ಶಿಗ್ಗಾವ್

ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ

ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ

ಲೋಕದರ್ಶನ ವರದಿ

ಶಿಗ್ಗಾವಿ 10: ಮತ್ತೊಬ್ಬರಿಗೆ ಸಹಾಯ ಮಾಡುವದರಿಂದ ನನ್ನ ಜೀವನ ಸಂತೋಷವಾಗಿದೆ, ಗಳಿಸಿದ್ದನ್ನು ಬಿಟ್ಟು ಹೋಗುವ ಬದಲು ಹಂಚಿ ಹೋಗಬೇಕೆಂದು ಈ ಕಾರ್ಯ ಮಾಡುತ್ತಿದ್ದೇನೆ, ಜನತೆ ತೊರುವ ಪ್ರೀತಿ, ವಿಶ್ವಾಸ ಸಹಾಯ ಮಾಡಲು ಪ್ರೇರಣೆಯಾಗುತ್ತಿದೆ, ಜನತೆ ರಾಜಕೀಯಕ್ಕೆ ಬನ್ನಿ ಎಂಬ ಒತ್ತಡ ಹಾಕುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರ ಅಭಿಪ್ರಾಯ ಪಡೆದುಕೊಂಡು ರಾಜಕೀಯ ನಿರ್ಧಾನ ಮಾಡುತ್ತೇನೆ ಎಂದು ಸಿ ಬಿ ಯಲಿಗಾರ ಸೇವಾ ಸಂಸ್ಥೆಯ ಅಧ್ಯಕ್ಷ ಶಶಿಧರ ಯಲಿಗಾರ ಹೇಳಿದರು.

ಪಟ್ಟಣದ ರಂಭಾಪೂರಿ ಕಾಲೇಜಿನ ಪಕ್ಕದ ಜಮೀನಿನಲ್ಲಿ ಶಶಿಧರ ಯಲಿಗಾರ ಅವರ ಅಭಿಮಾನಿಗಳ ವತಿಯಿಂದ ಹಮ್ಮಿಕೊಂಡ ತಮ್ಮ 58 ನೇ ಹುಟ್ಟು ಹಬ್ಬದ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಹಾಗೂ ಎನ್ಎಸ್ಎಸ್ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಡಿಮೆ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳು ಇಂದು ಭಯಪಡುವ ಅವಶ್ಯಕತೆವಿಲ್ಲ, ಸಾಧಿಸುವ ಛಲ ಒಂದಿದ್ದರೆ ಸಾಕು, ಮಕ್ಕಳನ್ನು ಹಾಳು ಮಾಡುವ ಉದ್ದೇಶ ಇದ್ದರೆ ಮಕ್ಕಳಿಗೆ ಆಸ್ತಿ ಮಾಡಿ, ಮಕ್ಕಳಿಗೆ ಉತ್ತಮ ಭವಿಷ್ಯ ಕಟ್ಟಬೆಂಕೆಂದರೆ ದುಡಿಯುವದನ್ನು ಕಲಿಸಿ, ಇಂದು ಶ್ರೀಮಂತರು, ಬಡವರನ್ನು ನೋಡುವ ದೃಷ್ಟಿಕೋನ ಬದಲಾಗಬೇಕಿದೆ ಎಂದರು.

