ಸುಸಜ್ಜಿತ ನೌಕರರ ಭವನ ನಿರ್ಮಾಣಕ್ಕೆ ವಂತಿಕೆ ನೀಡಿ: ಜಿಲ್ಲಾಧ್ಯಕ್ಷ ಲಮಾಣಿ
ಶಿರಹಟ್ಟಿ ; ಬೆಳ್ಳಟ್ಟಿ ಗ್ರಾಮದ ಯೋಗಿ ವೇಮನ ಸಂಸ್ಥೆಯಲ್ಲಿ ಸಂಸ್ಥೆಯ ಅಧ್ಯಕ್ಷೆ ದೀಪಾ ಎಂ ಮರಡ್ಡಿ ಇವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಜಿಲ್ಲಾ ಘಟಕ ಗದಗ ಹಾಗೂ ತಾಲೂಕ ಘಟಕ ಶಿರಹಟ್ಟಿ ತಾಲೂಕಾ ಸಭಾ ಭವನ ಹಾಗೂ ಕಾರ್ಯಾಲಯ ಕಟ್ಟಡ ನಿಮರ್ಾಣದ ವಂತಿಕೆ ಸಂಗ್ರಹಿಸಲು ಸಭೆಯನ್ನು ನೆರವೇರಿಸಲಾಯಿತು.
ಈ ಸಭೆಯಲ್ಲಿ ಜಿಲ್ಲಾಧ್ಯಕ್ಷ ಎಂ ಕೆ ಲಮಾಣಿ ಹಾಗೂ ತಾಲೂಕ ಅಧ್ಯಕ್ಷ ಎಚ್. ಟಿ. ಬಿಜ್ಜೂರ ಅವರು ಸುಸಜ್ಜಿತ ನೌಕರರ ಭವನ ನಿರ್ಮಾಣ ಮಾಡಲು ದೇಣಿಗೆಯನ್ನು ನೀಡಲು ಎಲ್ಲ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ವಿನಂತಿಸಿದರು.
ಶಾಲಾ ಮುಖ್ಯೋಪಾಧ್ಯಾಯರಾದ ಅರ್ಜುನ್ ಮಾದರ ಹಾಗೂ ಶಿಕ್ಷಕರಾದ ಎಂ ಸಿ ಜಕ್ಕಲಿ, ಎ ಜೆ ಕುದರೆಹಾಳ, ಎಸ್.ಎಸ್ ಹೂಗಾರ, ಆಂಜನೇಯ ಯಡಿಯಾಲ, ನವೀನ್ ಬಸವರೆಡ್ಡಿ ಇದ್ದರು