ಅಭಿವೃದ್ಧಿ ಕಾರ್ಯದಿಂದ ಆರ್ಥಿಕ ಸದೃಢತೆ: ನಡಹಳ್ಳಿ
ಮುದ್ದೇಬಿಹಾಳ: ಅಭಿವೃದ್ಧಿ ಕಾರ್ಯಗಳಿಂದಲೇ ಮತಕ್ಷೇತ್ರವು ಆರ್ಥಿಕವಾಗಿ ಸದೃಢವಾಗುವುದು ಸಾಧ್ಯವಿದೆ ಎಂದು ಶಾಸಕ, ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು. ಪಟ್ಟಣದ ಗಣೇಶನಗರ, ಮಾರುತಿನಗರ ಬಡಾವಣೆಯಲ್ಲಿ ಲೋಕೋಪಯೋಗಿ ಇಲಾಖೆಯಡಿ ತಲಾ 2 ಕೋಟಿ ಮತ್ತು 44.95 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸಿಸಿ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಅಭಿವೃದ್ಧಿಯೇ ನನ್ನ ಮೂಲ ಮಂತ್ರವಾಗಿದೆ. ಅಭಿವೃದ್ಧಿ ಹೇಗೆ ಮಾಡಿಸಿಕೊಳ್ಳಬೇಕು, ಜನಪ್ರತಿನಿಧಿಗಳನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವ ಜಾಣತನ ಜನರಲ್ಲಿ ಬರಬೇಕು. ಇವತ್ತು ಮುದ್ದೇಬಿಹಾಳ ಪಟ್ಟಣ ಎಷ್ಟು ಬದಲಾಗಿದೆ ಅನ್ನೋದರ ಸಾಕ್ಷಾತ್ ಅನುಭವ ಪಡೆದುಕೊಳ್ಳಲು ಒಂದು ಬಾರಿ ಮುಖ್ಯ ರಸ್ತೆಯಲ್ಲಿ ಹಗಲು ಮತ್ತು ರಾತ್ರಿ ಸಂಚರಿಸಿ ನೋಡಿ ಆಗ ಅಭಿವೃದ್ಧಿ ಅಂದರೇನು ಅನ್ನೋದು ಗೊತ್ತಾಗುತ್ತದೆ ಎಂದು ಟೀಕಾಕಾರರಿಗೆ ಟಾಂಗ್ ನೀಡಿದ ಅವರು, ಯಾವುದೇ ಅಭಿವೃದ್ಧಿ ಮಾಡಬೇಕಾದರೂ ಮೊದಲು ಮೂಲ ಸೌಕರ್ಯ ಬಲಪಡಿಸಬೇಕು. ಅದನ್ನು ನಾನೀಗ ಮಾಡಿದ್ದೇನೆ. ನನ್ನ ಜವಾಬ್ಧಾರಿ ಅರಿತುಕೊಂಡು ಸಾಧ್ಯವಾದಷ್ಟು ವೇಗವಾಗಿ ಕೆಲಸ ಮಾಡಿದ್ದೇನೆ. ನಮ್ಮೊಳಗೆ ಸಮಾನತೆ ತರುವ ಕೆಲಸ ಆಗಬೇಕು. ಅಭಿವೃದ್ಧಿ ಕುರಿತ ಚರ್ಚೆಗಳು ಹೆಚ್ಚಾಗಬೇಕು. ಆಡಿಕೊಳ್ಳುವುದು, ಸುಳ್ಳನ್ನು ನಂಬುವುದು, ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯುವುದು, ಟೀಕೆ ಮಾಡುವುದು ಇವುಗಳನ್ನೆಲ್ಲ ಬಿಟ್ಟು ಅಭಿವೃಧ್ದಿಗಾಗಿ ನಾವೇನು ಮಾಡಬೇಕು ಅನ್ನೋದರ ಕುರಿತು ಚಿಂತನೆ, ಚರ್ಚೆ ನಡೆಯಬೇಕು ಎಂದರು. ಶೋಭಾತಾಯಿ ಶರಣಮ್ಮನವರು ಸಾನಿಧ್ಯ ವಹಿಸಿದ್ದರು. ಪುರಸಭೆ ಸದಸ್ಯ ಸಂಗಮ್ಮ ದೇವರಳ್ಳಿ, ಭಾರತಿ ಪಾಟೀಲ, ಬಸವರಾಜ ಮುರಾಳ, ಸದಾಶಿವ ಮಾಗಿ, ಪ್ರಸನ್ನಕುಮಾರ ಮಠ, ರಾಜಶೇಖರ ಹೊಳಿ, ಪಿಡಬ್ಲೂಡಿ ಎಇಇ ಆರ್.ಎಂ.ಹುಂಡೇಕಾರ, ಪಿಡಬ್ಲೂಡಿ ಇಂಜಿನೀಯರ್ ಸಂದೀಪ, ಬಿ.ವಿ.ಮಠ, ಹುಲಿಗೇಶ ಈಳಗೇರ, ಸಿ.ಎನ್.ಪೂಜಾರಿ, ಮಹಾಂತಗೌಡ ಬಿರಾದಾರ ವಕೀಲರುಮ ಡಾ.ಆರ್.ಎಚ್.ಸಜ್ಜನ, ಹಣಮಂತ ಮಡಿವಾಳರ, ರಾಜು ಬಳ್ಳೊಳ್ಳಿ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುಗರ್ಿ, ವಿಕ್ರಮ್ ಓಸ್ವಾಲ, ಬಿಜೆಪಿ ಹಿಂದುಳಿದ ಮೋರ್ಚಾ ಅಧ್ಯಕ್ಷ ಲಕ್ಷ್ಮಣ ಬಿಜ್ಜೂರ, ಎಂ.ಸಿ.ವಡ್ಡೋಡಗಿ, ನಾಯ್ಕೋಡಿ, ಗುತ್ತಿಗೆದಾರ ಬಸನಗೌಡ ಸೇರಿ ಹಲವರು ಪಾಲ್ಗೊಂಡಿದ್ದರು. ಮಾಜಿ ಸೈನಿಕರ ಸಂಘದ ಅಧ್ಯಕ್ಷ ಆರ್.ಐ.ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು.