ಡಾ. ಎ.ಪಿ.ಜೆ. ಅಬ್ದುಲ್ ಕಲಾಂರ ಜಯಂತಿ ಆಚರಣೆ
ಬಳ್ಳಾರಿ 27: ನಗರದ ಕರ್ನಾಟಕ ಕ್ರಿಯಾಶೀಲಾ ಪದವೀಧರರ ವೇದಿಕೆಯ ಕಛೇರಿಯಲ್ಲಿ ಡಾ.ಎಪಿಜೆ ಅಬ್ದುಲ್ ಕಲಾಂ ರವರ 92ನೇ ಜಯಂತಿಯನ್ನು ಆಚರಿಸಲಾಯಿತು.
ನಂತರ ರಾಜ್ಯ ಗೌರವಧ್ಯಾಕ್ಷ ಎಲ್.ರಮೇಶ್ ರವರು ಮಾತನಾಡಿ ಭಾರತದ ಕ್ಷಿಪಣಿ ಮನುಷ್ಯ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಎಪಿಜೆ ಅಬ್ದುಲ್ ಕಲಾಂ ಭಾರತೀಯ ಇತಿಹಾಸದಲ್ಲಿ ಅತ್ಯಂತ ಪ್ರೀತಿಯ ಮತ್ತು ಗೌರವಾನ್ವಿತ ವ್ಯಕ್ತಿಗಳಲ್ಲಿ ಒಬ್ಬರು ಆಗಿದ್ದಾರೆ. ಇವರು ಅಕ್ಟೋಬರ್ 15, 1931 ರಂದು ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದ ಕಲಾಂ ಅವರು ವಿಜ್ಞಾನಿ, ಎಂಜಿನಿಯರ್ ಯಾಗಿದ್ದರು. ಅವರು ಭಾರತದ ಕ್ಷಿಪಣಿ ಮತ್ತು ಬಾಹ್ಯಾಕಾಶ ಕಾರ್ಯಕ್ರಮಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದಾಗ್ಯೂ, ಎಪಿಜೆ ಅಬ್ದುಲ್ ಕಲಾಂ ಅವರ ವಿನಮ್ರ ನಡವಳಿಕೆ, ಶಿಕ್ಷಣ ಮತ್ತು ಯುವಕರ ಬದ್ಧತೆ ಮತ್ತು ಅವರ ದೇಶಕ್ಕಾಗಿ ಅವರ ಆಳವಾದ ಭಕ್ತಿಗೆ ಹೆಸರುವಾಸಿಯಾಗಿದ್ದಾರೆ ಎಂದು ಹೇಳಿದರು.ವೇದಿಕೆಯ ರಾಜ್ಯಾಧ್ಯಕ್ಷ ಡಿ.ರಂಗಯ್ಯ ರವರು ಮಾತನಾಡಿ ಬಡ ಕುಟುಂಬದಿಂದ ಬಂದವರು ಡಾ.ಎಪಿಜೆ ಅಬ್ದುಲ್ ಕಲಾಂ ಎಂದೇ ಖ್ಯಾತರಾಗಿರುವ ಆವುಲ್ ಫಕೀರ್ ಜಲಾಲುದ್ದೀನ್ ಅಬ್ದುಲ್ ಕಲಾಂ. ದೇಶದ ಮಿಸೈಲ್ ಮ್ಯಾನ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ಕಲಾಂ, ಭಾರತದಲ್ಲಿ ವೈಜ್ಞಾನಿಕ ಕ್ರಾಂತಿಗೆ ನಾಂದಿ ಹಾಡಿದವರು. ಹಾಗೂ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿ ದೇಶದ ಏಳ್ಗೆಗೆ ನಿರಂತರವಾಗಿ ದುಡಿದವರು. ತಮ್ಮಲ್ಲಿರುವ ಜ್ಞಾನವನ್ನು ಮುಂದಿನ ಪೀಳಿಗೆಗೆ ದಾಟಿಸಬೇಕೆಂಬ ಅದಮ್ಯ ಉತ್ಸಾಹ ಹೊತ್ತು ಅದನ್ನು ಸದಾ ಪಾಲಿಸಿಕೊಂಡು ಬಂದ ಕಲಾಂ ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ. ಈ ಪುಸ್ತಕಗಳನ್ನು ಪ್ರತಿಯೊಬ್ಬ ಭಾರತೀಯರು ಓದಲೇಬೇಕು ವಿಂಗ್ಸ್ ಆಫ್ ಫಯರ್, ಇಗ್ನೈಟೆಡ್ ಮೈಂಡ್ಸ್ , ಇನ್ಡೋಮಿಟೇಬಲ್ ಸ್ಪಿರಿಟ್, ಇಂಡಿಯಾ 2020, ಟರ್ನಿಂಗ್ ಪಾಯಿಂಟ್ಸ್ ಎಂದು ಹೇಳಿದರು.
ರಾಜ್ಯ, ಕಾರ್ಯಧ್ಯಕ್ಷ ಲಕ್ಷ್ಮಣ ಎಸ್ ಭಂಡಾರಿ, ಉಪಾಧ್ಯಕ್ಷ ಹೆಚ್.ಹುಲುಗಪ್ಪ, ಖಜಾಂಚಿ ಗುರಿಕಾರ ರಂಗಣ್ಣ, ಸಹ ಕಾರ್ಯದರ್ಶಿ ಶಂಕರ್, ಕಾನೂನು ಸಲಹೆಗಾರ ರಾಜು, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜು ನ ಇನ್ನೂ ಹಲವಾರು ಸದಸ್ಯರುಗಳು ಉಪಸ್ಥಿತರಿದ್ದರು.