ಕೊರೊನಾ ಬಂದು ಬಹಳಷ್ಟು ಬದಲಾವಣೆಗಳನ್ನು ನನ್ನಲ್ಲಿ ಮಾಡಿಸಿದೆ, ಸಾವು ಎಲ್ಲರಿಗೂ ಒಮ್ಮೆ ಬರುತ್ತದೆ, ನನಗೂ ಬಂದಿತ್ತು ಆದರೆ ದೇವರ ಆಶೀವರ್ಾದ ಜನರ ಪ್ರೀತಿಗೆ ಸೇವೆ ಮಾಡುವುದಿದೆ ಎಂದು ಮರಳಿ ಪಾರಾಗಿ ಬಂದಿದ್ದೇನೆ, ಕೋರೋನಾ ಸಂದರ್ಭ ಸಮಾಜ ಮತ್ತು ಜನರ ಸೇವೆ ಮಾಡುವ ಅವಕಾಶ ನೀಡಿದೆ,  ಆದರಿಂದ  ನಾನು ಜೀವದ ಹಂಗನ್ನು ತೊರೆದು ಸೇವೆ ಸಲ್ಲಿಸಿದ ವೈದ್ಯರಿಗರ ಸನ್ಮಾನ ಮಾಡಿದ್ದೆನೆ, ಗಳಿಸಿದ್ದನ್ನು ಬಿಟ್ಟು ಹೋಗದೆ ಅದನ್ನು ಹಂಚಿ ಹೋಗಬೇಕು ಎನ್ನುವದು ಸಂಕಲ್ಪ ಮಾಡಿದ್ದೆನೆ, ಪೌಷ್ಠಿಕ ಆಹಾರ ನೀಡಿದ್ದೆನೆ, ಸಂಕಷ್ಟದಲ್ಲಿ ಆಟೋ ಚಾಲಕರಿಗೆ ಆಹಾರದ ಕೀಟ್ಗಳನ್ನು ನೀಡಿದ್ದೇನೆ, ಉಚಿತ ಬಸ್ ಪಾಸ್ ವಿತರಣೆ ಮಾಡಿದ್ದೆನೆ,  ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಉದ್ದೇಶದಿಂದ ಉಚಿತ ಪುಸ್ತಕಗಳನ್ನು ವಿತರಣೆ ಮಾಡಿದ್ದೆವೆ, ಅಡಿಗೆ ಸಿಬ್ಬಂದಿಯವರಿಗೆ ಸನ್ಮಾನ, ನಿತೃತ್ತ ಸಹಾಯಕಿಯರಿಗೆ ಸಹಾಯ ಧನ ನೀಡಿದ್ದೆವೆ, ಆಶಾ ಕಾರ್ಯಕರ್ತೆ ಯರಿಗೆ ಉಡಿ ತುಂಬಿವ ಕಾರ್ಯಕ್ರಮ ಮಾಡಿದ್ದೆವೆ, ಸಕರ್ಾರಿ ಶಾಲಾ ವಿದ್ಯಾರ್ಥಿಗಳಿಗೆ ಸಹಾಯ, ಸನ್ಮಾನ ಮಾಡಿದ್ದೆವೆ, ಇವರೆಲ್ಲರೂ ತೋರುವ ಪ್ರೀತಿ ವಿಸ್ವಾಸದಿಂದ ನನಗೆ ಇನ್ನೂ ಪ್ರೇರಣೆಯಾಗುತ್ತಿದೆ ಖುಷಿಯಾಗುತ್ತಿದೆ, ಅಂಗನವಾಡಿ ಶಾಲಾ ವಿದ್ಯಾರ್ಥಿಗಳಿಗೆ ಅಂಕಲೀಪಿಗಳನ್ನು ವಿತರಿಸಿದ್ದೆವೆ, ಮಕ್ಕಳಿಗೆ ದುಡಿಯುವ ಮನೋಭಾವ ಬೆಳಸಬೇಕಿದೆ, ಬಡವರ ಮನಸ್ಸುನ್ನು ಅರಿತುಕೋಳ್ಳಬೇಕಿದೆ, ಬಡವರ ಸ್ವಾಭಿಮಾನವನ್ನು ಅರಿತುಕೊಳ್ಳಬೇಕಿದೆ, ಗಂಗೇಬಾವಿಯಲ್ಲಿ ರಿಸಾರ್ಟ ಮಾಡುತ್ತಿದ್ದೆನೆ,  ಟಿಕೆ ಟಿಪ್ಪಣಿಗಳು ಬಂದವು ಅವನ್ನು ಲೇಕ್ಕಿಸದೆ ದೇಶದಲ್ಲಿ ಅತ್ಯುನ್ನತ ರೆಸಾರ್ಟ ಮಾಡುವ ಸಂಕಲ್ಪ ಮಾಡಿದ್ದೆನೆ, ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೆವೆ,ವಿದ್ಯಾರ್ಥಿನಿಯರಿಗೆ ಕೆಲಸ ಕೊಡುವ ಯೋಜನೆಗಳನ್ನು ಮಾಡುತ್ತಿದ್ದೆವೆ, ಡಿಸೆಂಬರ ನಲ್ಲಿ ನನ್ನ ರೆಸಾರ್ಟ ಉದ್ಘಾಟನೆಗೊಳ್ಳುತ್ತಿದೆ, ಗುಡಿ ಕೈಗಾರಿಗೆ ಕೆಲಸಗಳನ್ನು ಮಾಡಿಸುವ ಕೆಲಸ ಮಾಡಿಸಲಾಗತ್ತದೆ, ಅದರಲ್ಲಿನ ಲಾಭವನ್ನು ಅಲ್ಲಿ ದುಡಿಯುವ ತಾಯಂದಿಗೆ ಹಂಚುವ ಕೆಲಸವನ್ನು ಮಾಡಲಾಗುತ್ತದೆ, ವಾಟರ್ ಪ್ಲಾಂಟ್ ಮೂಲಕ ನೀರಿನ ಮಾರಾಟಕ್ಕೆ 300 ಜನರನ್ನು ತೆಗೆದುಕೊಳ್ಳಲಾಗುತ್ತದೆ, ಉದ್ಯೋಗದ ಜೊತೆಗೆ ಅದರ ಲಾಭದಲ್ಲಿ ಪಾಲನ್ನು ನೀಡುವ ಯೋಜನೆಯನ್ನು ಮಾಡಿದ್ದೆವೆ, ಮುಂದಿನ ವರ್ಷ 5000 ಜನರಿಗೆ ಉದ್ಯೋಗ ನೀಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು. 

