11ನೇ ಏಷ್ಯಾ ಫೆಸಿಫಿಕ್ ಅಂತರ ರಾಷ್ಟ್ರೀಯ ಸಮ್ಮೇಳದಲ್ಲಿ ಗುವಿವಿಯ ಡಾ. ಚಂದ್ರಕಾಂತ ಬಿರಾದಾರ ಭಾಗಿ

11ನೇ ಏಷ್ಯಾ ಫೆಸಿಫಿಕ್ ಅಂತರ ರಾಷ್ಟ್ರೀಯ ಸಮ್ಮೇಳದಲ್ಲಿ  ಗುವಿವಿಯ ಡಾ. ಚಂದ್ರಕಾಂತ ಬಿರಾದಾರ ಭಾಗಿ

ಕಲಬುರಗಿ 13: ಗುಲಬರ್ಗಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಯೋಗ ಶಿಕ್ಷಣದ ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರಕಾಂತ ಬಿರಾದಾರ ಮಲೇಷಿಯಾದಲ್ಲಿ ಜರುಗಲಿರುವ 11ನೇ ಏಷ್ಯಾ ಪೆಸಿಫಿಕ್ ಕಾನ್ಪರೆನ್ಸ್‌ ಆಫ್ ಏಕ್ಸಸೈಜ್ ಅಂಡ್ ಸ್ಪೋರ್ಟ್ಸ ಸೈನ್ಸ್‌ ಅಂತರ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.  

ಮಲೇಷಿಯಾ ದೇಶದ ಕುಚಿಂಗ್ ನಗರದಲ್ಲಿ ಡಿ. 16 ರಿಂದ 19 ರವರೆಗೆ ನಡೆಯಲಿರುವ ಸಮ್ಮೇಳನಕ್ಕೆ ಆಯ್ಕೆಯಾಗಿರುವ ಇವರು ‘ದಿ ಎಫೆಕ್ಟ ಆಪ್ ಯೋಗಾಸನಾಸ್ ಆನ್ ಜಾಯಿಂಟ್ ಪ್ಲೆಕ್ಸಿಬಿಲಿಟಿ ಅಮಾಂಗ್ ಕಾಲೇಜಿಯೇಟ್ ಸ್ಟೂಡೆಂಟ್ಸ್‌’ ವಿಷಯ ಕುರಿತು ಪ್ರಬಂಧ ಮಂಡಿಸಲಿದ್ದಾರೆ. 


ಸುದ್ದಿ ಓದಿ