರುವ ಸಹೋದರಿ ಭಾರತೀಯ ದಂಪತಿಗಳು ಮಗನ ಆಸೆಯಂತೆಅನಾಥ ಮಕ್ಕಳಿಗೆ ಬಡ ವಿದ್ಯಾಥರ್ಿಗಳಿಗೆ ಇರುವುದರಿಂದಯೇ ದಾನ ಮಾಡುತ್ತಿರುವುದನ್ನು ನೋಡಿದರೆ ನಾನು ಮಾಡುತ್ತಿರುವಕಾರ್ಯ ಈ ಸಹೋದರಿಯ ಮುಂದೆ ಇರುವೆಗೆ ಸಮಾನ ಎಂದು ಕಣ್ಣೀರು ತಂದರು.
ಧಾರವಾಡ ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ ಧ್ವನಿ ಸುರಳಿ ಬಿಡುಗಡೆ ಮಾಡಿ ಮಾತನಾಡಿಛಬ್ಬಿ ದಂಪತಿಗಳ ಸೇವೆ ಮೆಚ್ಚುವಂತದ್ದು ಹಿಂತಾ ದುಃಖದಲ್ಲೂ ಸಹ ಮಗನ ನೆನೆದು ಹಾಡುಗಳನ್ನ ತಾವೇ ರಚಿಸಿ ತಾವೇ ಹಾಡಿರುವುದುಒಬ್ಬ ಮಹಾನ್ತಾಯಿ ಎಂದು ಹೇಳಬಹುದು ಎಂದರು.
ಸಾನಿಧ್ಯ ವಹಿಸಿದ ಪುಣ್ಯಸಾಗರ ಮಹಾರಾಜರು ಪ್ರವಚನ ನೀಡಿ ಇಂತಹ ಕಾರ್ಯಕ್ರಮ ಮೆಚ್ಚುವಂತದ್ದು ಮರಣ ಹೊಂದಿದರೆಂದು ರೋಧಿಸುತ್ತಾ ಸಂಕಟ ಪಡುವುದರಲ್ಲಿ ಅರ್ಥವಿಲ್ಲ ನರಕಾಯು ಬಂದ ವಾಗುತ್ತದೆ ಮರಣ ಹೊಂದಿದವರ ಸ್ಮರಿಸಿ ಅವರ ಒಳ್ಳೆಯ ಗುಣಗಳ ನಡತೆಗಳನ್ನು ಅರಿತು ಆ ಕಾರ್ಯದಲ್ಲಿ ಅವರನ್ನ ಕಾಣುತ್ತಾ ಹೋದಾಗ ಆತ್ಮ ಮೋಕ್ಷ ಹೊಂದಲು ಸಾಧ್ಯ ಎಂದು ಹೇಳಿದರು.
ಸಂಸ್ಥೆ ಅಧ್ಯಕ್ಷ ಭಾರತಿ ಛಬ್ಬಿ ಅಧ್ಯಕ್ಷೀಯ ನುಡಿಗಳನ್ನು ಆಡಿದರು. ಬಿ ಎ ಪಾಟೀಲ್, ಧರಣೇಂದ್ರ ಜವಳಿ, ಶಶಿಧರ್ ಎಲಿಗಾರ್ ಸಮಾಜರತ್ನ ಪ್ರಶಸ್ತಿ, ಸುರೇಂದ್ರಪ್ಪ ಹುಲ್ಲಂಬಿಯವರಿಗೆ ಸಂಗೀತರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಿವೃತ್ತ ಯೋಧರಿಗೆ ಸನ್ಮಾನಿಸಲಾಯಿತು. ಎಸ್ಎಲ್ಸಿ ವಿದ್ಯಾಥರ್ಿಗಳಿಗೂ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಗೌರವಾಧ್ಯಕ್ಷ ಚಂದ್ರಕಾಂತ್ ಛಬ್ಬಿ, ಎಸ್ಎನ್ ಮುಗಳಿ, ಬಸವರಾಜ್ ಗೊಬ್ಬಿ, ವಾಯ್ ವ್ಹಿ ಸುಬ್ಬಾರೆಡ್ಡಿ, ಡಾ.ಶಾಂತ್ಗೌಡ ಜಕ್ಕನಗೌಡ್ರ, ಈರಣ್ಣ ಚೌಟಿ, ಶಶಿಕಾಂತ್ ಹಿತ್ತಲಕೇರಿ, ರವಿ ಪಾಸಾ, ಅನಂತಪ್ಪ ಚಬ್ಬಿ, ಯಶೋಧ ಅಂಗಡಿ, ಶಿವಬಸವ ಬಣಕಾರ್, ನಾಗರಾಜ್ಚಬ್ಬಿ, ಅಜಿತ್ ಹಾವೇರಿ, ವರ್ಧಮಾನ್ಛಬ್ಬಿ ಭಾರತಿ ಜೈಪಾಲ್ಛಬ್ಬಿ, ಜ್ಯೋತಿ ವಿ ಮಂಟಗಣಿ, ಸುಮಾ ಹಾವೇರಿ, ಅವಿನಾಶ್ ಮಂಟಗಣಿ, ಸುಜಾತ ಹಡಗಲಿ ನಿರೂಪಿಸಿದರು. ವರ್ಧಮಾನ್ಚಬ್ಬಿ ಸ್ವಾಗತಿಸಿದರು, ಅನನ್ಯ ಜೊತೆ ಅಪ್ಪನವರ ಪ್ರಾರ್ಥಿಸಿದರು