ಕಾರ್ಯಕ್ರಮದಲ್ಲಿ ಅಚ್ಚುಕಟ್ಟಾದ ಊಟದ ವ್ಯವಸ್ಥೆ ಮಾಡಲಾಯಿತ್ತು, ಬಂಕಾಪೂರ ಅರಳೆಲೆಮಠದ ರೇವಣಸಿದ್ದೇಶ್ವರ ಮಹಾಸ್ವಾಮಿಗಳು, ಶಿಗ್ಗಾವಿ ವಿರಕ್ತಮಠ ಸಂಗನಬಸವ ಮಹಾಸ್ವಾಮಿಗಳು, ಹಿರೇಮಣಕಟ್ಟಿ ಮುರಗೇಂದ್ರ ಮಠದ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿದ್ಯ ವಹಿಸಿಕೊಂಡಿದ್ದರು. ಮಾಜಿ ಸಚಿವ ವಿನಯ್ ಕುಲಕರ್ಣಿ , ಮಾಜಿ ಶಾಸಕ ಅಜ್ಜಂಪೀರ್ ಎಸ್ ಖಾದ್ರಿ, ಶಣ್ಮುಖಪ್ಪ ಶಿವಳ್ಳಿ, ಬಸವರಾಜ ಹಾವೇರಿ, ಶಂಬು ಆಜೂರ, ಹಾವೇರಿ ನಗರಸಭೆ ಅದ್ಯಕ್ಷ ಸಂಜೀವಕುಮಾರ ನೀರಲಗಿ, ನಾಗೇಂದ್ರಪ್ಪ ಕಡಕೋಳ, ಡಾ. ಅರಳೆಲೆಮಠ, ಸುನಿತಾ ಯಲಿಗಾರ ಸೇರಿದಂತೆ ಪಕ್ಷಾತೀತ ವಿವಿಧ ಪಕ್ಷದ ಮುಖಂಡರು, ಕನ್ನಡಪರ ಹೋರಾಟಗಾರರು, ರೈತ ಮುಖಂಡರು, ವಕೀಲರು, ಸಮಾಜ ಸೇವಕರು, ಜನಪ್ರತಿನಿಧಿಗಳು ಹಾಗೂ ಕುಟುಂಬಸ್ಥರು, ಆಶಾ ಕಾರ್ಯಕರ್ತೆ ಯರು, ವಿವಿಧ ಶಾಲೆಯ ವಿದ್ಯಾಥರ್ಿಗಳು ಸೇರಿದಂತೆ ಶಶಿಧರ ಅಭಿಮಾನಿ ಬಳಗದ ಸದಸ್ಯರು  ಭಾಗಿಯಾಗಿದ್ದರು, ನಿವೃತ್ತ ಶಿಕ್ಷಕ ಎನ್ ಎಸ್ ಬರದೂರ ಆಶಯ ನುಡಿ ನುಡಿದರು,ನಿರ್ದೇಶಕ  ಬಸವರಾಜ ಕುರಗೋಡಿ ಸ್ವಾಗತಿಸಿದರು 

ಸುದ್ದಿ ಓದಿ