ಬೆಳಗಾವಿ

ಕಬ್ಬಿನ ಎಫ್‌ಆರ್‌ಪಿ ದರದಂತೆ ಪೂರ್ಣ ಪಾವತಿಗೆ ರೈತ ಸಂಘದ ಆಗ್ರಹ

ಕಬ್ಬಿನ ಎಫ್‌ಆರ್‌ಪಿ ದರದಂತೆ ಪೂರ್ಣ ಪಾವತಿಗೆ ರೈತ ಸಂಘದ ಆಗ್ರಹ



ಬೆಳಗಾವಿ 16 : ಕಬ್ಬು ಬೆಳೆಗಾರರಿಗೆ ಸಿಗಬೇಕಾದ ಎಫ್‌ಆರ್‌ಪಿ ಹಣದ ಕುರಿತು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಮಿತಿ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಿತು. ಕಬ್ಬಿನ ಎಫ್‌ಆರ್‌ಪಿ  ದರ, ಕಟಾವು ಹಾಗೂ ಸಾಗಾಣಿಕೆ ವೆಚ್ಚ ಕಡಿತದ ಬಳಿಕ ರೈತರಿಗೆ ಪಾವತಿಸಬೇಕಾದ ಮೊತ್ತದ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಎಫ್‌ಆರ್‌ಪಿ ದರದಂತೆ ರೈತರಿಗೆ ಪೂರ್ಣ ಪ್ರಮಾಣದ ಹಣ ಪಾವತಿಸಬೇಕು ಎಂದು ಸಂಘಟನೆ ಆಗ್ರಹಿಸಿತು. ಕಳೆದ ಸಾಲಿನಲ್ಲಿ ಬೆಳಗಾವಿ ಜಿಲ್ಲೆಯ ವಿವಿಧ ಸಕ್ಕರೆ ಕಾರ್ಖಾನೆಗಳಲ್ಲಿ ರೈತರಿಗೆ ಪಾವತಿಯಾಗಬೇಕಾದ ಮೊತ್ತದ ಕುರಿತು ಸಭೆಯಲ್ಲಿ ಪ್ರಶ್ನೆ ಎತ್ತಲಾಯಿತು. ಈ ವರ್ಷವೂ ಈಖಕ ಪಾವತಿಯಲ್ಲಿ ಯಾವುದೇ ವ್ಯತ್ಯಾಸವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘಟನೆ ಒತ್ತಾಯಿಸಿದೆ. ರೈತರ ಹಿತದೃಷ್ಟಿಯಿಂದ ನಿಗದಿತ ಎಫ್‌ಆರ್‌ಪಿ  ದರದಂತೆ ಹಣ ಪಾವತಿಸುವಂತೆ ಸಂಬಂಧಪಟ್ಟ ಸಕ್ಕರೆ ಕಾರ್ಖಾನೆಗಳಿಗೆ ಸೂಚನೆ ನೀಡಬೇಕು ಎಂಬುದು ಸಭೆಯ ಪ್ರಮುಖ ಆಗ್ರಹವಾಗಿತ್ತು. 


ಸುದ್ದಿ ಓದಿ