ಶಶಿಧರ ಹುಟ್ಟು ಹಬ್ಬದ ನಿಮಿತ್ತ ನೋಟ ಬುಕ ವಿತರಣೆ
ಲೋಕದರ್ಶನ ವರದಿ
ಶಿಗ್ಗಾವಿ 08: ನ. 9ರಂದು ಸಿ ಬಿ ಯಲಿಗಾರ ಸೇವಾ ಸಂಸ್ಥೆಯ ಅಧ್ಯಕ್ಷ ಶಶಿಧರ ಯಲಿಗಾರ ಅವರ ಹುಟ್ಟು ಹಬ್ಬದ ನಿಮಿತ್ತ ಪಟ್ಟಣದ ರಂಭಾಪೂರಿ ಕಾಲೇಜು ಪಕ್ಕದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ರಂಭಾಪುರಿ ಕಾಲೇಜನ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ನೋಟ ಬುಕ್ ವಿತರಣೆ ಮತ್ತು ಎನ್.ಎಸ್.ಎಸ್ ಕ್ಯಾಂಪ್ನಲ್ಲಿ ಭಾಗವಹಿಸಿದ 85 ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಶಶಿಧರ ಯಲಿಗಾರ ಹೇಳಿದರು.
ತಾಲೂಕಿನ ಗಂಗೇಬಾವಿಯ ತಮ್ಮ ರೆಸಾರ್ಟನಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯನ್ನುದ್ದೆಶಿಸಿ ಮಾತನಾಡಿದ ಅವರು, ಶಿಗ್ಗಾವಿ ಪಟ್ಟಣದ ಅಂಕಲಕೋಟಿ ಸರ್ಕಾರಿ ಪ್ರಥಮ ದರ್ಜಿ ಕಾಲೇಜು ಮತ್ತು ಸವಣೂರಿನ ಸಿಂದೂರ ಸರ್ಕಾರಿ ಪ್ರಥಮ ದರ್ಜಿ ಕಾಲೇಜನಲ್ಲಿ ನಮ್ಮ ಸಂಸ್ಥೆಯಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿ ಸಿಲಾಗಿದ್ದು ನ.9 ರಂದು ಉದ್ಘಾಟಿಸಲಾಗುವುದು ಎಂದರು.
ಅಂದು ಬಂಕಾಪೂರ ಅರಳಲೇಮಠದ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯರ ಸಾನಿಧ್ಯದಲ್ಲಿ ಹಿರೇಮಣಕಟ್ಟಿ, ಗಂಜೀಗಟ್ಟಿ, ದೊಡ್ಡಹುಣಸೆಮಠ ಮಠದ ಸ್ವಾಮಿಗಳು ಭಾಗವಹಿಸಲಿದ್ದಾರೆ. ಅಂದು ಸಂಜೆ ನನ್ನ ಹುಟ್ಟುರಾದ ಹುರಳಿಕೊಪ್ಪಿಯಲ್ಲಿ 250 ಕಲಾವಿದರಿಗೆ ಸನ್ಮಾನ ಮತ್ತು ಕಲಿಯುಗದಲ್ಲಿ ಗರ್ಜಿ ಸಿದ ಕರ್ಣಾರ್ಜುನ' ಎಂಬ ನಾಟಕವನ್ನು ಉಚಿತವಾಗಿ ಆಯೋಜಿಸಲಾಗಿದೆ. ಹುಟ್ಟು ಹಬ್ಬಗಳ ಹೆಸರಿನಲ್ಲಿ ದುಂದು ವೆಚ್ಚ ಮಾಡುವ ಬದಲು ಅದೇ ವೆಚ್ಚವನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮತ್ತು ಕಲಾವಿದರಿಗೆ ವ್ಯಯಿಸಿದರೆ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗುತ್ತದೆ ಎನ್ನುವ ಉದ್ದೇಶ ನಮ್ಮದಾಗಿದೆ ಎಂದರು. ರೈತ ಧ್ವನಿ ಸಂಪಾದಕ ಹಾಗೂ ಕಣಾಜರ್ುನ ಚಲನಚಿತ್ರ ನಿರ್ದೇಶಕ ಬಸವರಾಜ ಕುರಗೋಡಿ ಇದ್ದರು